ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಯನ್ನು ಮುಟ್ಟಬೇಕು : ಬಿ.ಸಿ.ನಾಗೇಶ್

ತಿಪೂಟೂರು:

         ಕಟ್ಟ ಕಡೆ ವ್ಯಕ್ತಿಗೂ ಸೂರು ಸಿಗಬೇಕೆಂಬ ಸದುದ್ದೇಶದಿಂದ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಶಪಥ ಮಾಡಿದೆ ಎಂದು ಶಾಸಕ ಬಿ.ಎ ನಾಗೇಶ್ ತಿಳಿಸಿದರು,

        ತಾಲೋಕು ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2017-18 ನೇ ಸಾಲಿನ ಬಸವ ವಸತಿ ಹಾಗೂ ಹೆಚ್ಚವರಿ ಬಸವ ಯೊಜನೆ ವತಿಯಿಂದ ವಸತಿ ನಿರ್ಮಾಣ 83 ಫಲಾನುಭವಿಗಳಿಗೆ ಕಾರ್ಯ ಆದೇಶ ಪತ್ರ ವಿತರಣೆ ಹಾಗೂ ಕಂತುವಾರೂ ಸಹಾಯಧನ ಪಡೆಯಲು ಅನುಸರಿಸಬೇಕಾದ ತಾಂತ್ರಿಕ ವಿಧಾನಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇನಿಟ್ಟಿನಲ್ಲಿ ನಿವೇಶನ ಗುರ್ತಿಸುವ ಕಾರ್ಯಪ್ರಗತಿಯಲ್ಲಿದ್ದು ಇನ್ನು ಮುಂದೆ ಹೋಗಿ ಈ ನಿವೇಶನ ಕೊರತೆಯಿಂದ ಜಿ+2 ಮಾದರಿಯಲ್ಲಿ ಮನೆ ನಿರ್ಮಾಣಕ್ಕೆ ಚಿಂತನೆ ನಡೆಸುತ್ತಿದೆ, ಹೆಚ್ಚಿನ ತಂತ್ರಾಂಶವು ಮುಂದುವರೆದಿದ್ದು ಜಿ.ಪಿ.ಎಸ್ ಮೂಲಕವೇ ಫಲಾನುಭವಿಗಳ ಸಹಾಯಧನ ಪಡೆಯಬೇಕಾಗಿದೆ,

          ಫಲಾನುಭವಿಗಳು ತಾಂತ್ರಿಕತೆಯ ಬಗ್ಗೆ ಸಂಪೂರ್ಣ ಅರಿವು ಮಾಹಿತಿಯನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಯಬೇಕು ಎಂದರು. ಸರ್ಕಾರಗಳು ಬಡವರಿಗೆ, ವಸತಿರಹಿತರಿಗೆ, ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ನಿಯಮಗಳನ್ನು ಪಾಲಿಸಿ ಸವಲತ್ತು ಪಡೆಯಲು ತಿಳಿಸಿದರು, ಹೊಸ ತಂತ್ರಾಂಶಗಳನ್ನು ಅಳವಡಿಸಿರುವ ಬಗ್ಗೆ ಗೊಂದಲಕ್ಕೆ ಒಳಗಾಗದೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಹಾಯ ಪಡೆಯುವಂತೆ ತಿಳಿಸಿದರು,

           ಕಾರ್ಯಗಾರದಲ್ಲಿ ತಾಲೋಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮದನ್ ಮೋಹನ, ಗ್ರಾ.ಪಂ ಅಧ್ಯಕ್ಷ ರಂಗಸ್ವಾಮಿ, ತಾಲ್ಲೋಕು ಪಂಚಾಯಿತಿ ಸದಸ್ಯೆ ಪಾರ್ವತಮ್ಮ ಪರಪ್ಪ, ಪಿ.ಡಿ.ಓ ವೇದಮೂರ್ತಿ, ನರೇಗ ಎ.ಡಿ.ಎ ಸುನೀಲ್ ಕುಮಾರ್, ಕಾರ್ಯದರ್ಶಿ ವಾಗೀಶ್, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap