ಗ್ರಾಮ ಲೆಕ್ಕಾಧಿಕಾರಿಯ ಅಮಾನತ್ತಿಗೆ ರೈತ ಸಂಘದಿಂದ ಒತ್ತಾಯ

ಹೊಸದುರ್ಗ:

        ಗ್ರಾಮ ಲೆಕ್ಕಾಧಿಕಾರಿಯೊಬ್ಬರುಜಮೀನಿನ ವಿಷಯದಲ್ಲಿದೊಣ್ಣೆ ಹಿಡಿದುರೈತರ ಮೇಲೆ ದೌರ್ಜನ್ಯ ವೆಸಗಿರುವ ಹಿನ್ನೆಲೆಯಲ್ಲಿ ಆತನನ್ನು ಕೂಡಲೆ ಅಮಾನತ್ತು ಮಾಡಬೇಕೆಂದುತಾಲ್ಲೂಕುರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದತಾಲ್ಲೂಕುಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ಎಚ್.ಬಿ. ವಿಜಯ್‍ಕುಮಾರ್‍ಅವರಿಗೆ ಮನವಿ ಪತ್ರ ಸಲ್ಲಿಸಿದರು.

       ಹೊಳಲ್ಕೆರೆ ತಾಲ್ಲೂಕು ನಾರಾಯಣಗೊಂಡನಹಳ್ಳಿ ಎನ್.ಜಿ.ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಗ್ರಾಮ ಲೆಕ್ಕಾಧಿಕಾರಿರಾಮಚಂದ್ರಪ್ಪಎಂಬುವವರುಕೆಂಕೆರೆಗ್ರಾಮದಲ್ಲಿತೋಟ ಮಾಡಿಕೊಂಡಿದ್ದು ಪಕ್ಕದ ಭೂಮಿಯಲ್ಲಿ ಹಂಗಾಮಿ ಸಾಗುವಳಿಯನ್ನೂ ಮಾಡಿಕೊಂಡಿದ್ದ ಕೆಂಕೆರೆ ಗ್ರಾಮದ ಅನುಸೂಯಮ್ಮ ಎಂಬ ಮಹಿಳೆಯನ್ನು ವಂಚಿಸಿ 1 ಲಕ್ಷರೂಪಾಯಿ ಬಾಂಡನ್ನು ನಿರ್ಗತಿಕರ ಹೆಸರಿನಲ್ಲಿ ಕೊಡುವ ಬಾಂಡನ್ನು ಕೊಡಿಸುತ್ತೇನೆ ಎಂದು ಹೇಳಿ ವರ್ಷಗಟ್ಟಲೆ ತನ್ನ ಜಮೀನಿನಲ್ಲಿ ಕೆಲಸ ಮಾಡಿಸಿಕೊಂಡು ಸರಿಯಾಗಿ ಕೂಲಿಯನ್ನೂ ಕೊಡದೆ ಆ ಮಹಿಳೆ ಸಾಗು ಮಾಡುತ್ತಿದ್ದ ಒಂದುವರೆ ಎಕರೆಯಷ್ಟು ಜಮೀನನ್ನು ನಿನ್ನ ಹೆಸರಿಗೆ ಮಾಡಿಕೊಡುವುದಾಗಿ ಹೇಳಿ 80 ಸಾವಿರ ಹಣ ಕೊಡಬೇಕು ಎಂದು ಹೇಳಿದ್ದಲ್ಲದೆ ಖಾಲಿ ಹಾಳೆಯ ಮೇಲೆ ಸಹಿ ಪಡೆದುಕೋಂಡು ವಂಚಿಸಿದ್ದಾನೆ ಎಂದುರೈತ ಸಂಘದವರು ನೀಡಿರುವದೂರಿನಲ್ಲಿ ಉಲ್ಲೇಖಿಸಿದ್ದಾರೆ.

      ಸೋಮುವಾರ ಬೆಳಿಗ್ಗೆ ಎಂದಿನಂತೆ ರೈತರು ಅಲ್ಲಿ ಓಡಾಡುತ್ತಿದ್ದಾಗ ರಾಮಚಂದ್ರಪ್ಪ ನಿಮಗೂ ಓಡಾಡಲು ದಾರಿಕೊಡುವುದಿಲ್ಲ ಎಂದಾಗಅದನ್ನು ಕೇಳಲು ಹೋದ ಅನುಸೂಯಮ್ಮನ ಮೇಲೆ ಹಲ್ಲೆ ಮಾಡಿ ಮತ್ತು ಇನ್ನು ಕೆಲವರ ವಿರುದ್ದ ಈತ ಮನೆಯ ಹೆಣ್ಣು ಮಕ್ಕಳನ್ನು ಗಲಾಟೆಗೆ ಮುಂದೆ ಬಿಟ್ಟು ದೊಣ್ಡೆಯನ್ನ ಹಿಡಿದುಕೊಂಡು ಬೆದರಿಸಿದ್ದಾನೆ, ಈ ದೃಶ್ಯ ಹಾಗೂ ಈತನ ಮಾತುಗಳ ವರ್ತನೆಯ ರೀತಿ ಮೋಬೈಲ್‍ನಲ್ಲಿ ದಾಖಲಾಗಿದೆ.

       ಇಂತಹ ಉದ್ಘಟತನದ ಮತ್ತು ಜನರೊಂದಿಗೆ ಅಸಮರ್ಪಕ ವರ್ತನೆಯ ಗ್ರಾಮ ಲೆಕ್ಕಿಗನನ್ನು ಕೂಡಲೆ ಅಮಾನತ್ತುಗೊಳಿಸಿ ಇವರ ಮೇಲೆ ಸರ್ಕಾರಿ ನೌಕರನಾಗಿ ರೈತರು ಮತ್ತು ಸಾಮಾನ್ಯ ರೈತ ಮಹಿಳೆಯನ್ನು ವಂಚಿಸಿದ ಕಾರಣ ವಂಚನೆಯ ಪ್ರಕರಣವನ್ನು ದಾಖಲಿಸಿ ರೈತ ಮಹಿಳೆಗೆ ಆಗಿರುವ ಅನ್ಯಾಯ ಮತ್ತುದಾರಿ ಸಮಸ್ಯೆಯನ್ನ ಸರಿಪಡಿಸಿ ಕೊಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

       ಹೊಸದುರ್ಗ ಪೋಲೀಸ್‍ ಠಾಣೆಯಲ್ಲಿ ಅನುಸೂಯಮ್ಮ ಎಂಬುವವರು ಹಲ್ಲೆ ನಡೆದಿರುವ ಬಗ್ಗೆ ದೂರು ದಾಖಲಿಸಿದ್ದರು. ಪ್ರತಿಭಟನೆಯ ನೇತೃತ್ವವನ್ನರಾಜ್ಯರೈತ ಸಂಘದ ಕಾರ್ಯದರ್ಶಿ ಈಚಘಟ್ಟದಸಿದ್ದವೀರಪ್ಪ ವಹಿಸಿದ್ದರು.ಜಿಲ್ಲಾದ್ಯಕ್ಷ ರೆಡ್ಡಿಹಳ್ಳಿವೀರಣ್ಣ.ಜಿಲ್ಲಾ ಸಂಪನ್ಮೂಲ ವ್ಯಕ್ತಿತಾರೀಕೆರೆ ಕರಿಸಿದ್ದಯ್ಯ,ತಾಲ್ಲೂಕುಅಧ್ಯಕ್ಷರಮೇಶ್,ರೈತಮುಖಂಡರುಗಳಾದ ಎಸ್.ಬಯಲಪ್ಪ, ಹೆಚ್.ಟಿ.ಮಲ್ಲಿಖಾರ್ಜುನ್, ಆರ್.ಮಂಜುನಾಥ್,ದೊಡ್ಡಯ್ಯ, ಚಿತ್ತಪ್ಪ,ಪ್ರಕಾಶ್,ಪ್ರಸನ್ನಕುಮಾರ್ ಸೇರಿದಂತೆ ನೂರಾರುರೈತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ