ಹೊನ್ನವಳ್ಳಿ :
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಪೋಲೀಸ್ ಕ್ವಾಟ್ರಸ್‍ನ ಹತ್ತಿರ ಪೈಪ್‍ಲೈನ್ ಹೊಡೆದುಹೋದರು ನೀರು ಪೋಲಾಗುತ್ತಿದ್ದರು ಗ್ರಾಮ ಪಂಚಾಯಿತಿ ಸಿಬ್ಬಂದಿ ಮಾತ್ರ ಇನ್ನು ನಿದ್ದೆಯ ಮಂಪರಿನಲ್ಲಿದ್ದು ಸರಿಪಡಿಸುವ ಗೋಜಿಗೆ ಹೊಗದೆ ಇದ್ದುದ್ದರಿಂದ ಇಂದು ರಸ್ತೆಯ ತುಂಬಾ ನೀರುನಿಂತಿತ್ತು.
ರಸ್ತೆಯನ್ನೇ ಮುಚ್ಚಿದ ನಿವೃತ್ತ ಪಿ.ಡಿ.ಓ: ಇನ್ನು ಇದೇ ಸ್ಥಳದಲ್ಲಿ ನಿವೃತ್ತ ಪಿ.ಡಿ.ಓ ಬಸವರಾಜು ತಮ್ಮ ಮನೆಯನ್ನು ನಿರ್ಮಿಸುವ ಸಲುವಾಗಿ ಮರಳನ್ನು ತಂದು ರಸ್ತೆಯಲ್ಲೇ ಸುರಿದು ಸಾರ್ವಜನಿಕರಿಗೆ ಓಡಾಡಲು ರಸ್ತೆಇಲ್ಲದಂತೆ ಮಾಡಿದ್ದು ಸಾರ್ವಜನಕರು ಓಡಾಡಲು ಹರಸಾಹಸ ಪಡುವಂತಾಗಿದೆ. ಇನ್ನು ಒಬ್ಬ ನಿವೃತ್ತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ಹೀಗೆ ಮಾಡಿದರೆ ಸಾರ್ವಜನಿಕರ ಕಥೆಯೇನು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
