ಚಿತ್ರದುರ್ಗ;
ಯುವಜನಾಂಗ ಗುರಿ ಇಟ್ಟುಕೊಂಡು ಕಷ್ಟಪಟ್ಟು ಒದಿದರೆ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕಗಳನ್ನು ಗಳಿಸಲು ಸಾಧ್ಯವಾಗುತ್ತೆದೆ ಎಂದು ಯು.ಪಿ ಎಸ್. ಸಿ ಪರೀಕ್ಷೆಯಲ್ಲಿ 680 ನೇಯ ರ್ಯಾಂಕನ್ನು ಪದೆಡು ಚಿತ್ರದುರ್ಗ ಜಿಲ್ಲೆಗೆ ಹೆಮ್ಮ ತಂದ ಡಾ. ಡಿ. ಶ್ರೀಕಾಂತ್ ಹೇಳಿದರು.
ಶನಿವಾರ ಅವರು ಇಲ್ಲಿ ಪಿ.ಕೆ.ಎಸ್. ಎಜುಕೇಷನ್ ಫೌಂಡೇಷನ್ ಸಂಸ್ಥೆ ವತಿಯಿಂದ ಸನ್ಮಾನ ವನ್ನು ಸ್ವೀಕರಿಸಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿಭೆಗೆ ಕೊರೆತೆ ಇಲ್ಲವಾದರೂ ಈ ಜಿಲ್ಲೆಯ ಶೈಕ್ಷಣಿಕ ಫಲಿತಾಂಶ ಸುಧಾರಿಸದಿರುವುದು ಎಲ್ಲರಿಗೂ ನಿರಾಸೆ ಮೂಡಿಸಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಯುವಜನರು ತಮ್ಮ ಭವಿಷ್ಯದ ಬಗ್ಗೆ ಕನಸು ಕಾನಬೇಕು ಹಾಗು ಗುರಿ ತಲುಪವತನಕ ನಿರಂತರ ಪ್ರಯತ್ನವನ್ನು ಮುಂದುವರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ. ಎಲ್. ಸುಧಾಕರ್ ರವರು ಮಾತನಾಡುತ್ತಾ ಸಮಾಜದಲ್ಲಿ ಶೋಷಿತ ವರ್ಗದ ಯುವಕ ಸಹಾ ಇಂತಹಾ ಸಾಧನೇ ಮಾಡಿರುವುದು ಜಿಲ್ಲೇಗೆ ಹೆಮ್ಮೆ ತಂದಿರುವ ವಿಷಯವಾಗಿದೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಯುವಜನರು ಇವರ ಸಾಧನೆ ಇಂದ ಸ್ಪೂರ್ತಿ ಪಡೆದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಯಾಗಬೇಕೆಂದು ಆಶಯವನ್ನು ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ ಎಂ ಲಕ್ಷ್ಮೀನಾರಾಯಣ, ಸರ್ಕಾರಿ ಕಲಾ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಕೆ. ರಾಮರಾವ್, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಸಿ ಚನ್ನಕೇಶವ, ಪಿ.ಕೆ.ಎಸ್. ಸಂಸ್ಥೆಯ ಮುಖ್ಯಸ್ಥರಾದ ಪಿ ಕೆ ಸಂತೋಷ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಅರ್ಥ ಶಾಸ್ತ್ರದ ಉಪನ್ಯಾಸಕರಾದ ಲಕ್ಷ್ಮೀಕಾಂತ ಪ್ರಸ್ತಾವಿಕ ನುಡಿಗಳನ್ನು ಹೇಳಿದರು. ಕಾರ್ಯಕ್ರಮವವನ್ನು ಉಪನ್ಯಾಸಕರಾದ ಮಹಂತೇಶ ನಿರೂಪಿಸಿದರು. ಡಾ. ಅಜಯ್ ರವರು ಸ್ವಗತ ಕೋರಿದರು. ಮೇಘನ ಪ್ರಾರ್ಥಿಸಿದರು. ರವಿರಂಜನ್ ವಂದನಾರ್ಪನೆ ನಿರ್ವಹಿಸಿದರು.