ಗ್ರಾಮಪಂಚಾಯಿತಿ ಅಧ್ಯಕ್ಷರ ಅವಿರೋಧ ಆಯ್ಕೆ..!!!

ಚೇಳೂರು

      ನಮ್ಮ ಗ್ರಾಮ ಪಂಚಾಯ್ತಿಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಲು ನನಗೆ ಎಲ್ಲಾರ ಸಹಕಾರ ಮುಖ್ಯವಾಗಿ ಬೇಕಾಗಿದೆ . ಅದರ ಮುಖಾಂತರ ನಮ್ಮ ಗ್ರಾಮ ಪಂಚಾಯ್ತಿಯನ್ನು ತಾಲೂಕಿನಲಿಯೇ ಮಾದರಿಯಾಗಿ ಮಾಡಬಹುದು ಎಂದು ನೂತಾನವಾಗಿ ಇರಕಸಂದ್ರ ಗ್ರಾಪಂಗೆ ಆವಿರೋಧವಾಗಿ ಆಯ್ಕೆಯಾದ ಆದ್ಯಕ್ಷ ಪಿ.ಮಂಜುನಾಥ್ ಹೇಳಿದರು.

      ಇವರು ಈ ಗ್ರಾಪಂಗೆ ಹಿಂದೆ ಇದ್ದ ಆದ್ಯಕ್ಷಕೆ . ಚಂದ್ರಶೇಖರ್ ಅವರ ರಾಜಿನಾಮೆಯಿಂದ ತೆರವುಗಿದ್ದ ಆ ಸ್ಥಾನಕ್ಕೆ ನೆಡೆದ ಚುನಾವಣೆಯಲ್ಲಿ ಆವಿರೋಧವಾಗಿ ಆಯ್ಕೆಯಾಗಿ ಮಾತನಾಡುತ್ತ ನಾವುಗಳು ಈ ಸ್ಥಾನದಲ್ಲಿ ಇರುವಷ್ಟು ದಿನ ಸಾರ್ವಜನಿಕರ ಕೆಲಸಗಳನ್ನು ಪ್ರಮಾಣಿಕವಾಗಿ ಮಾಡಿಕೊಡುವುದೆ ನಮ್ಮಗಳ ಮುಖ್ಯವಾದ ಉದ್ದೇಶವಾಗಿದೆ.ಅದಕ್ಕೆ ಸಂಬಂದ ಪಟ್ಟವರ ಸಹಕಾರ ಅತಿ ಮುಖ್ಯವಾಗಿದೆ.

     ನಮ್ಮಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳು ಅಭಿವೃದ್ಧಿ ಕಾಮಗಾರಿಗಳು ಮಾಡಿಸುವುದೇ ನಮ್ಮಗಳ ಉದ್ದೇಶವಾಗಿದೆ ಎಂದರು
ಈ ಚುನಾವಣೆಯನ್ನು ತಹಶೀಲ್ದಾರ್ ಎಂ.ಮಮತಾ , ಚುನಾವಣಾಧಿಕಾರಿ ಗೋವಿಂದರಾಜು , ಕಂದಾಯಧಿಕಾರಿ ನಟರಾಜ್, ಕೆ.ವಿ. ನಾರಾಯಣ್ , ಗ್ರಾಮಲೆಕ್ಕಿಗ ಶ್ರೀನಿವಾಸ್ ನೇತೃತ್ವದಲಿ ನೆಡೆಯಿತು.ಈ ಕಾರ್ಯಕ್ರಮದಲಿ ಪಿಡಿಒ ಮಂಜುಳಾ. ಕಾರ್ಯದರ್ಶಿ ಒಂಪ್ರಕಾಶ್, ಮಾಜಿ ಗ್ರಾಪಂ ಅಧ್ಯಕ್ಷ ಪಾಲನೇತ್ರಯ್ಯ ಉಪಾಧ್ಯಕ್ಷೆ ಗೀತಾ, ಹಾಗೂ ಗ್ರಾಪಂ ಸದಸ್ಯರುಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link