ವಿಜೃಂಭಣೆಯಿಂದ ನಡೆದ ವದನಕಲ್ಲು ತಿಪ್ಪೇರುದ್ರಸ್ವಾಮಿ ಜಾತ್ರೆ.

ಪಾವಗಡ

        ವದನಕಲ್ಲು ತಿಪ್ಪೇರುದ್ರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರಧ್ದಾ ಭಕ್ತಿಗಳೊಂದಿಗೆ ಜರುಗಿತು. ರಥೋತ್ಸವ ಪ್ರಯುಕ್ತ ಬೆಳಗಿನ ಜಾವದಿಂದಲೇ ವಿಶೇಷ ಅಭಿಷೇಕ ಪೂಜೆ ಹೋಮ ಲಕ್ಷಬಿಲ್ವಾರ್ಚನೆ ಗಳನ್ನು ಮಾಡಲಾಯಿತು ಚಿತ್ತಾ ನಕ್ಷತ್ರ ಬರುತ್ತಿದ್ದಂತೆ ಉತ್ಸವ ವಿಗ್ರಹಗಳನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿರು.

        ಭಕ್ತಾಧಿಗಳು ರಥದ ಮೇಲೆ ಮೆಣಸು ಮಂಡಕ್ಕಿ ಬಾಳೆ ಹಣ್ಣು ಹೋ ಎಸೆದು ನಮಿಸಿದರು ಹರಕೆ ಹೊತ್ತವರು ರಥದ ಕೆಳಗಿನಿಂದ ಮೂರು ಬಾರಿ ತೂರಿ ಬರುವ ವಾಡಿಕೆ ನಡೆಸಿದರು. ರಥೋತ್ಸವ ಪ್ರಮುಖ ಆಕರ್ಷಣೆಯಾಗಿ ಕೋಲಾಟ ನಂದಿಧ್ವಜ. ವೀರಗಾಸೆ ಕೋಲಾಟ ತಂಡಗಳು ಭಾಗವಹಿಸಿದ್ದವು ಅಗ್ನಿಕುಂಡಕ್ಕೆ ಸಾವಿರಾರು ಭಕ್ತರು ಕೊಬ್ಬರಿ ತುಪ್ಪ ಎಳ್ಳು ನೆಲಗಡೆ ಸಾಂಬ್ರಾಣಿ ಸಮರ್ಪಿಸಿಕೊಂಡರು.

         ದನಗಳ ಜಾತ್ರೆ ಗೆ ಬಂದಿದ್ದ ರಾಸುಗಳಲ್ಲಿ ಅತ್ಯುತ್ತಮ ರಾಸುಗಳಿಗೆ ಬಹುಮಾನ ವಿತರಿಸಿಲಾಯಿತು ಚುನಾವಣಾ ನೀತಿ ಸಂಹಿತೆ ಇರುವ ಪ್ರಯುಕ್ತ ನಿವೃತ್ತ ಮುಖ್ಯಾಧಿಕಾರಿ ಜಯರಾಂ ಅವರು ಸ್ವಂತ ಖರ್ಚಿನಿಂದ ಅತ್ಯುತ್ತಮ ರಾಸುಗಳಿಗೆ ಬಹುಮಾನ ವಿತರಿಸಿದರು
ಇಲ್ಲಿನ ದನಗಳ ಜಾತ್ರೆ ಅಂತರ ರಾಜ್ಯ ಜನಪ್ರಿಯತೆ ಗಳಿಸಿದ್ದು ರಾಯಚೂರು ಕೊಪ್ಪಳ ಆಂದ್ರದ ವಿವಿದೆಡೆ ರೈತರು ವ್ಯಾಪರಸ್ತರು ರಾಸುಗಳನ್ನು ಖರೀದಿಸಿದ್ದಾರೆ ಎಂಬುದೇ ಒಂದು ಹೆಮ್ಮೆ ಯಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link