ಸಚಿವರಿಂದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ …!!

ಚೇಳೂರು

        ಗ್ರಾಮಗಳ ಅನೇಕ ಮೂಲಭೂತ ಸೌಲಭ್ಯಗಳನ್ನು ಗ್ರಾಮವಿಕಾಸ ಯೋಜನೆಯ ಮುಖಾಂತರ ಮಾಡಿಸುತ್ತಿರುವ ಸರ್ಕಾರದ ಯೋಜನೆಯಾಗಿದೆ. ಈ ಕಾಮಗಾರಿ ನಡೆಯುವಾಗ ಸಾರ್ವಜನಿಕರು ಸಹಕಾರವನ್ನು ನೀಡಿಕೊಂಡು ನಿಮ್ಮ ಗ್ರಾಮದಲ್ಲಿ ಉತ್ತಮವಾದ ಅಭಿವೃದ್ಧಿಯ ಕೆಲಸವನ್ನು ಮಾಡಿಸಿಕೊಳ್ಳಿ ಎಂದು ಸಣ್ಣಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು.

       ಇವರು ಹಾಗಲ್ವಾಡಿ ಹೋಬಳಿ ಶಿವಪುರ ಪಂಚಾಯತಿಯ ಗಳಿಗೆಕೆರೆ ಮತ್ತು ಅಪ್ಪಣ್ಣನಹಳ್ಳಿಯ ಗ್ರಾಮಗಳಿಗೆ ಕೆಆರ್‍ಐಡಿಎಲ್ ವತಿಯಿಂದ 2017-18 ಸಾಲಿನ ಮುಖ್ಯಮಂತ್ರಿಗಳ ಗ್ರಾಮವಿಕಾಸದ ಕ್ರಿಯಾಯೋಜನೆಯಲ್ಲಿ ಈ 2 ಗ್ರಾಮಕ್ಕೂ ತಲಾ 100 ಲಕ್ಷ ರೂಗಳ ಅನುದಾನವನ್ನು ಮಂಜೂರು ಮಾಡಲಾಗಿದ್ದು, ಆ ಕಾಮಗಾರಿಗಳ ಪ್ರಾರಂಭಕ್ಕೆ ಗುದ್ದಲಿ ಪೂಜೆ ಮಾಡಿ ಮಾತನಾಡುತ್ತಾ, ಈ ಯೋಜನೆಯಲ್ಲಿ ಗ್ರಾಮದೊಳಗಿನ ಪರಿಸರವನ್ನು ಉತ್ತಮ ಪಡಿಸಲು ರಸ್ತೆ ಚರಂಡಿಗೆ ಶೇ.50 ಗ್ರಂಥಾಲಯ/ ಸಾಹಿತಿ ಕಲಾವಿದರ ಸ್ಮಾರಕ/ಸಭಾಭವನ/ಬಯಲು ರಂಗಮಂದಿರ ನಿರ್ಮಾಣ ಶೇ.12, ಯುವಕ/ಯುವತಿ ಮಂಡಲಿಗಳ ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗಾಗಿ ಜಿಮ್/ಆಟದಮೈದಾನ/ದೇಶಿಕ್ರೀಡೆಗಳಿಗೆ ಶೇ.12, ಸೌರ ಬೆಳಕು ದೀಪಗಳ ಅಳವಡಿಕೆ ಶೇ.3, ವೈಜ್ಞಾನಿಕ ಹಾಗೂ ಅಧುನಿಕ ರೀತಿಯಲ್ಲಿ ಸಂರಕ್ಷಣೆ ಮಾಡುವ ಘಟಕಗಳ ನಿರ್ಮಾಣಕ್ಕೆ ಶೇ.10, ಗ್ರಾಪಂ ನಡವಳಿಕೆಗಳ ಟೆಲಿವಿಷನ್ ಮುಖಾಂತರ ನೇರ ಪ್ರಸಾರ ಹಾಗೂ ಮೂಲ ಸೌಕರ್ಯಕ್ಕೆ ಶೇ.2, ಪುನರುಜ್ಜೀಮನ/ಜೀರ್ಣೋದ್ಧಾರ ಶೇ.6 ಭಾಗದಲ್ಲಿ ಕೆಲಸಗಳು ನಡೆಯ ಬೇಕಾಗಿದೆ. ಇದು ಅವರಿಗೆ ನೀಡಿರುವ ಅವಧಿಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳತ್ತವೆ. ಮೊದಲಿಗೆ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ನಡೆಯುತ್ತವೆ. ಈ ಕಾಮಗಾರಿ ನಡೆಯುವಾಗ ಸಾರ್ವಜನಿಕರು ಸಹಕಾರ ನೀಡಿ.

 ಅಪ್ಪಣ್ಣನಹಳ್ಳಿಯ ಸಾರ್ವಜನಿಕರು ಹಾಗೂ ಮಹಿಳೆಯರಿಂದ ಸಚಿವರಿಗೆ ಮುತ್ತಿಗೆ:

       ನಮ್ಮ ಗ್ರಾಮದಲ್ಲಿ ಕುಡಿಯಲು ನೀರು ಇಲ್ಲ, ನೀರು ಬೇಕಾದರೆ ಸುಮಾರು ದೂರ ಹೋಗಬೇಕು. 5 ರಿಂದ 6 ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ನಮ್ಮ ಗ್ರಾಮದಲ್ಲಿ 300 ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದೇವೆ. ಜೊತೆಗೆ ಸರ್ಕಾರಿ ಶಾಲೆಯು ಇದೆ ಹಾಗೂ ಸಾರ್ವಜನಿಕರಿಗೆ ಸಮುದಾಯ ಭವನವಿಲ್ಲ. ಹೀಗೆ ಅನೇಕ ರೀತಿಯ ಸೌಲಭ್ಯಗಳ ಬಗ್ಗೆ ಅವರ ಗಮನಕ್ಕೆ ತಂದ ಘಟನೆ ನಡೆಯಿತು.

ಸ್ಥಳದಲಿಯೇ ಸೂಚನೆ ನೀಡಿದ ಸಚಿವ:

       ಸ್ಥಳದಲ್ಲಿಯೇ ಸಚಿವ ಎಸ್.ಆರ್.ಶ್ರೀನಿವಾಸ್ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಮೊದಲು ಈ ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಶಿವಪುರದಿಂದ ಗಳಿಗೆಕೆರೆಯ ಸಂಪರ್ಕದ ರಸ್ತೆಗೆ ಜಲ್ಲಿ ಹಾಕಿ ಸುಮಾರು ತಿಂಗಳಾದರೂ ಡಾಂಬರೀಕರಣ ಮಾಡದೆ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಡಾಂಬರೀಕರಣ ಮಾಡವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.

       ಈ ಕಾರ್ಯಕ್ರಮದಲ್ಲಿ ಪಿಡಿಒ ಕವಿತಾ, ಗುತ್ತಿಗೆದಾರ ಈಶ್ವರಯ್ಯ, ಗ್ರಾಪಂ ಅಧ್ಯಕ್ಷೆ ಕಮಲಮ್ಮ, ಗುರುರೇಣುಕಾರಾಧ್ಯ, ಗ್ರಾಪಂ ಸದಸ್ಯರಾದ ಮೋಹನ್‍ಕುಮಾರ್, ಗೀತಾ, ಪಾರ್ವತಮ್ಮ, ರೇಣುಕಮ್ಮ, ಸಾಕಮ್ಮ, ಸಿದ್ದಲಿಂಗಮೂರ್ತಿ, ರಾಜಕುಮಾರ್, ನಿಗಮದ ನಂಜರಾಜಯ್ಯ, ಮಂಜು ಹಾಗೂ ಇತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap