ವಕೀಲರು ಎಲ್ಲಾ ಕ್ಷೇತ್ರದಲ್ಲೂ ಪಾಂಡಿತ್ಯ ಹೊಂದಬೇಕು

ಚಿತ್ರದುರ್ಗ

   ವಕೀಲನಾದವನಿಗೆ ಪ್ರತಿಯೊಂದು ಕ್ಷೇತ್ರದಲ್ಲಿಯು ಕೂಡ ಪಾಂಡಿತ್ಯ ಹೊಂದಿರಬೇಕು ,ಕಾನೂನು ವಿಷಯಕ್ಕಿಂತ ಮತ್ತೊಂದು ಆಸಕ್ತಿದಾಯಕ ವಿಷಯ ಮತೊಂದಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಎಂ.ಮಹದೇವ ಜೋಷಿ ತಿಳಿಸಿದರು.
ಚಿತ್ರದುರ್ಗ ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿ ಕಾನೂನು ವೇದಿಕೆ , ರಾಷ್ಟ್ರೀಯ ಸೇವ ಯೋಜನೆ , ಮಾನವ ಹಕ್ಕುಗಳ ವೇದಿಕೆ , ರೆಡ್ ಕ್ರಾಸ್ ಘಟಕ ಇಕೋ ಕ್ಲಬ್ ಹಾಗೂ ಕ್ರೀಡ ಚಟುವಟಿಕೆ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.

     ನ್ಯಾಯವಾದಿಗಳ ಜೀವನ ಹೇಗೆ ಅಂದ್ರೆ ಹಸಿದಾಗ ಅವರಿಗೆ ಊಟಕ್ಕೆ ಮುದ್ದೆ ಸಿಗುವುದಿಲ್ಲ ಅದೇ ರೀತಿ ಅವರಿಗೆ ಸ್ವಲ್ಪ ಹೆಸರು ಬಂತಂದ್ರೆ ಅವರಿಗೆ ಊಟಕ್ಕೆ ಸಮಯ ಕೂಡ ಸಿಗುವುದಿಲ್ಲ , ವಕೀಲರು ಮಾತನಾಡಿದರೆ ಅವರ ಮಾತಿನಲ್ಲಿ ಒಂದು ಅಗಾದ ಶಕ್ತಿ ಇದೆ ಮುಖ್ಯವಾಗಿ ವಕೀಲರಿಗೆ ಬೇಕಾಗಿರುವುದು ಒಳ್ಳೆಯ ಭಾಷ ಚತುರತೆ , ಪಾಂಡಿತ್ಯ , , ನನಗೆ ಪೆÇಲೀಸ್ ವೃತ್ತಿಯ ಜೊತೆ ವಕೀಲ ವೃತ್ತಿಯನ್ನ ಮಾಡಬೇಕೆಂಬ ಹಂಬಲ ಇದೆ , ನಿಮ್ಮ ವ್ಯಕ್ತಿತ್ವ ನಿಮಗೆ ಸಂತೃಪ್ತಿ ಆಗುವ ಹಾಗೆ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

    ವಕೀಲರಿಗೆ ಕಾನೂನು ಪರಿಪಾಲನೆ ಜೊತೆಗೆ ಮಾನವೀಯ ಸ್ಪರ್ಶ ಮುಖ್ಯ ವಕೀಲರು ಮೊದಲು ಬಡವರು ನೊಂದವರಿಗೆ ನ್ಯಾಯ ಕೊಡಿಸುವುದಕ್ಕಾಗಿ ಮೊದಲ ಆದ್ಯತೆ ನೀಡಬೇಕು. ಯಾರೇ ನ್ಯಾಯ ಬೇಡಿ ಬಂದರೂ ಅವರಿಗೆ ನ್ಯಾಯ ಕೊಡಿಸುವ ಮೂಲಕ ಮಾನವೀಯತೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಬೇಕು. ಒಮ್ಮೊಮ್ಮೆ ಕಾನೂನು ಪರಿಪಾಲನೆ ಮಾಡುವಾಗ ಮಾನವೀಯ ಸ್ಪರ್ಶ ಕೂಡ ಅಗತ್ಯ. ಕೆಲವು ನ್ಯಾಯಾಧೀಶರು ಮಾನವೀಯತೆಯನ್ನು ಎತ್ತಿ ಹಿಡಿದಿರುವ ಉದಾಹರಣೆಗಳಿವೆ. ಅಂತೆಯೇ ವಕೀಲರು ಸಹ ಅದೇ ದಾರಿಯಲ್ಲಿ ಸಾಗಬೇಕು ಎಂದರು.

    ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂಕೋರ್ಟ್ ನೀಡುವ ತೀರ್ಪುಗಳ ಬಗ್ಗೆ ಗಂಭೀರವಾಗಿ ಅಧ್ಯಯನ ನಡೆಸಬೇಕು. ಕಾನೂನು ಪದವಿ ಪಡೆದ ತಕ್ಷಣ ಓದುವುದು ಪೂರ್ಣಗೊಳ್ಳುವುದಿಲ್ಲ. ಓದಿಗೆ ಕೊನೆಯೇ ಇಲ್ಲ. ನಿರಂತರ ಅಧ್ಯಯನ ಮಾಡಿದರೆ ಮಾತ್ರ ಹೊಸ ಹೊಸ ವಿಚಾರಗಳನ್ನು ತಿಳಿದುಕೊಂಡು ಎದುರಾಳಿ ವಕೀಲರನ್ನು ವಾದದ ಮೂಲಕ ಎದುರಿಸಬಹುದು ಎಂದು ಹೇಳಿದರು.

     ಕೆಲವರು ವಕೀಲರು ವಾದ ಮಾಡಲು ಬಂದರೆ ಸಾಕು ಎದುರಾಳಿಗಳು ಹೆದರುತ್ತಾರೆ. ಅಂದರೆ ವಕೀಲರುಗಳು ಕಾನೂನು ಚೆನ್ನಾಗಿ ತಿಳಿದುಕೊಂಡಿರುವುದಲ್ಲದೆ ತೀರ್ಪುಗಳ ಅಧ್ಯಯನ ಮಾಡಿರುತ್ತಾರೆ. ಕೆಲವೊಮ್ಮೆ ಯಾವುದೇ ಪ್ರಕರಣ ಇಂಥ ವಕೀಲರು ತೆಗೆದುಕೊಂಡರು ಜಯ ಗ್ಯಾರಂಟಿ. ಅದಕ್ಕಾಗಿ ಯುವ ವಕೀಲರು ಕಾನೂನು ಪದವಿ ಮುಗಿದ ಮೇಲೂ ಅಧ್ಯಯನ ಶೀಲರಾಗುವಂತೆ ಸಲಹೆ ನೀಡಿದರು.

     ವಕೀಲರಿಗೆ ಮುಖ್ಯವಾಗಿ ಭಾಷಾ ಪಾಂಡಿತ್ಯ, ಸಂವಹನ ಕೌಶಲ್ಯ ಅಗತ್ಯವಾಗಿದೆ. ಕಾನೂನು ಪದವಿ ಪಡೆದರೂ ಭಾಷಾ ಪಾಂಡಿತ್ಯ ಇಲ್ಲದಿದ್ದರೆ ವಾದ ಮಾಡುವುದು ಕಷ್ಟ. ಶಬ್ದ ಬಳಕೆಯಲ್ಲಿಯೂ ಅತ್ಯಂತ ಎಚ್ಚರಿಕೆ ವಹಿಸಬೇಕು. ಕಾನೂನು ಜೊತೆ ಜೊತೆಯಲ್ಲಿಯೂ ಇತರೆ ಕ್ಷೇತ್ರಗಳ ಬಗ್ಗೆ ಮಾಹಿತಿ ಪಡೆಯುವುದು ಮುಖ್ಯವಾಗಿದೆ. ಕೆಲವೊಮ್ಮೆ ಯಾವುದಾದರೂ ಪ್ರಕರಣದ ವಿಚಾರಣೆಯಲ್ಲಿ ಕಾನೂನು ಹೊರತುಪಡಿಸಿ ಉಳಿದ ವಿಚಾರಗಳ ಬಗ್ಗೆ ಚರ್ಚೆ ನಡೆಸುವಾಗ ಇದರ ಬಗ್ಗೆ ಮಾಹಿತಿ ಇಲ್ಲದಿದ್ದರೆ ವಾದ ಮಾಡಲು ಕಷ್ಟವಾಗುತ್ತದೆ. ಆಗ ಎದುರಾಳಿ ವಕೀಲರಿಗೆ ಸುಲಭವಾಗುತ್ತದೆ ಎಂದು ಎಚ್ಚರಿಸಿದರು.

    ವಕೀಲರು ಕರ್ತವ್ಯ ನಿರ್ವಹಿಸಿದರೆ ಸಾಲದು ನಿರ್ವಹಿಸಿದ ಕರ್ತವ್ಯ ಸಂತೃಪ್ತಿಯಾಗಿದೆ ಎಂಬ ಆತ್ಮವಲೋಕನ ಮಾಡಿಕೊಳ್ಳಬೇಕು. ಅಲ್ಲದೆ ಮಾನವೀಯ ಸ್ಪರ್ಶ ಮರೆತರೆ ಯಶಸ್ವಿಯಾಗಲು ಸಾಧ್ಯವಿಲ್ಲ. ವಕೀಲರು ನಿರಂತರವಾಗಿ ಅಧ್ಯಯನ ಮಾಡಿ ಉತ್ತಮ ಜ್ಞಾನರ್ಜನೆ ಪಡೆದುಕೊಂಡು ಬಡವರ ನೊಂದವರ ಕಣ್ಣೀರು ಒರೆಸುವಂತೆ ಮನವಿ ಮಾಡಿದರು.

    ಡಾ,ನಟರಾಜ್ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್ ಸುದಾದೇವಿ ವಹಿಸಿದ್ದರು , ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯನ್ನ ಸರಸ್ವತಿ ಕಾನೂನು ಕಾಲೇಜಿನ ಉಪನ್ಯಾಸಕ , ಕಾನೂನು ವೇದಿಕೆಯ ಗೌರವಾಧ್ಯಕ್ಷ ಶ್ರೀ ಶೈಲ ನೇರವೇರಿಸಿದರು. ನಿರುಪಣೆಯ ಮತ್ತು ವಂದನಾರ್ಪಣೆಯನ್ನು ಸರಸ್ವತಿ ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪಿಸಿ ಮುರುಗೇಶ್ ವಹಿಸಿದರು.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap