ಮೈಸೂರು
ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ಆಂತರ ಕಾಯ್ದುಕೊಳ್ಳುತ್ತಿರುವ ಜಿಟಿಡಿ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಎಚ್.ಡಿ.ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಆಗಲು ಅಡ್ಡಗಾಲು ಹಾಕಿದ್ದ ಕುಮಾರಸ್ವಾಮಿ, ಇನ್ನು ನನ್ನನ್ನು ಮುಖ್ಯಮಂತ್ರಿ ಮಾಡಲು ಬಿಡುತ್ತಿದ್ದರಾ” ಎಂದಿದ್ದಾರೆ. ವಿಶ್ರಾಂತಿಗಾಗಿ ಅಮೆರಿಕಾ ಸೇರಿದಂತೆ ವಿದೇಶ ಪ್ರವಾಸ ಮಾಡಿದ್ದ ಕುಮಾರಸ್ವಾಮಿ, ಪ್ರತೀ ಬಾರಿ ಸಾ.ರಾ.ಮಹೇಶ್ ಅವರನ್ನೆ ಕರೆದುಕೊಂಡು ಹೋಗುತ್ತಿದ್ದರು. ಆಗ ಅವರಿಗೆ ನನ್ನ ನೆನಪಾಗಲಿಲ್ಲ” ಎಂದು ಜಿಟಿಡಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.” ಸಿದ್ದರಾಮಯ್ಯ ಅಥವಾ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ರೇವಣ್ಣ ಅವರನ್ನು ಡಿಸಿಎಂ ಮಾಡುವ ಆಯ್ಕೆ ಕುಮಾರಸ್ವಾಮಿ ಅವರಿಗಿತ್ತು. ಅದಕ್ಕೆ ಕುಮಾರಸ್ವಾಮಿ ಒಪ್ಪಲಿಲ್ಲ. ಒಪ್ಪಿದ್ದರೆ ಸಮ್ಮಿಶ್ರ ಸರಕಾರ ಉಳಿದಿರುತ್ತಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ