ಹಾಲುಮತ ಸಂಘದ ಮೂಲಕ ಸಂಘಟಿತರಾಗಲು ಕರೆ

ಮಧುಗಿರಿ

     ಹಾಲುಮತ ಮಹಾಸಭಾ (ರಿ) ಮಧುಗಿರಿ ತಾಲ್ಲೂಕು ಘಟಕ ಅ.21 ರಂದು ಬೆಳಿಗ್ಗೆ ಮಧುಗಿರಿಯ ವಿದ್ಯಾನಗರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಹಾಲುಮತ ಮಹಾಸಭಾ ಸಂಘದ ಜಿಲ್ಲಾಧ್ಯಕ್ಷರಾದ ಗರುಡಯ್ಯ, ತಾಲ್ಲೂಕು ಗೌರವಾಧ್ಯಕ್ಷರಾದ ಎಂ.ಡಿ.ನಾರಾಯಣಪ್ಪ, ತಾಲ್ಲೂಕು ಅಧ್ಯಕ್ಷ ಜಿ.ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಏರ್ಪಡಿಸಲಾಗಿದ್ದು, ಸಭೆಯಲ್ಲಿ ಹೋಬಳಿ ಘಟಕಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ವಿಚಾರ, ತಾಲ್ಲೂಕಿನ ಎಲ್ಲಾ ಜನಾಂಗದ ಬಗ್ಗೆ ಚರ್ಚೆ ನಡೆಸುವಂತೆ ನಿರ್ಧರಿಸಲಾಯಿತು.

       ಇದೇ ಸಂದರ್ಭದಲ್ಲಿ ಎ.ಪಿ.ಎಂ.ಸಿ ನೂತನ ಅಧ್ಯಕ್ಷ್ಷರಾದ ಗರುಡಯ್ಯನವರು ಮಾತನಾಡಿ ಕುರುಬ ಜನಾಂಗದ ರಾಜ್ಯದ ಹಾಲುಮತ ಸಭಾ ಅಧ್ಯಕ್ಷರಾಗಿ ಕಾಗಿನೆಲೆಯ ಶ್ರೀ.ಶ್ರೀ.ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳವರೇ ಅಧ್ಯಕ್ಷರಾಗಿರುತ್ತಾರೆ. ಹಾಲುಮತ ಮಹಾಸಭಾ ಪ್ರಾರಂಭವಾಗಿ ಎರಡು ವರ್ಷಗಳಾಗಿರುವುದಾಗಿ ತಿಳಿಸಿದರು. ಮುಂದುವರೆದು ಮಾತನಾಡಿ ಶೀಘ್ರದಲ್ಲೇ ಕನಕ ಹುಂಡಿಸ್ಥಾಪನೆ ಮಾಡಲಿದ್ದೇವೆ, ಕನಕ ಒಡ್ಡೋಲಗ ಮಾಡಲಿದ್ದೇವೆ, ಸಮುದಾಯದ ಎಲ್ಲರೂ ಸಹ ಒಟ್ಟಾಗಿ ಕಾಗಿನೆಲೆ ಮಠದ ಕಡೆಗೆ ಗಮನ ಹರಿಸಲು ತಿಳಿಸಿದರು. ರಾಜಕೀಯದಲ್ಲಿ ಮುಂದೆ ಬರಬೇಕೆಂದಲ್ಲಿ ಸಮುದಾಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಕೆಲವರ್ಗದವರು ಕಾರ್ಣೀಕವನ್ನು ತಪ್ಪಿಸಲು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಅವಕಾಶ ಸಮುದಾಯದವರು ಕೊಡಬಾರದು ಎಂದು ತಿಳಿಸಿದರು.

        ಸಮುದಾಯದ ಶಿವಕುಮಾರ್ ಒಡೆಯರ್‍ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಎ.ಪಿ.ಎಂ.ಸಿ ಮರಿಯಣ್ಣ ಹಾಗೂ ವಿಜಯ ಮೋಹನ್ ಶಿಕ್ಷಕ ಹಾಗೂ ಸಾಹಿತಿರವರು ಮಾತನಾಡಿದರು. ಶಿಕ್ಷಕ ರಾಮಚಂದ್ರಯ್ಯ ಸೇರಿದಂತೆ ತಾಲ್ಲೂಕಿನ ಆರು ಹೋಬಳಿಯ ಹಾಲುಮತ ಮಹಾಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link