ಅ.7-8: ವೈಭವದ ದಸರಾ ಮಹೋತ್ಸವ ಆಚರಣೆ

ತುಮಕೂರು
     ಸಾಮಾಜಿಕ ಐಕ್ಯತೆಯ, ಸಾಂಸ್ಕೃತಿಕ ನಾಡಹಬ್ಬವಾದ ತುಮಕೂರು ದಸರಾ ಅಕ್ಟೋಬರ್ 7 ಮತ್ತು 8 ರಂದು ತುಮಕೂರಿನಲ್ಲಿ ಆಚರಿಸಲಾಗುವುದು ಎಂದು  ದಸರಾ ಸಮಿತಿಯ ಅಧ್ಯಕ್ಷರಾದ  ಬಿ.ಎಸ್.ಮಂಜುನಾಥ್ ಮತ್ತು ಸಂಯೋಜಕರಾದ ಕೆ.ಎನ್.ಗೋವೀಂದರಾವ್ ತಿಳಿಸಿದರು.
 
      ನಗರದ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 
ಕಳೆದ 29 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ವ್ಯಾಲಿ ಆಫ್ ಗಾಡ್ ಎಂದೇ ಜನಮಾನಸದಲ್ಲಿ ಬಿಂಬಿತವಾಗಿರುವ ತುಮಕೂರು ದಸರಾ ಆಚರಣೆಯನ್ನು ಸಂಸ್ಕಾರ ಭಾರತಿ ಮತ್ತು ದಸರಾ ಸಮಿತಿ ವತಿಯಿಂದ ಈ ಬಾರಿ ಎರಡು ದಿನಗಳು ಆಚರಿಸಲಾಗುವುದು ಎಂದು ತಿಳಿಸಿದರು.
      ಮೊದಲ ದಿನವಾದ ಅಕ್ಟೋಬರ್ 7 ರಂದು ತುಮಕೂರು ದಸರಾ ಅಂಗವಾಗಿ ಕಲಾವಿದರಿಗೆ, ಶಾಲಾ ಕಾಲೇಜು ಮಕ್ಕಳಿಗೆ ಜನಪದಗೀತೆಗಳ ಗಾಯನ ಸ್ಪರ್ಧೆ, ಸಾಮೂಹಿಕ ನೃತ್ಯ ಸ್ಪರ್ದೆಗಳನ್ನು ದಸರಾ ಆಚರಿಸುವ ಸ್ಥಳವಾದ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದು ವಿಜೇತರಿಗೆ ಮೂರು ನಗದು ಬಹುಮಾನಗಳನ್ನು ನೀಡಲಾಗುವುದು. ಜನಪದಗೀತೆಗಳ ಸ್ಪರ್ಧೆಯ ವಿಜೇತರಿಗೆ 5,3, ಮತ್ತು2 ಸಾವಿರ ರೂಗಳ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು, ಸಾಮೂಹಿಕ ನೃತ್ಯ ಸ್ಪರ್ಧೆಯ ವಿಜೇತರಿಗೆ  20, 10 ಮತ್ತು 5 ಸಾವಿರ ರೂಗಳ ಮೂರು ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
       ಅಂದು ಸಂಜೆ 5.30ಕ್ಕೆ  ದಸರಾ ಅಂಗವಾಗಿ ಏರ್ಪಡಿಸಿರುವ  ಸಾಂಸ್ಕøತಿಕ ನಾಡಹಬ್ಬಕ್ಕೆ ಚಿತ್ರನಟಿ ತಾರಾ ಅನುರಾಧ ಅವರು ಚಾಲನೆ ನೀಡುವರು. ದಸರಾ ಸಮಿತಿಯ ಗೌರವ ಅಧ್ಯಕ್ಷರಾಧ ಸಿ.ವಿ.ಮಹದೇವಯ್ಯ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲತಾ, ಸಂಸದ ಜಿ.ಎಸ್.ಬಸವರಾಜು, ಶಾಶಕ ಜ್ಯೋತಿ ಗಣೇಶ್ ಮುಂತಾದವರು ಭಾಗವಹಿಸುವರು ಎಂದು ತಿಳಿಸಿದರು.
      ವಿಜಯದಶಮಿಯ ದಿನ ತುಮಕೂರು ನಗರದಲ್ಲಿನ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ದೇವರುಗಳ ಉತ್ಸವ ಅಂದರೆ ವಿಜಯದಶಮಿಯ ಮೆರವಣಿಗೆಗೆ. ಸಿದ್ಧಗಂಗಾ ಮಠಾಧ್ಯಕ್ಷರಾಧ ಶ್ರೀ ಸಿದ್ಧಲಿಂಗಸ್ವಾಮಿಗಳ ಸಾನಿಧ್ಯದಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರು ಧ್ವಜಪೂಜೆಯ ಮೂಲಕ ಚಾಲನೆ ನೀಡುವರು. ಮೇಯರ್ ಲಲಿತಾ ರವೀಶ್ ಅವರು ಗಣೇಶ ಪೂಜೆ ನೆರವೇರಿಸುವರು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ಕೋನಾ ವಂಶಿಕೃಷ್ಣ ಅವರು ಚಾಮುಂಡೇಶ್ವರಿ ಪೂಜೆ ನೆರವೇರಿಸುವರು, ಡಾ.ಬಿ.ನಂಜುಂಡಸ್ವಾಮಿ ಮೆರವಣಿಗೆ ಉದ್ಘಾಟಿಸುವರು ಎಂದು ಅವರು ತಿಳಿಸಿದರು.
    ಮಧ್ಯಾಹ್ನ 1 ಗಂಟೆಯ ವೇಳೆಗೆ ಆರಂಭವಾಗುವ ವಿಜಯದಶಮಿಯ ವಿಜಯೋತ್ಸವದಲ್ಲಿ  ಗ್ರಾಮದೇವತೆಗಳು, ನಗರದಲ್ಲಿನ ಹಲವು ದೇವರ ಉತ್ಸವ ಮೂರ್ತಿಗಳು, ವಿವಿಧ ಜಾನಪದ ಪ್ರಾಕಾರಗಳು ಭಾಗವಹಿಸಲಿದ್ದು ವಿಜಯದಶಮಿಯ ಈ ಉತ್ಸವ ಮಹಾನಗರಪಾಲಿಕೆಯ ವೃತ್ತದಿಂದ ಹೊರಟು ಬಿ.ಹೆಚ್.ರಸ್ತೆ, ಮಹಾತ್ಮ ಗಾಂಧಿ ರಸ್ತೆ, ರಾಮಪ್ಪ ವೃತ್ತ, ಹೊರಪೇಟೆ ವೃತ್ತ, ಜನರಲ್ ಕಾರ್ಯಪ್ಪ ರಸ್ತೆಯ ಮೂಲಕ ಸರ್ಕಾರಿ ಕಿರಿಯ ಕಾಲೇಜು ತಲುಪಲಿದೆ ಎಂದು ತಿಳಿಸಿದರು.
     ವಿಜಯದಶಮಿಯ ದಿನ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ  ಬೆಳಗ್ಗೆ ಸಾರ್ವಜನಿಕರಿಗಾಗಿ ರಂಗೋಲಿ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ 5,3 ಮತ್ತು 2 ಸಾವಿರ  ರೂಗಳ ಮೂರು ಬಹುಮಾನ ನೀಡಲಾಗುವುದು. ಮಧ್ಯಾಹ್ನ ಸಿದ್ದೇಂದ್ರ ಕುಮಾರ ತಂಡದಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಲಿದೆ.
    ಸುಮಾರು 4.30 ರ ವೇಳೆಗೆ ವಿಜಯದಶಮಿಯ ವಿಜಯೋತ್ಸವ ಮೈದಾನ  ತಲುಪಲಿದ್ದ  ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾಧ  ಶ್ರೀ ಸಿದ್ಧಲಿಂಗಸ್ವಾಮಿಗಳ ಸಾನ್ನಿಧ್ಯದಲ್ಲಿ ತಹಸೀಲ್ದಾರ್ ಯೋಗಾನಂದ ಅವರು ಶಮೀ ಪೂಜೆ ನೆರವೇರಿಸುವರು. ಕಾರ್ಕಳದ ಅಕ್ಷಯ ಗೋಖಲೆ ಅವರು ವಿಜಯದಶಮಿ ಕುರಿತು ಮಾತನಾಡುವರು, ಆಳ್ವಾಸ್ ಅಧ್ಯಕ್ಷರಾಧ ಮೋಹನ್ ಆಳ್ವ ಅವರನ್ನು ಗೌರವಿ ಸಲಾಗುವುದು, ವೀರಶೈವ ಸಮಾಜದ ಅಧ್ಯಕ್ಷರಾದ ಟಿ.ಬಿ.ಶೇಖರ್ ಉಪಸ್ಥಿರಿರುವರು ಬಿ.ಎಸ್.ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಎರಡೂ ದಿನಗಳ ಕಾಲ ಸಂಜೆ ಮೂಡಬಿದರೆಯ ಆಳ್ವಾಸ್  ತಂಡದಿಂದ  ಆಳ್ವಾಸ್ ಸಾಂಸ್ಕತಿಕ ವೈಭವ ಕಾಯಕ್ರಮ ನಡೆಯಲಿದೆ ಎಂದು ತಿಳಿಸಿದರು. 
    ಪತ್ರಿಕಾ ಗೋಷ್ಟಿಯಲ್ಲಿ ದಸರಾ ಸಮಿತಿಯ  ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಸಂಸ್ಕಾರ ಭಾರತೀಯ ಪ್ರಾಂತ್ಯದ ಅಧ್ಯಕ್ಷ ರಮೇಶ್ ಬಾಬು, ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ  ಬಿ.ಎಸ್.ಮಹೇಶ್, ಖಜಾಂಚಿ ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link