ಕಸ ಸಂಗ್ರಹಣ ಘಟಕದ ಗೋಡೆಯ ಗ್ರೀಲ್ ಕಳ್ಳತನ

ಚಳ್ಳಕೆರೆ

     ನಗರದಲ್ಲಿ ಕಳೆದ ಕೆಲವಾರು ವರ್ಷಗಳಿಂದ ಜನಸಂಖ್ಯೆ ಏರುತ್ತಿದ್ದು, ಕಸವನ್ನು ನಿಯಂತ್ರಿಸುವುದೇ ಕಷ್ಟಕರವಾದ ಸಂದರ್ಭದಲ್ಲಿ ಇಲ್ಲಿನ ನಗರಸಭೆ 6 ಎಕರೆ ಜಾಗದಲ್ಲಿ 25 ಲಕ್ಷ ವೆಚ್ಚದಲ್ಲಿ ಬಳ್ಳಾರಿ ರಸ್ತೆಯಲ್ಲಿ ಕಸ ಸಂಗ್ರಹಣ ಘಟಕವನ್ನು ಸ್ಥಾಪಿಸಿದ್ದು, ಘಟಕದ ಸುತ್ತಲು ನಿರ್ಮಿಸಿದ್ದ ಕಾಂಪೌಂಡ್ ಗೋಡೆಗೆ ಲಗತ್ತಿಸಿದ್ದ ಕಬ್ಬಿಣದ ಗ್ರೀಲ್ ಹಾಗೂ ಆಂಗಲರ್‍ನ್ನು ಯಾರೋ ಕಳ್ಳರು ತನಕ ಮಾಡಿಕೊಂಡು ಹೋಗಿರುತ್ತಾರೆ.

      ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ನಗರ ಪ್ರದೇಶದಿಂದ ಎರಡು ಕಿ.ಮೀ ದೂರವಿರುವ ಕಸ ಸಂಗ್ರಹಣ ಘಟಕದ ಸುತ್ತಲು ಕಾಂಪೌಂಡ್ ಮೇಲ್ಭಾಗದಲ್ಲಿ ಕಬ್ಬಿಣದ ಗ್ರೀಲ್ ಅಳವಡಿಸಿದ್ದು ಬೆಳಗಿನಿಂದ ಸಂಜೆಯವರೆಗೂ ನಗರಸಭೆಯ ಪೌರ ಕಾರ್ಮಿಕರು ಇಲ್ಲಿ ಸದಾಕಾಲ ಕಸ ಸಂಗ್ರಹಣೆಯಲ್ಲಿ ತೊಡಗಿದ್ದು, ರಾತ್ರಿ ವೇಳೆಯಲ್ಲಿ ಕಾವಲುಗಾರ ಇರುವುದಿಲ್ಲ.

      ಇದನ್ನು ಮನಗಂಡ ಯಾರೋ ಕಳ್ಳರು ಮಂಗಳವಾರ ರಾತ್ರಿ ಕಾಂಪೌಂಡ್ ಗೋಡೆಯನ್ನು ಹೊಡೆದು ಕಬ್ಬಿಣದ ಆಂಗಲರ್ ಮತ್ತು ಗ್ರೀಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪೌರಾಯುಕ್ತ ಜೆ.ಟಿ.ಹನುಮಂತರಾಜುರವರ ಸೂಚನೆ ಮೇರೆಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಂತೆ ಮನವಿ ಮಾಡಲಾಗಿದೆ ಎಂದರು.

     ಸ್ಥಳಕ್ಕೆ ಭೇಟಿ ನೀಡಿದ್ದ ನಗರಸಭಾ ಸದಸ್ಯ ಬಿ.ಟಿ.ರಮೇಶ್‍ಗೌಡ, ಲಕ್ಷಾಂತರ ವೆಚ್ಚದಲ್ಲಿ ನಗರಸಭೆ ಈ ಘಟಕ ನಿರ್ಮಿಸಿದ್ದು, ರಾತ್ರಿ ವೇಳೆಯಲ್ಲಿ ಕಾವಲುಗಾರರು ಇಲ್ಲದ ಕಾರಣ ಸುಮಾರು 10 ಸಾವಿರ ಮೌಲ್ಯದ ಕಬ್ಬಿಣದ ಆಂಗಲರ್ ಮತ್ತು ಗ್ರೀಲ್‍ಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ಧಾರೆ. ನಗರಸಭೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ನಗರಸಭೆ ಆಸ್ತಿಯನ್ನು ರಕ್ಷಣೆ ಮಾಡುವ ದೃಷ್ಠಿಯಿಂದ ಇಲ್ಲಿ ಕಾವಲುಗಾರರನ್ನು ನೇಮಿಸುವಂತೆ ಆಗ್ರಹಿಸಿದರು. ಕಸ ಸಂಗ್ರಹಣ ಕೇಂದ್ರದಲ್ಲಿ ಕೋಟ್ಯಾಂತರ ಮೌಲ್ಯದ ಘಟನಗಳನ್ನು ಸ್ಥಾಪನೆ ಮಾಡಿದ್ದು, ಅವುಗಳ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿ, ಪೌರಾಯುಕ್ತರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap