ಅದ್ದೂರಿ ಸರ್ವಜ್ಞ ಜಯಂತಿ ಆಚರಣೆ

ಶಿರಿಗೇರಿ

        ಗ್ರಾಮದಲ್ಲಿ ಬಾನುವಾರ ಕುಂಬಾರ ಕ್ಷೇಮಾಭಿವೃಧ್ಧಿ ಸಂಘದ ವತಿಯಿಂದ ಪ್ರಥಮ ವರ್ಷದ ಸರ್ವಜ್ಞ ಮೂರ್ತಿ ಜಯಂತೋತ್ಸವ ಕಾರ್ಯಕ್ರಮವನ್ನುಶಂಭುಲಿಂಗೇಶ್ವರ ದೇವಸ್ಥಾನ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಕುಂಬಾರ ಕ್ಷೇಮಾಭಿವೃಧ್ಧಿ ಸಂಘ ಹಾಗು ಸರ್ವಜ್ಞ ಮೂರ್ತಿ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತೆಲಸಂಘ ಗುರುಪೀಠದ ಪರಮಪೂಜ್ಯ ಬಸವ ಕುಂಬಾರ ಗುಂಡಯ್ಯ ಅತ್ಯಾಧುನಿಕತೆ ಯುಗದಲ್ಲಿ ಮಡಕೆಯ ಮಹತ್ವ ನಶಿಸುತ್ತಿದೆ ಎಂದರು.

        ಪ್ರಾರಂಭದಲ್ಲಿ ಕುಂಬಾರು ಬಂಧುಗಳು ಸರ್ವಜ್ಞರ ಮೆರವಣಿಗೆಯನ್ನು ಅದ್ದೂರಿಯಾಗಿ ನೆರವೇರಿಸಿದರು. ಕವಿಗಳಲ್ಲಿ ತ್ರಿಪದಿ ಕವಿ ಎಂದೇ ಖ್ಯಾತಿ ಗಳಿಸಿದ ಸರ್ವಜ್ಞರವರ ವಚನಗಳು ಆಡು ಭಾಷೆಯ ನೆಲೆಗಟ್ಟಿನಲ್ಲಿ ಇತಿಹಾಸ ಸೃಷ್ಠಿಸಿದೆ. ಇಂತಹಾ ಕವಿಗಳ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಸಹ ಅಳವಡಿಸಿಕೊಳ್ಳುವುದರ ಜತೆಯಲ್ಲಿ ಜಾತಿ ಧರ್ಮ ಮತ ಭೇಧಭಾವನ್ನು ತೊರೆದು ಪುರಾತನ ಕಾಲದ ಮಡಕೆಯ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.

       ತದ ನಂತರ ಮಾತನಾಡಿದ ಸಿರುಗುಪ್ಪ ಬಸವ ಭೂಷಣ ಮಹಾಸ್ವಾಮಿ ವಿಧ್ಯೆ ಕಲಿಸದಾ ಗುರು, ತಿದ್ದಿ ಬುಧ್ಧಿ ಹೇಳದಾ ತಂದೆ, ಹೊತ್ತೊತ್ತಿಗೆ ಕೂಳಿಡದಾ ತಾಯಿ ಇಲ್ಲದಿದೊರ್ದೆಡೆ ಮಸಣಕ್ಕೆ ಸರಿಸಮಾನವೆಂದ ಸರ್ವಜ್ಞ” ಎಂಬ ವಚನದ ಸಂದೇಶ ಸಾರುವ ಮೂಲಕ ಕುಂಬಾರರ ಇತಿಹಾಸ ಮತ್ತು ಮೌಲ್ಯತೆಯನ್ನು ಸಾರಿದರು.

       ತದ ನಂತರ ಸರ್ವಜ್ಞ ಸಂಘದ ಯುವ ಸೈನ್ಯ ಮುಖಂಡ ಹಾಗೂ ರಾಜ್ಯಾಧ್ಯಕ್ಷ ಜಗದೇಶ್ ಎಸ್.ಕುಂಬಾರ ಯಾದಗಿರಿ “ ಸರಕಾರ ಸರ್ವಜ್ಞರ ಹೆಸರಿನಲ್ಲಿ ಜಯಂತಿ ಆಚರಿಸುವ ಮೂಲಕ ಲಕ್ಷಾಂತರ ರೂ.ಕೊಳ್ಳೆ ಹೊಡೆದಿದೆ. ಇದರ ವಿರುಧ್ಧ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.

         ತದ ನಂತರ ಎಪಿಎಂಸಿ ಸದಸ್ಯ ಹಾಗಲೂರು ಮಲ್ಲನಗೌಡ ಹಾಗೂ ಎಸ್.ಎಂ. ಅಡಿವೆಯ್ಯ ಸ್ವಾಮಿ ಮಾತನಾಡಿ “ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು? ಎತ್ತು ಗಾಣವನು ಹೊತ್ತುತಾ ನಿತ್ಯದಲಿ ಸುತ್ತಿ ಬಂದಂತೆ ಸರ್ವಜ್ಞ “ ಎನ್ನುವ ಹಿತ ವಚನಗಳು ಜನಪದ ಕಲೆಯನ್ನು ಇಂದಿಗೂ ಸಹ ಜೀವಂತವಾಗಿ ಉಳಿಸಿವೆ. ಇಂತಹಾ ಸರ್ವಜ್ಞ ಕುಟುಂಬದಲ್ಲಿ ಬೆಳೆದ ಕುಂಬಾರ ವರ್ಗಕ್ಕೆ ಸರಕಾರ ಸೂಕ್ತ ನೆರವು ನೀಡಿ ಸಹಕರಿಸಬೇಕೆಂದು ಒತ್ತಾಯಿಸಿದರು.

         ಇದೇ ವೇಳೆ ರಾಜ್ಯಾಧ್ಯಕ್ಷರು ಕುಂಬಾರ ಜನಾಂಗಕ್ಕೆ ಸೂಕ್ತ ಸಮುದಾಯ ಭವನವನ್ನು ಒದಗಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಉಪಾಧ್ಯಕ್ಷ ಗೋಡೆ ಸಂಪತ್ ಕುಮಾರ್ ಸರಕಾರಿ ಜಾಗ ತೋರಿಸಿದರೆ ಒಂದು ಲಕ್ಷ ರೂ. ವೈಯಕ್ತಿಕ ಧನ ಸಹಾಯ ನೀಡುವುದಾಗಿ ಭರವಸೆ ನೀಡಿದರು.

       ಕಾರ್ಯಕ್ರಮದಲ್ಲಿ ಸೋಮಶೇಖರಪ್ಪ, ಸಿ.ಎಂ.ನಾಗರಾಜಸ್ವಾಮಿ, ಪವಾಡಿನಾಯ್ಕ, ರಾರಾವಿ ವೆಂಕಟೇಶ, ಮಲ್ಲಯ್ಯ, ಮುದಿಯಪ್ಪ, ಮಂಜೇಶ್, ಎಂ.ಆರ್.ಪಂಪನಗೌಡ, ಗುಜ್ರಿಮೌಲಾಸಾಬ್, ರಮೇಶ್‍ಭಜಂತ್ರಿ, ಶೇಖರ್, ವೆಂಕಟೇಶ, ಹನುಮಂತರಾಯ, ಕುಂಬಾರ್ ನಾಗಪ್ಪ, ದ್ಯಾವಣ್ಣ, ನಿರುಪಾದಿ, ವಿ.ಹನುಮೇಶ, ಶಶಿಧರ, ವೀರಪ್ಪ ಸೇರಿದಂತೆ ನೂರಾರು ಜನ ಕುಂಬಾರು ಭಕ್ತಾಧಿಗಳು ಉಪಸ್ಥಿತರಿದ್ದರು. ಬಾಬುರಾಜು ನಿರೂಪಿಸಿ, ರಮೇಶ್ ಕುಮಾರ್ ನಿರ್ವಹಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

.

Recent Articles

spot_img

Related Stories

Share via
Copy link