ಕುಣಿಗಲ್
ರಾಜ್ಯದ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಯಡಿಯೂರು ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಕಾರ್ತಿಕ ಅಮವಾಸ್ಯೆ ಪ್ರಯುಕ್ತ ಮಂಗಳವಾರ ಸಂಜೆ ನಡೆದ ಲಕ್ಷ ದೀಪೋತ್ಸವದಲ್ಲಿ ದೀಪದಿಂದ ದೀಪ ಹಚ್ಚುವ ಮೂಲಕ ಸಹಸ್ರಾರು ಭಕ್ತಾಧಿಗಳು ತಮ್ಮ ತನು, ಮನ, ಧನ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ದೇವಾಲಯದಲ್ಲಿ ಶ್ರೀ ಸಿದ್ಧಂಗೇಶ್ವರರ ಗದ್ದುಗೆಗೆ ವಿಶೇಷವಾದ ಹೂವಿನ ಅಲಂಕಾರ ಮಾಡುವುದರ ಜೊತೆಗೆ ದೇವಾಲಯವನ್ನು ಶೃಂಗರಿಸಲಾಗಿತ್ತು ವಿಶೇಷವಾಗಿ ಅಭಿಷೇಕ , ರುದ್ರಾಬಿಷೇಕ , ಮಹಾಮಂಗಳಾರತಿ ,ಪುಪ್ಪಾರ್ಚನೆ , ಅಷ್ಟೋತ್ತರ ಸೇರಿದಂತೆ ಹಲವಾರು ವಿಧಗಳಲ್ಲಿ ಸಿದ್ದಲಿಂಗೇಶ್ವರರನ್ನು ಪೂಜಿಸಲಾಯಿತು ಪ್ರತಿಯೊಬ್ಬ ಭಕ್ತರಿಗೂ ಸುಲಭ ರೀತಿಯಲ್ಲಿ ದರ್ಶನ ಪಡೆಯಲು ನೂಕುನುಗ್ಗಲು ಉಂಟಾಗದಂತೆ ಆಡಳಿತ ಮಂಡಳಿ ಬ್ಯಾರಿಕೇಡ್ ನಿರ್ಮಿಸಿದರು.
ಇಲ್ಲಿನ ಪಾಠಶಾಲೆಯ ವಟುಗಳು ಸೇರಿದಂತೆ ದೀಪೋತ್ಸವ ಕಾರ್ಯಕ್ರಮದ ಹಲವಾರು ಸೇವೆಗಳನ್ನು ಸಲ್ಲಿಸಲು ಸ್ವಯಂಸೇವಕರಾಗಿ ಕೆಲಸ ಮಾಡಿದರು. ಮಂಡ್ಯ,ಮೈಸೂರು ಹಾಸನ, ಬೆಂಗಳೂರು, ತುಮಕೂರು, ಹುಬ್ಬಳ್ಳಿ, ಧಾರವಾಢ, ಗದಗ, ಬೀದರ್, ಗುಲ್ಬರ್ಗ ಸೇರಿದಂತೆ ನಾಡಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತಾಧಿಗಳು ಪ್ರತಿ ವರ್ಷದಂತೆ ಲಕ್ಷ ದೀಪೋತ್ಸವಕ್ಕಾಗಿ ಜಿಲ್ಲಾಡಳಿತ ಮತ್ತು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸಂಜೆ 6 ಗಂಟೆಗೆ ದೀಪೋತ್ಸವಕ್ಕೆ ಭಕ್ತರೇ ಚಾಲನೆ ನೀಡಿದರು ಶ್ರೀಕ್ಷೇತ್ರದಲ್ಲಿ ದೇವಾಲಯದ ಆಡಳಿತ ಮಂಡಳಿಯಿಂದ ಸಾಕಲಾಗಿರುವ ಆನೆ ಗಂಗಾಳನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಕೈಅಡ್ಡೆ ಉತ್ಸವ , ಬೆಳ್ಳಿಪಲ್ಲಕ್ಕಿ ಉತ್ಸವಗಳ ಮೂಂದೆ ಕರೆದೊಯ್ಯಲಾಯಿತು .
ಭಕ್ತರು ತಾವು ತಂದಿದ್ದ ಎಣ್ಣೆ ಹಾಗೂ ಬತ್ತಿಯನ್ನು ದೀಪಕ್ಕೆ ಹಾಕಿ ಬೆಳಗಿಸಿ ತಮ್ಮ ನೋವು, ದುಃಖ, ಸಂಕಟವನ್ನು ದೂರಮಾಡುವಂತೆ ಪವಾಡಪುರಷ ಸಿದ್ದಲಿಂಗೇಶ್ವರನಲ್ಲಿ ಮೊರೆಯಿಡುವ ಮೂಲಕ ದೇವಸ್ಥಾನದ ಗೋಪರಕ್ಕೆ ಹಾಗೂ ದೇವಸ್ಥಾನದ ಅವರಣದಲ್ಲಿ ಮಾಡಲಾಗಿದ್ದ ದೀಪಾಲಂಕಾರ ಹಾಗೂ ಭಕ್ತರು ಹಚ್ಚಿದ ಲಕ್ಷಾಂತರ ದೀಪಗಳು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಕ್ಷೇತ್ರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ