ಕುಣಿಗಲ್
ರಂಗೇರುತ್ತಿರುವ ಲೋಕಸಭಾ ಚುನಾವಣೆಯ ಕಣದಲ್ಲೀಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕುಣಿಗಲ್ ತಾಲ್ಲೂಕಿನ ರಘು ಜಾಣಗೆರೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸೋಮವಾರ ತಮ್ಮ ಬೆಂಬಲಿಗರೊಂದಿಗೆ ರಾಮನಗರದ ಜಿಲ್ಲಾಧಿಕಾರಿಗಳ ಬಳಿ ನಾಮಪತ್ರ ಸಲ್ಲಿಸಿದ್ದಾರೆ.
ಇವರು ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಜಾಣಗೆರೆಯ ಗ್ರಾಮದವರಾಗಿದ್ದು ರಾಜ್ಯ ಲಂಚಮುಕ್ತ ಕರ್ನಾಟಕ ನಿರ್ಮಾಣವೇದಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರನ್ನ ಬೆಂಬಲಿಸಿ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿಯವರ ಮಾರ್ಗದರ್ಶನದಡಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿಕೃಷ್ಣಾರೆಡ್ಡಿಯವರು ಸ್ವಚ್ಛ ಹಾಗೂ ಸಂವಿಧಾನಬದ್ಧ ಪ್ರಜಾಪ್ರಭುತ್ವಕ್ಕಾಗಿ ಲೋಕಸಭಾ ಚುನಾವಣೆಯ ಕಣದಲ್ಲಿ ಜಾಣಗೆರೆ ರಘು ಅವರನ್ನ ಕಣಕ್ಕೆ ಇಳಿಸಿದ್ದು ನಮ್ಮ ವೇದಿಕೆಯ ಧ್ಯೇಯೋದ್ಧೇಶದಂತೆ ಭ್ರಷ್ಟಾಚಾರ ನಿರ್ಮೂಲನೆ ಪ್ರಮುಖವಾಗಿದ್ದು ಹಣ ಮದ್ಯಪಾನ ನೀಡದೆ ಜನರ ಮಧ್ಯೆ ಕೆಲಸ ಮಾಡಿ ಜನನಾಯಕನಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಲಂಚಮುಕ್ತ ನಿರ್ಮಾಣ ವೇದಿಕೆಯ ಅಧ್ಯಕ್ಷ ಹೆಚ್.ಜಿ.ರಮೇಶ್, ಉಷಾರಾಣಿ ರಘು, ಡಾ.ಕೆ.ಶಿವರಾಂ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
