ಎಚ್.1ಎನ್1 ಭೀತಿ ಹಿನ್ನೆಲೆ ತ್ವರಿತ ಕ್ರಮಕ್ಕೆ ಸೂಚನೆ

ಬೆಂಗಳೂರು

       ರಾಜ್ಯದಲ್ಲಿ ಎಚ್.1ಎನ್1 ಭೀತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಮುನ್ನೆಚ್ಚರಿಕ ಕ್ರಮ ತೆಗೆದುಕೊಳ್ಳುವಂತೆ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಇಂದಿಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

       ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಸೂಚನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಚ್1 ಎನ್1 ವೈರಾಣು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಈ ವರೆಗೆ ಒಟ್ಟುಬ456 ಪ್ರಕರಣಗಳು ದಾಖಲಾಗಿವೆ ಎಂದರು.

       ಜನವರಿ 2018ರಿಂದ ಇಲ್ಲಿಯವರಗೆ ಒಟ್ಟು 4902 ಜನರನ್ನು ಪರೀಕ್ಷಿಸಲಾಗಿದೆ. ಈ ಪೈಕಿ 456 ಪ್ರಕರಣಗಳು ಎಚ್1 ಎನ್1 ರೋಗೋಣು ಇರುವುದು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಈ ಸಂಬಂಧ ಈಗಾಗಲೇ ಎಲ್ಲ ಭಾಗದ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ರೀತಿಯ ಜ್ವರ ಕಂಡು ಬಂದರು ಅಥವಾ ಈ ರೋಗಾಣುವಿನ ಲಕ್ಷಣದ ಅನುಭವವಾದರೆ ಕೂಡಲೇ ಜನರು ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದರು.

         ಪ್ರತಿ ವರ್ಷ ಎಚ್1ಎನ್1 ಪ್ರಕರಣಗಳು ದಾಖಲಾಗುತ್ತಿವೆ. 2015 ರಲ್ಲಿಯೇ ಈ ರೋಗಾಣುವಿನಿಂದ 94 ಮಂದಿ ಸಾವನ್ನಪ್ಪಿದ್ದರು. ಆ ನಂತರದ ವರ್ಷದಲ್ಲಿ ಮುಂಜಾಗೃತಿ ವಹಿಸಿದ್ದರಿಂದ ಈ ರೋಗಾಣುವಿನಿಂದ ಸಾವನ್ನಪ್ಪಿದವರ ಸಂಖ್ಯೆ ಇಳಿಮುಖವಾಗಿದೆ. 2017 ರಲ್ಲಿ 3000 ಪ್ರಕರಣಗಳು ಪತ್ತೆಯಾಗಿದ್ದವು. ಈ ವರ್ಷ ಕೂಡ ಎಚ್1ಎನ್1 ಆತಂಕ ಹರಡುತ್ತಿದೆ. ಈ ಬಗ್ಗೆ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆದರೆ ಗಾಬರಿಯಾಗದಂತೆ ಇಂಥ ಲಕ್ಷಣ ಕಂಡು ಬಂದರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

       ಉತ್ತರ ಕರ್ನಾಟಕ ಭಾಗದಲ್ಲಿ ಎಚ್1 ಎನ್1 ಪತ್ತೆಹಚ್ಚಲು ಯಾವುದೇ ಲ್ಯಾಬ್ ವ್ಯವಸ್ಥೆ ಇಲ್ಲ. ಹಾಗಾಗಿ ಆ ಭಾಗದಲ್ಲಿ ಸರ್ಕಾರಿ ಲ್ಯಾಬ್ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.

       ಬಿಬಿಎಂಪಿ ವ್ಯಾಪ್ತಿಯಲ್ಲಿ ಇಬ್ಬರು ಎಚ್1 ಎನ್1 ನಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಗಾಳಿಯಲ್ಲಿ ರೋಗ ಹರಡುವುದರಿಂದ ರೋಗಿಯಿಂದ ಸ್ವಲ್ಪ ದೂರ ಇರುವುದು ಒಳ್ಳೆಯದು ಎಂದರು.

ದಾಖಲಾದ ಪ್ರಕರಣಗಳು-

ವರ್ಷ ಎಚ್1ಎನ್1ನಿಂದ ಸಾವನ್ನಪ್ಪಿದವರ ಸಂಖ್ಯೆ
2015- 94 ಮಂದಿ
2016- ಯಾರೂ ಇಲ್ಲ
2017- 15 ಮಂದಿ
2018- 6 ಮಂದಿ

ಎಚ್1ಎನ್1ನಿಂದ 2018ರಲ್ಲಿ ಸಾವನ್ನಪ್ಪಿದವರ ಸಂಖ್ಯೆ 

ಬೆಂಗಳೂರು- 2
ಬೆಂಗಳೂರು ಗ್ರಾಮಾಂತರ- 1
ಅರಸೀಕೆರೆ -1
ತುಮಕೂರು- 1
ಕಲುಬುರಗಿ- 1

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap