ಹಿರಿಯೂರು:
ವಾಣಿವಿಲಾಸ ಪತ್ತಿನ ಸಹಕಾರ ಸಂಘವು ಪ್ರಸ್ತುತ ಸಾಲಿನಲ್ಲಿ 6 ಕೋಟಿ 71ಲಕ್ಷ 92 ಸಾವಿರದ 244 ರೂಗಳ ವಹಿವಾಟು ನಡೆಸಿದ್ದು, ಸಂಘದ ದುಡಿಯುವ ಬಂಡವಾಳ 1 ಕೋಟಿ 57 ಲಕ್ಷದ 49 ಸಾವಿರದ 539 ರೂಗಳಿದ್ದು, ಈ ಸಾಲಿನಲ್ಲಿ 4 ಲಕ್ಷ 74 ಸಾವಿರದ 793 ರೂ.ಗಳ ನಿವ್ವಳ ಲಾಭಗಳಿಸಿ ಪ್ರಗತಿಯ ಹಾದಿಯಲ್ಲಿ ಸಾಗಿದೆ. ಎಂಬುದಾಗಿ ಸಂಘದ ಅಧ್ಯಕ್ಷ ಆಲೂರು ಹನುಮಂತರಾಯಪ್ಪ ಹೇಳಿದರು.
ಹಿರಿಯೂರು ನೆಹರುಕ್ರೀಡಾಂಗಣದ ವಾಣಿವಿಲಾಸವಿದ್ಯಾಸಂಸ್ಥೆಯ “ವಾಣಿವಿಲಾಸಸಭಾಂಗಣ”ದಲ್ಲಿ ಏರ್ಪಡಿಸಲಾಗಿದ್ದ, ವಾಣಿವಿಲಾಸ ಪತ್ತಿನ ಸಹಕಾರ ಸಂಘದ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾಣಿವಿಲಾಸ ಪತ್ತಿನ ಸಹಕಾರ ಸಂಘವು ತಮ್ಮೆಲ್ಲರ ಸಹಕಾರದೊಂದಿಗೆ 17 ವರ್ಷಗಳನ್ನು ಪೂರೈಸಿ 18ನೇ ವರ್ಷಕ್ಕೆ ಕಾಲಿಟ್ಟಿದೆ. ನಮ್ಮ ಸಂಘವು ಷೇರುದಾರ ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ಪ್ರಗತಿಯ ಪಥದಲ್ಲಿ ಸಾಗಿದೆ. ಎಂಬುದಾಗಿ ಅವರು ಹೇಳಿದರು.
ಗ್ರಾಹಕರಪರವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸಿದ ಜಿ.ಪಂ.ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್ ಮಾತನಾಡಿ, ವಾಣಿವಿಲಾಸ ಪತ್ತಿನ ಸಹಕಾರ ಸಂಘ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಹೆಸರುಗಳಿಸಿದ್ದು, ಎಲ್ಲಿಯವರೆಗೆ ಸಂಘದ ಸದಸ್ಯರು ಸಂಘದಿಂದ ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಾರೋ ಅಲ್ಲಿಯವರೆಗೆ ಸಂಘ ಸಧೃಡವಾಗಿರಲು ಸಾಧ್ಯ ಎಂದರು
ಪ್ರೋ.ಕೀರ್ತಿಕುಮಾರ್ ಮಾತನಾಡಿ, ಯಾವುದೇ ಒಂದು ಸಂಘಸಂಸ್ಥೆ ಅಭಿವೃದ್ದಿ ಹೊಂದಲು ಜನರಲ್ಲಿ ನಂಬಿಕೆ ವಿಶ್ವಾಸವಿರುವಂತಹ ಉತ್ತಮವಾದ ಆಡಳಿತ ಮಂಡಳಿ ಹೊಂದಿರುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ. ಎಂಬುದಾಗಿ ಹೇಳಿದರು.
ವಾರ್ಷಿಕ ಮಹಾಸಭೆಯ ನೋಟಿಸನ್ನು ಸಂಘದ ವ್ಯವಸ್ಥಾಪಕರಾದ ಶ್ರೀಮತಿ ಹೇಮಲತಾ ಸಭೆಯಲ್ಲಿ ಓದಿದರು. ಸಂಘದ ಆಡಳಿತಮಂಡಳಿ ವರದಿಯನ್ನು ನಿರ್ದೇಶಕ ಆರ್.ವಸಂತ್‍ಕುಮಾರ್ ಸಭೆಯಲ್ಲಿ ಮಂಡಿಸಿದರು. 2017-18ನೇ ಸಾಲಿನ ಜಮಾ ಖರ್ಚು ಹಾಗೂ ಲಾಭ ನಷ್ಟದ ತಃಖ್ತೆಯನ್ನು ಸಂಘದ ಉಪಾಧ್ಯಕ್ಷರಾದ ಪಿ.ಆರ್.ಸತೀಶ್‍ಬಾಬು ಸಭೆಯಲ್ಲಿ ಮಂಡಿಸಿದರು. 2018-19ನೇ ಸಾಲಿನ ಅಂದಾಜು ಆಯವ್ಯಯವನ್ನು ನಿರ್ದೇಶಕ ಹೆಚ್.ನಟರಾಜ್ ಸಭೆಯಲ್ಲಿ ಮಂಡಿಸಿದರು. ಕು||ಆಯಿಷ 2017-18ನೇ ಸಾಲಿನ ಆಸ್ತಿ ಜವಾಬ್ದಾರಿ ತಃಖ್ತೆಯನ್ನು ಸಭೆಗೆ ಓದಿ ತಿಳಿಸಿದರು. ಇದೇ ಸಂದರ್ಭದಲ್ಲ್ಲಿ ಸಂಘಕ್ಕೆ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದ ಹಾಗೂ ಸಂಘದ ಠೇವಣಿದಾರ ಸದಸ್ಯರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಆದ ಬಿ.ಎಸ್.ರಘುನಾಥ್ ಹಾಗೂ ವಾಣಿವಿಲಾಸ ಪತ್ತಿನಸಹಕಾರಸಂಘದ ಉಪಾಧ್ಯಕ್ಷರಾದ ಪಿ.ಆರ್.ಸತೀಶ್‍ಬಾಬು, ಹಾಗೂ ನಿರ್ದೇಶಕರುಗಳಾದ ಆರ್.ವಸಂತಕುಮಾರ್, ಹೆಚ್.ನಟರಾಜ್, ಹೆಚ್.ಎಸ್.ಪುರುಷೋತ್ತಮ್, ಶ್ರೀಮತಿ ಉಮಾದೇವಿ, ಇವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಾಣಿವಿಲಾಸಪತ್ತಿನ ಸಹಕಾರಸಂಘದ ವ್ಯವಸ್ಥಾಪಕರಾದ ಶ್ರೀಮತಿ ಹೇಮಲತಾ ಲೇಖಪಾಲಕರಾದ ಕೆ.ಕಾಂತರಾಜ್, ನಗದುಗುಮಾಸ್ತರಾದ ಆರ್.ಎನ್.ಪ್ರಭಾಕರ್, ಕು||ಆಯಿಷ, ಕು||ನದಿಯಾ ಹಾಗೂ ಪಿಗ್ಮಿ ಸಂಗ್ರಹಗಾರರಾದ ಪಿ.ಎನ್.ಪರಮೇಶ್ವರಪ್ಪ, ಎನ್.ಕೃಷ್ಣಮೂರ್ತಿ, ಹಾಗೂ ಸಿಬ್ಬಂದಿ ವರ್ಗದವರು, ಷೇರುಸದಸ್ಯರು ಹಾಗೂ ಗ್ರಾಹಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ