ಹುಳಿಯಾರು:
ಪತ್ರಿನಿತ್ಯ ತಿಮ್ಮನಹಳ್ಳಿ ಗ್ರಾಮದಿಂದ ಹುಳಿಯಾರಿಗೆ ಬರುವುದು ಇಲ್ಲಿನ ಶಾಲೆಯಲ್ಲಿ ಶಿಕ್ಷಕರು ಬೋದನೆಯನ್ನು ಧ್ಯಾನಾಸಕ್ತಿಯಿಂದ ಆಲಿಸುವುದು ಸಂಜೆ ತನ್ನೂರಿಗೆ ಹಿಂದಿರುಗಿ ಓದುವುದು. ಇಷ್ಟು ಮಾತ್ರವೇ ಮಾಡಿ ದಕ್ಷಿಣ ವಲಯಕ್ಕೆ ಟಾಪರ್ ಆಗುವ ಮೂಲದ ಯಶಸ್ ಬಹುದೊಡ್ಡ ಸಾಧನೆ ಮಾಡಿದ್ದಾನೆ ಎಂದು ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‍ನ ಕಾರ್ಯದರ್ಶಿ ಕವಿತಾಕಿರಣ್ ಹೇಳಿದರು.
ಸಿಬಿಎಸ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ದೇಶಕ್ಕೆ ದ್ವಿತೀಯ ಸ್ಥಾನ ಪಡೆದಿರುವ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‍ನ ವಿದ್ಯಾರ್ಥಿ ಯಶಸ್‍ಗೆ ಶಾಲೆಯ ಆಡಳಿತ ಮಂಡಳಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಟ್ಟಣ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಪ್ರತಿಷ್ಟಿತ ಶಾಲೆಗೆ ಕೊಡುವುದಲ್ಲದೆ ಟ್ಯೂಷನ್ ಗೆ ಹೋಗುವುದು ಮಾಮೂಲಿ ಆಗಿದೆ. ಆದರೆ ಗ್ರಾಮೀಣ ಪ್ರದೇಶವಾದ ಈ ಊರಿನಲ್ಲಿ ಯಾವುದೇ ಹೆಚ್ಚಿನ ಪಠ್ಯ ಸೌಲಭ್ಯ ಪಡೆಯದೆ ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ ಓಡಾಡಿಕೊಂಡು ಶಾಲೆಯಲ್ಲಿ ಶಿಕ್ಷಕರ ನೆರವು ಪಡೆಯುವುದರ ಮುಖಾಂತರ ಯಶಸ್ ಇಷ್ಟು ಒಳ್ಳೆಯ ಅಂಕ ತೆಗೆದುಕೊಂಡಿರುವುದು ಹಳ್ಳಿಶಾಲೆ, ಸಾರಿಗೆ ಸಮಸ್ಯೆ, ಸಮಯದ ಅಭಾವ ಹೀಗೆ ಸಾಧನೆಗೆ ಕುಂಟು ನೆಪ ಹೇಳುವ ಹಳ್ಳಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್, ಪ್ರಾಚಾರ್ಯ ಕೆ.ಬಿ.ಕೃಷ್ಣಮೂರ್ತಿ, ಯಶಸ್ ತಾಯಿ ನೇತ್ರಾವತಿ, ಯಶಸ್ ತಾತ ಪಲ್ಲಕ್ಕಿ ರಂಗಯ್ಯ, ಶಾರದ ವಿದ್ಯಾ ಸಂಸ್ಥೆಯ ಮಹದೇವ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
