ಬೆಂಗಳೂರು:
ಬಳ್ಳಾರಿ ಜಿಲ್ಲೆಯ ಆರು ಜನರಲ್ಲಿ ಹೆಚ್ 1 ಎನ್ 1 ಪಕ್ಷಿ ಜ್ವರ ಕಾಣಿಸಿಕೊಂಡಿದೆ. ಸಂಡೂರು, ಹಡಗಲಿಯಲ್ಲಿ ತಲಾ ಒಬ್ಬರು, ಬಳ್ಳಾರಿ ನಗರದ ಇಬ್ಬರು ಕುರುಗೋಡು ತಾಲೂಕಿನ ಓರ್ವಾಯಿ ಗ್ರಾಮದ ವಿದ್ಯಾರ್ಥಿ ಹಾಗೂ ಕುರುಗೋಡಿನ ಒಬ್ಬರಲ್ಲಿ ಈ ರೋಗಾಣು ಕಾಣಿಸಿಕೊಂಡಿದೆ.
ಈ ರೋಗಿಗಳ ರಕ್ತ ಪರೀಕ್ಷೆ ನಡೆಸಿ ಶಂಕಿತ ಮಾದರಿಗಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿದಾಗ ರೋಗಾಣು ಇರುವುದು ಖಚಿತವಾಗಿದೆ. ಈ ರೋಗಾಣು ಪತ್ತೆಯಾಗಿರುವವರಿಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ರೋಗಾಣು ಪತ್ತೆಯಾದವರಿಗೆ ದಿನಕ್ಕೆ ಎರಡರಂತೆ ಹತ್ತು ದಿನಗಳ ಕಾಲ ಟ್ಯಾಮಿಪ್ಲೂ ಮಾತ್ರೆಗಳನ್ನು ನೀಡುತ್ತಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವರಾಜ್ ಹೆಗ್ಗಡೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 1664 ಶಂಕಿತ ಪ್ರಕರಣಗಳ ರಕ್ತ ಪರೀಕ್ಷೆ ನಡೆಸಿದ್ದು ಅವರಲ್ಲಿ 58 ಜನರಿಗೆ ಡೆಂಗೂ ಜ್ವರ ಕಾಣಿಸಿಕೊಂಡಿದೆ. 84 ಶಂಕಿತರಲ್ಲಿ 29 ಜನರಲ್ಲಿ ಚಿಕನ್ ಗುನ್ಯ, 09 ಜನರಲ್ಲಿ ಮಲೇರಿಯ, ರೋಗ ಕಾಣಿಸಿಕೊಂಡಿರುವುದನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
