ಗ್ರಾಮಿಣ ಸಹಕಾರ ಸಂಘಗಳು ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು

ಹೊಸದುರ್ಗ:

    ಗ್ರಾಮೀಣ ಸಹಕಾರ ಸಂಘಗಳು ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕುಎಂದು ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪಕರೆ ನೀಡಿದರು.
ಅವರು ಪಟ್ಟಣದಎಸ್.ಎಲ್.ವಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಿಸಿಸಿ ಬ್ಯಾಂಕ್‍ಗೆ ನೂತನವಾಗಿಆಯ್ಕೆಯಾದಅಧ್ಯಕ್ಷ ಡಿ.ಸುಧಾಕರ್ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಬಿ.ಮಂಜುನಾಥ್ ಹಾಗೂ ನಿರ್ಧೆಶಕರುಗಳಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.

      ಸಹಕಾರಿಕೇತ್ರ ಬಹು ಜವಾಬ್ದಾರಿಯುತವಾದದ್ದು ಸಹಕಾರ ಸಂಘಗಳು ರಾಜಕೀಯ, ಜಾತಿ ಕೇಂದ್ರಗಳಾಗಬಾರದು ರೈತರ ಮನಗೆದ್ದು ಸಹಕಾರ ಸಂಘಗಳತ್ತ ಅವರು ಹೆಜ್ಜೆ ಹಾಕುವಂತೆ ಹಾಗಬೇಕುಎಂದುಕರೆ ನೀಡಿದರು.

     ಉಪಾಧ್ಯಕ್ಷ ಹೆಚ್.ಬಿ.ಮಂಜುನಾಥ್ ಮಾತನಾಡಿ ಪಟ್ಟಣದಲ್ಲಿಒಂದುಕೋಟಿಐವತ್ತು ಲಕ್ಷರೂ ವೆಚ್ಚದ ಸಹಕಾರ ಭವನ ನಿರ್ಮಾಣ ಮಾಡಲು ಡಿಸಿಸಿ ಬ್ಯಾಂಕ್ ನೆರವಾಗಿದೆ. ಎಂದು ಶ್ಲಾಘಿಸಿದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಜಿಲ್ಲಾ ಡಿಸಿಸಿ ಬ್ಯಾಂಕ್ ನೂತನಅಧ್ಯಕ್ಷ ಡಿ.ಸುಧಾಕರ್ ಸಹಕಾರಕ್ಷೇತ್ರ ಬಹು ವಿಶಾಲವಾದ ದೊಡ್ಡ ವ್ಯಾಪ್ತಿಯನ್ನು ಹೊಂದಿದೆ.ಕೇಂದ್ರ ಬ್ಯಾಂಕ್ ಹಿಂದೆ ಹೀನಾಯ ಸ್ಧತಿಗೆ ಬಂದು ನೌಕರ ವೇತನಕ್ಕೂ ಕಷ್ಟವಾಗಿತ್ತು, ಈಗ ಲಾಭದಾಯಕವಾಗಿದೆ ಎಂದರು.

      ರೈತರು ಅನುಮಾನದ ದೃಷ್ಟಿಯನ್ನ ಬಿಡಬೇಕು, 21 ನೇ ಸ್ಧಾನದಲ್ಲಿದ್ದ ಈ ಬ್ಯಾಂಕ್ ಈಗ 19 ನೇ ಸ್ಧಾನಕ್ಕೆ ಬಂದಿದೆ, 350 ಕೋಟಿರೂ ಸಾಲ ನೀಡಿದೆ ಅದರಲ್ಲೂ ಹೊಸದುರ್ಗ ತಾಲ್ಲೂಕಿಗೆ ಹೆಚ್ಚಿನ ನೆರವು ನೀಡಿದೆ ಎಂದರು.ಈ ಸಂಧರ್ಬದಲ್ಲಿ ಕನಕ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಶಿವಣ್ಣ,ರಭದ್ರಬಾಬು , ಜಗದೀಶ್, ವಿನೋದಮ್ಮ, ತಿಪ್ಪೇಸ್ವಾಮಿ, ಸೋಮೇಶ್ವರಯ್ಯ, ಪುಟ್ಟಯ್ಯ,ಪ್ರಶಾಂತ್, ಶಂಕರಪ್ಪ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap