ಭತ್ತಬಿಟ್ಟು ಅಲ್ಪಾವಧಿ ಬೆಳೆಗಳನ್ನು ಬೆಳೆಯಿರಿ : ಪೂವಿತ

ತಿಪಟೂರು

        ಹೇಮಾವತಿ ಜಲಾಶಯದ ನಾಲಾ ನೀರಿನಿಂದ ತಾಲ್ಲೂಕಿನ ಕೆರೆಗಳಾದ ನೊಣವಿನಕೆರೆ, ಆಲ್ಬೂರು, ವಿಘ್ನಸಂತೆ, ಗಂಗನಘಟ್ಟ, ಬಜಗೂರು, ಕೈದಾಳ, ಸಾಸಲಹಳ್ಳಿ(ಚಿಕ್ಕೆರೆ) ಮತ್ತು ಶಿವಪುರ ಕರಡಾಳು ಕೆರೆಗಳು ತುಂಬಿದ್ದು ಸದರಿ ಕೆರೆಗಳಿಂದ ಬೇಸಿಗೆ ಹಂಗಾಮಿನಲ್ಲಿ ರೈತರು ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಬೆಳೆ ಬೆಳೆಗಳನ್ನು ಬೆಳೆಯಲು ನೀರನ್ನು ಬಿಡುತ್ತಿದ್ದು ಭತ್ತ ಬಿಟ್ಟು ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ಉಪವಿಭಾಗಾಧಿಕಾರಿ ಪೂವಿತ ತಿಳಿಸಿದರು.

         ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 2018-19 ಸಾಲಿನಲ್ಲಿ ಮಳೆಯ ಪ್ರಮಾಣ ಕುಂಠಿತವಾಗಿದ್ದು ತಾಲ್ಲೂಕು ಬರಗಾಲದಿಂದ ಕೂಡಿದ್ದು ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವವಿರುವುದರಿಂದ ಲಭ್ಯವಿರುವ ಕೆರೆಯ ನೀರಿನಲ್ಲಿ ಕುಡಿಯುವ ನೀರಿಗೆ ನೀರನ್ನು ಕಾಯ್ದಿರಿಸಿ ಉಳಿಕೆ ನೀರನ್ನು ಅರೆ ನೀರಾವರಿ ಕೃಷಿ ಬೆಳೆಗಳನ್ನು ಬೆಳೆಯಲು ತೀರ್ಮಾನ ಕೈಗೊಳ್ಳಲಾಗಿರುತ್ತದೆ.

           ಇದರಿಂದಾಗಿ ಒಂದು ಎಕರೆ ಭತ್ತ ಬೆಳೆಯಲು ಬೇಕಾಗುವ ನೀರನ್ನು ಉಪಯೋಗಿಸಿಕೊಂಡು ಮೂರು ಎಕರೆ ಅರೆ ನೀರಾವರಿ ಬೆಳೆಗಳನ್ನು ಬೆಳೆಯಬಹುದಾಗಿರುತ್ತದೆ. ಆದ ಕಾರಣ ಜ.22ರಿಂದ ಕೆರೆಗಳಿಂದ ನೀರನ್ನು ಹರಿಸಲು ಕಾನೂನು ರೀತ್ಯಾ ಕ್ರಮವನ್ನು ಕೈಗೊಳ್ಳಲಾಗಿರುತ್ತದೆ. ಆದುದರಿಂದ ಎಲ್ಲಾ ರೈತ ಬಾಂಧವರು ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಅರೆ ನೀರಾವರಿ ಬೆಳೆಗಳಾದ ರಾಗಿ, ಹೈಬ್ರಿಡ್ ಜೋಳ, ಹೈಬ್ರಿಡ್ ಮುಸುಕಿನ ಜೋಳ, ಅಲಸಂದೆ ವiತ್ತು ಅವರೆ ಬೆಳೆಗಳನ್ನು ಮಾತ್ರ ಬೆಳೆಯವುದು ಹೆಚ್ಚು ಸೂಕ್ತವಾಗಿರುತ್ತದೆ ಎಂದ ಅವರು, ಯಾವ ಯಾವ ಬೆಳೆಗಳನ್ನು ಬೆಳೆಯಬೇಕೆಂದು ಕೃಷಿ ಇಲಾಖೆಯಿಂದ ಸೂಕ್ತ ಮಾಹಿತಿ ಪಡೆದು ಹೆಚ್ಚಿನ ಇಳುವರಿ ಪಡೆಯಬಹುದೆಂದರು.

          ರೈತ ಬಾಂಧವರು ಯಾವುದೇ ಕಾರಣಕ್ಕೂ ಕೆರೆಗಳಿಂದ ಅನಧಿಕೃತವಾಗಿ ನೀರನ್ನು ಹರಿಸಿಕೊಳ್ಳಬಾರದು. ಒಂದು ವೇಳೆ ಹರಿಸಿಕೊಳ್ಳಲು ಮುಂದಾದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕರ್ನಾಟಕ ವಿದ್ಯುತ್ ಕಾಯ್ದೆ 135 ಹಾಗೂ ಕರ್ನಾಟಕ ನೀರಾವರಿ ಕಾಯ್ದೆ 1956 ರನ್ವಯ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಲಾಗುವುದು.ಮುಂಬರುವ ದಿನಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಅಭಾವ ಉಂಟಾದಲ್ಲಿ ಯಾವುದೇ ತಿಳುವಳಿಕೆ ನೀಡದೆ ನೀರನ್ನು ಸ್ಥಗಿತಗೊಳಿಸಲಾಗುವುದು.

           ಒಂದು ವೇಳೆ ಅರೆ ನೀರಾವರಿ ಬೆಳೆ ಬೆಳೆಯದೆ ಭತ್ತವನ್ನು ಬೆಳೆದರೆ ಮುಂದಿನ ದಿನಗಳಲ್ಲಿ ನೀರಿನ ಕೊರತೆಯಿಂದ ಉಂಟಾಗುವ ನಷ್ಟಕ್ಕೆ ಸರ್ಕಾರವಾಗಲಿ ತಾಲ್ಲೂಕು ಆಡಳಿತವಾಗಲಿ ಹೊಣೆಯಾಗುವುದಿಲ್ಲ. ರೈತ ಬಾಂಧವರು ಯಾವುದೇ ಕಾರಣಕ್ಕು ಅನವಶ್ಯಕವಾಗಿ ನೀರನ್ನು ವ್ಯರ್ಥ ಮಾಡಬಾರದಾಗಿ ಕೋರಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ತಹಸೀಲ್ದಾರ್ ಆರತಿ, ಕೃಷಿ ಸಹಾಯಕ ನಿರ್ದೇಶಕ ಜಯಣ್ಣ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link