ತಿಪಟೂರು
2019-20ನೇ ಸಾಲಿಗೆ ತಿಪಟೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್.ಲಕ್ಷ್ಮಣ್ ಮರು ಆಯ್ಕೆಗೊಂಡಿದ್ದಾರೆ.
ನಗರದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್.ಲಕ್ಷ್ಮಣ್, ಕಾರ್ಯದರ್ಶಿಯಾಗಿ ಎಂ.ಸಿ.ನಟರಾಜು ಆಯ್ಕೆಯಾಗಿದ್ದಾರೆ. ಇನ್ನು ಉಳಿದ ಎಲ್ಲಾ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಉಪಾಧ್ಯಕ್ಷರಾಗಿ ಫೌಜಿಯಾ ಖಾನಂ, ಸಹ ಕಾರ್ಯದರ್ಶಿ ಹೆಚ್.ಎನ್.ಶಂಕರಮೂರ್ತಿ, ಖಜಾಂಚಿ ಸ್ಥಾನಕ್ಕೆ ಉಮೇಶ್ ರಾವ್, ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಬಿ.ಜಿ.ಚಂದ್ರಪ್ಪ, ಹೆಚ್.ಎಸ್.ಕೃಷ್ಣೇಗೌಡ, ಮಡೆನೂರು ಬಸಪ್ಪ, ಜಿ.ಆರ್.ಮಂಜುನಾಥಸ್ವಾಮಿ, ಕೆ.ಬಿ.ಬಾಲಕೃಷ್ಣ, ಎಸ್.ವಿ.ಶೋಭಾದೇವಿ, ಹೇಮಪ್ರಶಾಂತ್.ಜಿ.ಎಸ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ವಕೀಲ ಭರತ್‍ರಾಜ್ ಕಾರ್ಯನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
