ದೊಡ್ಡೇರಿ :
ಜಿಲ್ಲಾ ಪಂಚಾಯ್ತಿತಿ, ತಾಲ್ಲೂಕು ಪಂಚಾಯ್ತಿತಿ, ಗ್ರಾಮ ಪಂಚಾಯ್ತಿತಿ ಸಂಯುಕ್ತಾಶ್ರಯದ್ಲಲಿ ಮುಖ್ಯ ಕಾರ್ಯ ನಿರ್ವಾಹಾಕ ಅಧಿಕಾರಿಗಳಾದ ಅನೀಸ್ ಕಣ್ಮಣಿ ಜಾಯ್ ರವರ ಅಧ್ಯಕ್ಷಥೆಯಲ್ಲಿ ಸರ್ಕಾರಿ ಪ್ರೌಢಶಾಲೆ ಮಧುಗಿರಿ ತಾಲ್ಲೂಕು, ದಬ್ಬೇಗಟ್ಟ ಗ್ರಾಮದಲ್ಲಿ ಗ್ರಾಮ ವಾಸ್ಥವ್ಯವನ್ನು ಮಾಡಿದರು.
ಜಿಲ್ಲೆಯ 10 ತಾಲ್ಲೂಕುಗಳು ಬರಪೀಡಿತವೆಂದು ಘನ ಸರ್ಕಾರ ವತಿಯಿಂದ ಘೋಷಣೆಯಾಗಿದ್ದು ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರು, ಸಾಂಕ್ರಾಮೀಕ ರೋಗ ಬಾರದಂತೆ ಮೂಲ ಭೂತ ಸೌಕರ್ಯಗಳನ್ನು ವದಗಿಸುವುದರ ಜೋತೆಗೆ ಸರ್ಕಾರ ದಿಂದ ದೊರೆಯುವ ಸೌಲಭ್ಯಗಳು ರೈತರ ಮನೆ ಬಾಗಿಲಿಗೆ ತಲುಪುವ ರೀತಿ ಅಧಿಕಾರಿಗಳು ಕೆಲಸ ನಿರ್ವಹಿಸಿದರೆ ನಾವುಗಳು ತೆಗೆದುಕೊಳ್ಳುವ ಸಂಬಳಕ್ಕೆ ರೂಣ ತೀರಿಸಿದಂತಾಗುತ್ತದೆ ಎಂದರು.
ದಬ್ಬೇಗಟ್ಟ, ದೊಡ್ಡೇರಿ, ಬಡವನಹಳ್ಳಿ ಗ್ರಾ.ಪಂ.ಗಳ ವ್ಯಾಪ್ತಿಗೆ ಬರುವ ಕೆಲವು ಹಳ್ಳಿಗಳನ್ನು ಬೇಟಿನೀಡಿ ಗ್ರಾಮದ ಸಾರ್ವಜನಿಕರಿಂದ ಸಮಸ್ಯೆಗಳನ್ನು ಕೇಳಿ ಹಾಳಿಸಿದರು.
ಈಗಾಗಲೇ ಕೆಲವು ದಲಿತ ಕಾಲೋನಿಗಳಲ್ಲಿ ಜರಂಡಿ ಸ್ವಚ್ಚಗೊಳಿಸಿದೆ ಗಬ್ಬೆದ್ದು ನಾರುತಿರುವುದನ್ನು ಸಾರ್ವಜನಿಕರು ಗಮನಕ್ಕೆ ತಂದಾಗ ಸ್ಥಳದಲ್ಲೆ ಇಂದ ಈ.ಓ ಮೋಹನ್ ಕುಮಾರ್ ಮತ್ತು ಪಿ.ಡಿ.ಓ ಗಳಿಗೆ ಸ್ವಚ್ಚತೆಮಾಡಿಸುವಂತೆ ಕಟ್ಟುನಿಟ್ಟಾಗಿ ಆಧೇಶಿಸಿದರು.
ದೊಡ್ಡೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವರ್ಶ್ ಕುಷ್ಟರೋಗ ಅರಿವು ಅಂದೊಲನ ಕಾರ್ಯಕ್ರಮವನ್ನು ಬಿತ್ತಿಪತ್ರ ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮ ಚಲಾನೆ ನೀಡಿದರು. ಬಡವನಹಳ್ಳಿ ಗ್ರಾ.ಪಂ ಮುಂಭಾಗ ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಂದ ಈಗಾಗಲೆ ಎಲ್.ಆರ್.ಎಮ್ ವತಿಯಿಂದ ಪಡೆದಿರುವ ಅನುಕೂಲಗಳ ಬಗ್ಗೆ ವಿವರಣೆ ಪಡೆದು ಸ್ವಯಂ ಉದ್ಯೋಗ ಕಲ್ಪಿಸಿಕೊಂಡು ನಿರ್ವಹಿಸುತ್ತಿರುವ ಸ್ಥಳಗಳಿಗೆ ಬೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರದಲ್ಲಿ ಮಾಳಕಾಳಪ್ಪ ಜಿ.ಪಂ ಯೋಜನಾಧಿಕಾರಿಗಳು, ಇ.ಓ ಮೋಹನ್ ಕುಮಾರ್, ಎ.ಡಿ ದೊಡ್ಡಸಿದ್ದಪ್ಪ, ಸಿ.ಡಿ.ಪಿ.ಒ ಕೆಂಪಹನುಮಯ್ಯ, ಡಿ.ಇ.ಓ ರಂಗಪ್ಪ, ಸಮಾಜ ಕಲ್ಯಾಣ ಅಧಿಕಾರಿ ಮಹದೇವಾಸ್ವಾಮಿ, ಕೃಷಿ ಅಧಿಕಾರಿ ಹನುಮಂತರಾಯಪ್ಪ, ಗ್ರಾ.ಪಂ ಅಧ್ಯಕ್ಷಾರದ ರಂಗನಾಥ, ಲಕ್ಷ್ಮೀದೇವಮ್ಮ, ಆರೋಗ್ಯ ಇಲಾಖೆ ಅಧಿಕಾರಿಗಳು, ಅಶುಸಂಗೋಪನೆ ಇಲಾಖೆ ಅಧಿಕಾರಿಗಳು, ರೇಷ್ಮೆ ಇಲಾಖೆ, ಅರಣ್ಯ ಇಲಾಖೆ ತಾಲ್ಲೂಕಿನ ವಿವಿಧ ಇಲಾಖಾಧಿಕಾರಿಗಳು ಗ್ರಾ.ಪಂ ಪಿ.ಡಿ.ಓ ಗಳು ಹಾಗೂ ಕಾರ್ಯ ದರ್ಶಿಗಳು ಹಾಗೂ ಸಾರ್ವಜನಿಕರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
