ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಇಳಿಮುಖ

ಬೆಂಗಳೂರು

        ನಗರದಲ್ಲಿ ಕೈಗೊಳ್ಳುತ್ತಿರುವ ಬಿಗಿ ಸಂಚಾರ ನಿಯಮಗಳಿಂದ ಕಳೆದ ವರ್ಷ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗಿವೆ

        ಕಳೆದ 2017ರಲ್ಲಿ 99,22,437 ಸಂಚಾರ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದ್ದರೆ ಈ ವರ್ಷದಲ್ಲಿ 76,67,373 ಪ್ರಕರಣ ದಾಖಲಾಗಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗಿರುವುದನ್ನು ತಿಳಿಸುತ್ತದೆ

       ವೇಗದ ವಾಹನ ಚಾಲನೆಗೆ ಕಳೆದ ವರ್ಷ,30,868 ಪ್ರಕರಣಗಳು ದಾಖಲಾಗಿತ್ತು.ಈ ವರ್ಷ 82,562 ಪ್ರಕರಣ ದಾಖಲಾಗಿವೆ. ಕುಡಿದು ವಾಹನ ಚಲಾವಣೆಗೆ ಕಳೆದ ವರ್ಷ 73,741 ಈ ವರ್ಷ 45,295 ಪ್ರಕರಣ ದಾಖಲಾಗಿವೆ.ಒಟ್ಟಾರೆ ಈ ವರ್ಷ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿದ್ದು,ಸಂಚಾರ ನಿಯಮಗಳ ಕುರಿತು ಜಾಗೃತವಾಗುತ್ತಿರುವ ಮುನ್ಸೂಚನೆ ಕಂಡುಬಂದಿದೆ.
ಸಂಚಾರ ನಿಯಮ ಉಲ್ಲಂಘನೆ ತಗ್ಗಿಸುವುದೇ ನಮ್ಮ ಮುಂದಿನ ಗುರಿಯಾಗಿದೆ.

       ಕಳೆದ ವರ್ಷಕ್ಕೆ ಹೋಲಿಸಿದರೆ ಈ ಉಲ್ಲಂಘನೆ ಪ್ರಕರಣಗಳು ಈ ವರ್ಷ ಕೊಂಚ ಇಳಿಕೆಯಾಗಿದೆ. ಮುಂದಿನ ವರ್ಷದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಗಟ್ಟುವುದೇ ನಮ್ಮ ಮುಂದಿನ ಗುರಿಯಾಗಿದೆ ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತ ಪಿ.ಹರಿಶೇಖರನ್ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap