ತುಮಕೂರು:
ನೀಟ್ ಎಕ್ಸಾಮ್ ಬರೆಯಲು ತೆರಳುತ್ತಿದ್ದ ಉತ್ತರ ಕರ್ನಾಟಕ ಭಾಗದ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನ ಮಾರ್ಗ ಬದಲಾಯಿಸಿದ ಪರಿಣಾಮ ನೂರಾರು ವಿದ್ಯಾರ್ಥಿಗಳ ಭವಿಷ್ಯ ಇಂದು ಅತಂತ್ರ ಸ್ಥತಿಯಲ್ಲಿದೆ.
ಹಂಪಿ ಎಕ್ಸ್ ಪ್ರೆಸ್ ರೈಲು ಬೆಳಗ್ಗೆ ಆರು ಗಂಟೆಗೆ ಗಂತ್ಕಲ್ ,ಅನಂತಪುರ,ಪೆನುಗೊಂಡ ಮಾರ್ಗವಾಗಿ ಬೆಂಗಳೂರು ತಲುಪಬೇಕಿತ್ತು .ಅದರೆ ಚಿಕ್ಕಜಾಜೂರು, ಬೀರೂರು ಅರಸಿಕೆರೆ ಮಾರ್ಗವಾಗಿ ರೈಲು ಬರುತ್ತಿದ್ದು .ದೀಡಿರ್ ಬದಲಾವಣೆಯಿಂದ ಇದೀಗ ತಿಪಟೂರು ನಿಲ್ದಾಣದಿಂದ ಹೊರಟಿರುವ ರೈಲು ಬೆಂಗಳೂರು ತಲುಪಲು ಸುಮಾರು 2 ಗಂಟೆಯಾದರು ಬೇಕಾಬಹುದು ಎಂದು ತಿಳಿದು ಬಂದಿದೆ ಆದರೆ ವಿದ್ಯಾರ್ಥಿಗಳು ಇಂದು ಮದ್ಯಾಹ್ನ ಒಂದು ಗಂಟೆಗೆ ಪರಿಕ್ಷಾ ಕೇಂದ್ರಕ್ಕೆ ತೆರಳಬೇಕಾಗಿತ್ತು.ಈ ದಿಢೀರ್ ಮಾರ್ಗ ಬದಲಾವಣೆಯಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಕೈತಪ್ಪುವ ಭಯದಲ್ಲಿದ್ದಾರೆ ರೈಲ್ವೇ ಅಧಿಕಾರಿಗಳ ಯಡವಟ್ಟಿನಿಂದ ವಿಧ್ಯಾರ್ಥಿಗಳ ಭವಿಷ್ಯ ಅತಂತ್ರ ಸತಿತಿ ತಲುಪಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
