ಎಂ ಎನ್ ಕೋಟೆ :
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಸಾಕಷ್ವು ಕೆಲಸಗಳನ್ನು ಮಾಡಿ ಆರ್ಥಿಕವಾಗಿ ಮುಂದೆ ಬರಬಹುದು ಎಂದು ನೋಡಲ್ ಅಧಿಕಾರಿ ಹೊನ್ನಪ್ಪ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ ಸಾಮಾಜಿಕ ಲೆಕ್ಕ ಪರಿಶೋಧನ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು ನರೇಗಾ ಯೋಜನೆಯಲ್ಲಿ ಸಾಕಷ್ವು ಸೌವಲತ್ತುಗಳನ್ನು ರೈತರು ಬಳಸಿಕೊಳ್ಳಬೇಕು. ಸರ್ಕಾರದ ಅನುದಾನವನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜೂತೆಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ರೈತರು ಜಮೀನಿನಲ್ಲಿ ಬದು ನಿರ್ಮಾಣ,ಕೃಷಿಹೊಂಡ, ಗಿಡ ನೆಡುವುದು, ಆಟದ ಮೈದಾನ, ಚೆಕ್ ಡ್ಯಾಂ ಇನ್ನು ಹಲವಾರು ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ರೈತರು ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮ ಸಭೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಾಂಡುರಂಗಯ್ಯ ಮಾತನಾಡಿ ಉದ್ಯೋಗ ಖಾತ್ರಿಯಲ್ಲಿ ಶಿವಪುರ ಗ್ರಾಮ ಪಂಚಾಯಿತಿಯ ಗಳಿಗೆಕೆರೆ ಗ್ರಾಮದಲ್ಲಿ ಇಂಗು ಗುಂಡಿಯನ್ನು ಮಾಡಿ 1,22000 ಹಣವನ್ನು ಪಡೆದಿದಾರೆ.ಆದರೆ ಅನುಮೋದನೆಯನ್ನು ಹಾಗಲವಾಡಿ ಗ್ರಾಮ ಪಂಚಾಯಿತಿಯಲ್ಲಿ.ಕೊಟ್ಟಿದ್ದಾರೆ.ಇದು ಹೇಗೆ ಸಾಧ್ಯ ಹಾಗಲವಾಡಿ ಪಂಚಾಯಿತಿಗೆ ಗಳಿಗೆಕೆರೆ ಗ್ರಾಮ ಬರಲ್ಲ ಇದರಲ್ಲಿ.ಅರಣ್ಯಧಿಕಾರಿಗಳು ಹಣ ದುರುಪಯೋಗ ಮಾಡಿದ್ದಾರೆ ಇದನ್ನು ತಡೆಯಬೇಕು ಎಂದು.ಹೇಳಿದರು.ಗ್ರಾಮಸಭೆಗೆ ಅರಣ್ಯಧಿಕಾರಿಗಳು ಗೈರಾಗಿದ್ದಾರೆ ಎಂದರು.
ಇದಕ್ಕೆ.ಪ್ರತಿಕ್ರಿಯಿಸಿದ ಹೊನ್ನಪ್ಪನವರು ಇದರ ಬಗ್ಗೆ ನಾನು ಶೀಘ್ರ ಕ್ರಮ ಜರುಗಿಸುತ್ತೇನೆ.ಈ ಕೆಲಸದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೂತೆ ಮಾತನಾಡಿ. ಈ.ಕಾಮಾಗಾರಿಯನ್ನು.ತಡೆ ಇಡಿಯುತ್ತೇವೆ. ಇದು ಸಬೀತರಾದರೆ ನಿರ್ದಕ್ಷಣ ಕ್ರಮ ಕೈಗೊಳಲಾಗುತ್ತದೆ.ಸದ್ಯಕ್ಕೆ ನೋಟೀಸ್ ನೀಡಲು ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ್ ದೇವ್,ಉಪಾಧ್ಯಕ್ಷೆ.ಲಲಿತಮ್ಮ, ಪಶುವೈದ್ಯಧಿಕಾರಿ ಮಲ್ಲಿಕಾರ್ಜುನ್, ಸದಸ್ಯರಾದ ಉದಯ್, ಲೋಕೇಶ್, ರಮೇಶ್ ಇಂಜಿನಿಯರ್ ಗೋಪಿನಾಥ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ