ಬೆಂಗಳೂರು
ಸರ್ಕಾರಿ ನಿವೇಶನದ ವಿಚಾರದಲ್ಲಿ ಉಂಟಾದ ವಿವಾದದಲ್ಲಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಮಾದನಾಯಕನಹಳ್ಳಿ ಪೆÇಲೀಸರು ತೀವ್ರ ಶೋಧ ನಡೆಸಿದ್ದಾರೆ.
ನೆಲಮಂಗಲದ ಮಾಚೋಹಳ್ಳಿ ಕಾಲೋನಿಯ ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ್ (45) ಕೊಲೆಯಾದವರು ,ಖಾಲಿ ನಿವೇಶನದ ಜಾಗದಲ್ಲಿ ಹರೀಶ್ ಎಂಬಾತ ಮನೆ ನಿರ್ಮಾಣ ಮಾಡಿದ್ದನು. ಇದನ್ನು ಅಕ್ರಮ ಎಂದು ಇತ್ತೀಚಿಗೆ ಬೆಂಗಳೂರು ಉತ್ತರ ತಹಶೀಲ್ದಾರ್ ನೇತೃತ್ವದಲ್ಲಿ ಮನೆಗಳನ್ನ ತೆರವು ಮಾಡಲಾಗಿತ್ತು.
ಮನೆಗಳನ್ನು ತೆರವು ಮಾಡಲು ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ್ ಅವರೇ ಕಾರಣರಾಗಿದ್ದಾರೆ ಎನ್ನುವ ದ್ವೇಷದಿಂದ 3-4 ಮಂದಿ ಮಾಚೇನಹಳ್ಳಿ ಬಳಿ ನಿನ್ನೆ ಮಧ್ಯಾಹ್ನ 3ರ ವೇಳೆ ಲಕ್ಷ್ಮೀನಾರಾಯಣ್ ಅವರನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳೀದ ತಕ್ಷಣ ಸ್ಥಳಕ್ಕೆ ಧಾವಿಸಿದ ಮಾದನಾಯಕನಹಳ್ಳಿ ಪೊಲೀಸರು ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.ಕೊಲೆಗಾರರ ಪತ್ತೆಗೆ ಇನ್ಸ್ ಪೆಕ್ಟರ್ ಸತ್ಯನಾರಾಯಣ ನೇತೃತ್ವದ ತಂಡ ರಚನೆ ಮಾಡಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನ ಬಂಧಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ.ರಾಮ್ನಿವಾಸ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








