ಬೆಂಗಳೂರು
ರಫೆಲ್ ಯುದ್ಧ ವಿಮಾನದ ಉಪಕರಣ ತಯಾರಿಕೆ ಅವಕಾಶವನ್ನು ಎಚ್‍ಎಎಲ್ ಗೆ ನಿರಾಕರಿಸಲಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ನಿರ್ಧಾರದ ಹಿಂದೆ ಅನಿಲ್ ಅಂಬಾನಿ ನೇತೃತ್ವದ ಕಂಪೆನಿಗೆ ಅನುಕೂಲ ಮಾಡಿಕೊಡುವ ದುರುದ್ದೇಶವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಇದರಿಂದ ಎಚ್.ಎ.ಎಲ್‍ಗೆ ಭಾರೀ ಅನ್ಯಾಯವಾಗಿದೆ. ಸಂಸ್ಥೆಯ ನೌಕರರಿಗೆ ಹುದ್ದೆಯ ಅವಕಾಶಗಳು ತಪ್ಪಿವೆ ಎಂದರು.
ವಾಯುಪಡೆಯಲ್ಲಿರುವ ತೇಜಸ್ ಲಘು ಯುದ್ಧ ವಿಮಾನ, ಧ್ರುವ ಹೆಲಿಕಾಪ್ಟರ್ ಸೇರಿದಂತೆ ಅನೇಕ ಯೋಜನೆಗಳಲ್ಲಿ ಎಚ್‍ಎಎಲ್ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದರೂ ರಾಫೆಲ್ ಯುದ್ಧ ವಿಮಾನದ ಉಪಕರಣ ತಯಾರಿಕೆ ಅವಕಾಶ ನಿರಾಕರಿಸಲಾಗಿದೆ ಎಂದು ಖರ್ಗೆ ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ