ಹೊಸದುರ್ಗ : ರಸ್ತೆ ಅಗಲೀಕರಣಕ್ಕೆ ಗ್ರೀನ್ ಸಿಗ್ನಲ್

ಹೊಸದುರ್ಗ:

      ಸತತ ಮೂರನೇ ಬಾರಿಗೆ ಪಟ್ಟಣದ ಪ್ರಮುಖ ರಸ್ತೆ ಅಗಲೀಕಣಕ್ಕೆ ಇದೀಗ ಗ್ರೀನ್ ಸಿಗ್ನಲ್ ದೋರಕಿದ್ದು ಶುಕ್ರವಾರ ಮುಂಜಾನೆಯಿಂದ ರಸ್ತೆ ಮಾರ್ಕಿಂಗ್ ಪ್ರಾರಂಭಗೊಂಡಿದೆ. ಪುರಸಭೆ ವ್ಯಾಪ್ತಿಯಲ್ಲಿ ಬರುವ ಪಟ್ಟಣದ ಸಮೀಪವಿರುವ ಯಾಲಕಪ್ಪನಹಟ್ಟಿಯಿಂದ ಹುಳಿಯಾರು ರಸ್ತೆಮಾರ್ಗದಲ್ಲಿ ಬರುವ ವಿಶ್ವೇಶ್ವರಯ್ಯ ಜಲ ನಿಗಮದವರೆಗೆ ಸುಮಾರು 4 ಕಿ.ಮೀ.ಉದ್ದದ ರಸ್ತೆಯನ್ನು ಒಟ್ಟು 18 ಕೋಟಿ ರೂ ವೆಚ್ಚದಲ್ಲಿ ಅಗಲೀಕರಿಸಲಾಗುವುದು.

      ರಸ್ತೆಯ ಬಲಬದಿಯಿಂದ 45 ಅಡಿ ಹಾಗೂ ಎಡ ಬದಿಯವರೆಗೆ 45 ಅಡಿ ಈಗಿರುವ ಮದ್ಯದ ರಸ್ತೆಯನ್ನೂ ಸೇರಿ ಒಟ್ಟು 90 ಅಡಿಗಳಷ್ಟು ಅಗಲೀಕರಿಸಲಾಗುತ್ತಿದೆ. ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆಯ ಸಂಯುಕ್ತಾಶ್ರಯದಲ್ಲಿ ನಡೆಸಲಾಗುವುದು. ಈಗಾಗಲೇ ವರದಿಯಾಗರುವಂತೆ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರಿಗೆ ರಾಜ್ಯ ಸರ್ಕಾರ ರಸ್ತೆ ಅಗಲೀಕರಣಕ್ಕಾಗಿಯೇ 16 ಕೋಟಿ ವಿಶೇಷ ಅನುದಾನವನ್ನು ನೀಡಲಾಗಿದೆ, ಇದಕ್ಕಾಗಿ ಪುರಸಭೆ ಎರಡು ಕೋಟಿ ರೂ ಭರಸಲಿದೆ.

     ಇದೀಗ ಪಟ್ಟಣದ ಪ್ರಮುಖ ರಸ್ತೆ ಅಗಲೀಕರಣಕ್ಕೆ ದಿನಗಣನೆ ಮಾಡಲಾಗುತ್ತಿದೆ, ಅಗಲೀಕರಣದ ಮಾರ್ಕಿಂಗ್ ಪ್ರಕ್ರಿಯೆ ಪ್ರಾರಂಭ ಗೊಂಡಿದೆ. ಒಟ್ಟು ನಾಲ್ಕು ಲೈನ್ ರಸ್ತೆ ನಿರ್ಮಾಣವಾಗಲಿದದು ರಸ್ತೆ ಮದ್ಯೆ ಒಂದೂವರೆ ಮೀಟರ್ ರೋಡ್ ಡಿವೈಡರ್ ಅಳವಡಿಸಿ ಸೋಡಿಯಂ, ಸೋಲಾರ್ ದೀಪಗಳನ್ನು ಅಳವಡಿಸಲಾಗುವುದು ಅಲ್ಲದೆ ಪಾದಚಾರಿಗಳ ಸಂಚಾರಕ್ಕೆ ಸ್ದಳಾವಕÁಶವನ್ನ ಕಲ್ಪಿಸಿ ಎರಡೂ ಕಡೆ ಬಾಕ್ಸ್ ಚರಂಡಿ ನಿರ್ಮಿಸಲಾಗುವುದು.

       ಪುಟ್‍ಬಾತ್‍ಗೆ ಗ್ರಿಲ್ ವ್ಯವಸ್ದೆ ಮಾಡಲಾಗುವುದು, ಪಟ್ಟಣದ ಗಾಂಧಿ ವೃತ್ತ, ಹುಳಿಯಾರು ವೃತ್ತ, ಹಿರಿಯೂರು ವೃತ್ತ ಸೇರಿದಂತೆ ಆರು ಕಡೆ ಹೈಮಾಸ್ಕ್ ದೀಪವನ್ನ ಅಳವಡಿಸಲಾಗುವುದು. ಹುಳಿಯಾರು ರಸ್ತೆ ಪಂಪ್ ಹೌಸ್ ಬಳಿ ನೀರಿನ ಕಾರಂಜಿ ನಿರ್ಮಿಸಲಾಗುವುದು ಯು.ಜಿ.ಡಿ ಲೈನ್, ಕೇಬಲ್ ಹಾಕಲು ಸ್ಧಳಾವಕಾಶ ಮಾಡಿಕೊಡಲಾಗುವುದು.

      ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಪಟ್ಟಣಕ್ಕೆ ಬರುವ ವಾಹನಹಳ ಸಂಖ್ಯೆ ಹೆಚ್ಚುತ್ತಲೆ ಇದ್ದು, ಪ್ರಮುಖ ರಸ್ತೆಗಳಲ್ಲಿ ಬೈಕ್, ಆಟೋ, ಕಾರು, ಲಾರಿ, ಟಿಪ್ಪರ್, ಟ್ರಾಕ್ಟರ್ ಹಾಗೂ ಪ್ರಯಾಣಿಕರ ಬಸ್ ಗಳ ಸಂಚಾರದಿಂದ ಸುಗಮ ಸಂಚಾರ ಹದಗೆಟ್ಟು ಹೋಗಿದೆ ಎನ್ನುತ್ತಾರೆ ಪುರಸಭಾ ಸದಸ್ಯರಾದ ನಾಗಣ್ಣ, ಪ್ರಶಾಂತ್, ದಾಳಿಂಬೆ ಗಿರೀಶ್ ಮತ್ತು ಶ್ರೀನಿವಾಸ್.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link