ಗ್ರಾಹಕರ ಹಿತಕ್ಕೆ ಗ್ರಾಹಕ ಹಕ್ಕುಗಳ ಕಾಯ್ದೆ ನೆರವು

ಚಿತ್ರದುರ್ಗ:

        ಗ್ರಾಹಕರು ಕೊಂಡ ವಸ್ತುವಿನಲ್ಲಿ ಮೋಸವಾದಲ್ಲಿ ಅದರ ವಿರುದ್ದ ಪ್ರಶ್ನಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಗ್ರಾಹಕರ-ಹಕ್ಕುಗಳ ಕಾಯ್ದೆ ಸಹಕಾರಿಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್ ದಿಂಡಲಕೊಪ್ಪ ಹೇಳಿದರು.ನಗರದ ಸರಸ್ವತಿ ಕಾನೂನು ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲ ಸಂಘ ಮತ್ತು ಸರಸ್ವತಿ ಕಾನೂನು ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಪ್ರತಿಯೊಬ್ಬ ವ್ಯಕ್ತಿಯು ಗ್ರಾಹಕನಾಗಿಯೇ ಇರುತ್ತಾರೆ. ಒಂದಲ್ಲ ಒಂದು ವಸ್ತುವಿನ ಅವಶ್ಯಕತೆಯಿಂದ ಒಬ್ಬರಿಂದ ಹಣದ ರೂಪದಲ್ಲಿ ಪಡೆಯುವ ವ್ಯವಸ್ಥೆಗೆ ಗ್ರಾಹಕರಾಗಿರುತ್ತಾರೆ. ಕೊಂಡುಕೊಂಡ ವಸ್ತುವಿನಲ್ಲಿ ಬೆಲೆಗೆ ತಕ್ಕ ಗುಣಮಟ್ಟ ಇಲ್ಲದೇ ಹೋದರೆ ಅಂತಹ ಮಾರಾಟಗಾರರ ವಿರುದ್ದ ಗ್ರಾಹಕರು ದೂರು ದಾಖಲಿಸಿ ಕಾನೂನು ರೀತಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

        ಮಾರಾಟಗಾರರು ಬೇರೆಯವರ ಹತ್ತಿರ ವಸ್ತುಗಳನ್ನು ಪಡೆದುಕೊಂಡಿರುತ್ತಾರೆ, ಅಂತಹ ಸಂದರ್ಭದಲ್ಲಿ ವಸ್ತುವಿನ ಗುಣಮಟ್ಟ ಹಾಗೂ ಬೆಲೆಯನ್ನು ಪರೀಕ್ಷಿಸಿ ಮಾರಾಟ ಮಾಡಬೇಕು. ಹೀಗಾದಲ್ಲಿ ಗ್ರಾಹಕರಿಗೂ ಮಾರಾಟಗಾರರಿಗೂ ಯಾವುದೇ ಮೋಸವಾಗುವುದಿಲ್ಲ ಎಂದು ಹೇಳಿದರು.

          ಹಿರಿಯ ವಕೀಲರಾದ ಸಿ.ಎಂ. ವೀರಣ್ಣ ವಿಶೇಷ ಉಪನ್ಯಾಸ ನೀಡಿ, ಪ್ರತಿಯೊಬ್ಬರು ಜೀವಿಸಲಿಕ್ಕೆ ಅಗತ್ಯಕ್ಕನುಗುಣವಾಗಿ ವಸ್ತುಗಳನ್ನು ಖರೀದಿಸಲೇಬೇಕು. ಅಂತಹ ಸಂದರ್ಭದಲ್ಲಿ ಕೊಂಡುಕೊಂಡ ವಸ್ತುವಿನ ಬೆಲೆ, ತೂಕ ಹಾಗೂ ಅವಧಿ ಮೀರಿದ ದಿನಾಂಕ ಗುಣಮಟ್ಟವನ್ನು ಪರೀಕ್ಷಿಸಿ ಪಡೆದರೆ ಯಾವುದೇ ಮೋಸ ಆಗುವುದಿಲ್ಲ ಎಂದರು.

       ದೊಷಯುಕ್ತವಾದ ವಸ್ತುವನ್ನು ಮಾರಾಟ ಮಾಡಿದವರ ವಿರುದ್ದ ಗ್ರಾಹಕರು, ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಪ್ರಶ್ನಿಸಿ ಅಗತ್ಯಕ್ಕೆ ಅನುಗುಣವಾಗಿ ಪರಿಹಾರ ಪಡೆದುಕೊಳ್ಳಲು ವಿಶ್ವ ಗ್ರಾಹಕರ ಹಕ್ಕುಗಳ ಕಾಯ್ದೆ ಎಂಬ ಕಾನೂನಾತ್ಮಕ ಕಾಯ್ದೆ ಜಾರಿಯಲಿದ್ದು, ಧೈರ್ಯವಾಗಿ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಕನಿಷ್ಠ ರೂಪದಲ್ಲಿ ಮೋಸವಾಗಿದೆ ಅದು ಯಾವ ಲೆಕ್ಕವೆಂದು ಸುಮ್ಮನಾದರೆ ಇನ್ನಿತರ ಗ್ರಾಹಕರಿಗೆ ಮೋಸವಾಗದಂತೆ ಎಲ್ಲರೂ ಒಗ್ಗಟಾಗಿ ಹೋರಾಟ ನಡೆಸಿ ಗ್ರಾಹಕರ ಶಕ್ತಿ ಪ್ರದರ್ಶಿಸಿ ನ್ಯಾಯಯುತವಾಗಿ ವಸ್ತುಗಳನ್ನು ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.

        ಕಾರ್ಯಕ್ರಮದಲ್ಲಿ ಪ್ಯಾನಲ್ ವಕೀಲೆ ಸೌಭಾಗ್ಯ ಲಕ್ಷ್ಮೀ, ಡಿ.ಕೆ. ಶೀಲಾ ಪ್ರಾಂಶುಪಾಲರಾದ ಸುನಾದೇವಿ, ದಿಲ್‍ಶಾದ್-ಉನ್ನೀಸ್, ಅನುಶಂಕರ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link