ಚಳ್ಳಕೆರೆ
ನಗರದ ಡಿ.ವೀರಣ್ಣ ಲೇಔಟ್‍ನಲ್ಲಿರುವ ಶ್ರೀಯುವ ಶಕ್ತಿ ಗಣಪತಿ ಯುವಕ ಸಂಘದಿಂದ ನೂತನವಾಗಿ ಆಯ್ಕೆಯಾದ ಎಲ್ಲಾ ನಗರಸಭಾ ಸದಸ್ಯರನ್ನು ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಆದರ್ಶ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಈ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ನಗರದ ಅಭಿವೃದ್ಧಿಗಾಗಿ ಅತಿ ಹೆಚ್ಚಿನ ಜವಾಬ್ದಾರಿ ಹೊತ್ತ ಅನೇಕ ಹೊಸ ಸದಸ್ಯರು ನಗರಸಭೆಗೆ ಆಯ್ಕೆಯಾಗಿದ್ದು, ಸಂಘದ ವತಿಯಿಂದ ಸನ್ಮಾನಿಸಲಾಗಿದೆ ಎಂದರು.
ನಗರಸಭಾ ಸದಸ್ಯರಾದ ಎಸ್.ಜಯಣ್ಣ, ಬಿ.ಟಿ.ರಮೇಶ್‍ಗೌಡ, ವಿ.ವೈ.ಪ್ರಮೋದ್, ಕೆ.ಸಿ.ನಾಗರಾಜು, ಸುಮಾ, ಎಂ.ಸಾವಿತ್ರಿ, ವಿರುಪಾಕ್ಷ, ಎಂ.ನಾಗವೇಣಮ್ಮ, ಜಿ.ಗೋವಿಂದ, ನಾಗವೇಣಮ್ಮ, ಕೆ.ವೀರಭದ್ರಯ್ಯ, ಎಚ್.ಪ್ರಶಾಂತ್‍ಕುಮಾರ್(ಪಚ್ಚಿ), ಚಳ್ಳಕೇರಪ್ಪ, ಕವಿತಾ ಮುಂತಾದವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಜಯಣ್ಣ, ದೇವರ ಸನ್ನಿದಾನದಲ್ಲಿ ಶ್ರೀಯುವ ಶಕ್ತಿ ಗಣಪತಿ ಯುವಕ ಸಂಘ ನಮ್ಮನ್ನು ಸಂತೋಷದಿಂದ ಸನ್ಮಾನಿಸಿದ್ದಾರೆ. ನಗರದ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಲು ಎಲ್ಲಾ ಸದಸ್ಯರು ನಿರ್ಧರಿಸಿದ್ದೇವೆ. ನಗರದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಪಕ್ಷ ಬೇದ ಮರೆತು ನಗರಸಭೆಯಲ್ಲಿ ಕೆಲಸ ಮಾಡುತ್ತೇವೆ. ನಿಮ್ಮೆಲ್ಲರ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತೇವೆಂದರು.
ಈ ಸಂಧರ್ಭದಲ್ಲಿ ಸಮಿತಿಯ ಸದಸ್ಯರಾದ ಶಿವು, ಸುರೇಂದ್ರ, ನಾಗಾರ್ಜುನ್, ಗುರು, ಸಂತೋಷ್, ಆದಿತ್ಯ, ರಘು, ಶಂಕರ್, ಮಾರುತಿ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
