ಬೆಂಗಳೂರು
ಬೆಲ್ ಟಿಪಿಓ ಕಂಪನಿಯ ಸಾಫ್ಟ್ವೇರ್ ಹ್ಯಾಕ್ ಮಾಡಿ ಪೈರಸಿ ಮಾಡಿ ಮಾರಾಟಮಾಡಿದ್ದ ತಮಿಳುನಾಡಿನ ಐನಾತಿ ಸಾಫ್ಟ್ವೇರ್ ಇಂಜಿನಿಯರ್ನನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಚೆನ್ನೈನ ಅಣ್ಣಾನಗರ್ ವೆಸ್ಟ್ನ ಪವಿತ್ರ ಸಿಂಹ (38) ಬಂಧಿತ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ.ಲ್ಯಾಪ್ಟಾಪ್,ಮೊಬೈಲ್ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಬನಶಂಕರಿಯಲ್ಲಿ ವಿನೋದ್ ಬೆಲ್ಲಾಂಕೊಂಡ ಅವರು ನಡೆಸುತ್ತಿದ್ದ ಬೆಲ್ ಟಿಪಿಓ ಕಂಪನಿಯು ಅಭಿವೃದ್ಧಿಪಡಿಸಿದ ಬೆಲ್ ಮಾರ್ಕೆಟ್ ಪ್ರೊಫೈಲ್, ಪ್ರೋ ಅಂಡ್ ಬೆಲ್ ಆರ್ಡರ್ ಫ್ಲೋ ಫ್ರೋ ಹೆಸರಿನ ಸಾಫ್ಟ್ವೇರ್ನ್ನು ಆರೋಪಿಯ ಹ್ಯಾಕ್ ಮಾಡಿ ಪೈರಸಿ ಮಾಡಿ ಅದನ್ನು ಬೇರೆಯವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ.
ಇದರಿಂದ ಕಂಪನಿಗೆ ನಷ್ಟವುಂಟಾಗಿದ್ದು, ಈ ಸಂಬಂಧ ವಿನೋದ್ ಬೆಲ್ಲಾಂಕೊಂಡ ಅವರು ನೀಡಿದ್ದ ದೂರು ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಮತ್ತವರ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಡಾ. ರೋಹಿಣಿ ಕಟೋಚ್ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








