ಹರಪನಹಳ್ಳಿ:
ರೈತ ವಿರೋಧಿ, ಕಾರ್ಪೋರೇಟ್ ಕಂಪನಿಗಳ ಪರವಾದ ಭೂ ಸುಧಾರಣಾಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕರ್ನಾಟಕರಾಜ್ಯ ವ್ಯಾಪ್ತಿ ಬಂದ್ಗೆ ಹರಪನಹಳ್ಳಿಯಲ್ಲಿ ಯಶಸ್ವಿಯಾಗಿದೆ.
ಅಂಗಡಿ ಮುಂಗಟ್ಟುಗಳು ಬಂದ್ಆದ ಪ್ರಯುಕ್ತಜೈಕಾರ ಘೋಷಣೆಗಳೊಂದಿಗೆ ಮೆರವಣಿಗೆ ಮಾಡುತ್ತಿದ್ದ ಪ್ರತಿಭಟನಾಕಾರರಕಣ್ಣಿಗೆ ಬಾಗಿಲು ತೆರೆದ ಉಪನೊಂದಾಣಾಧಿಕಾರಿಗಳ ಕಚೇರಿಕಂಡಕೂಡಲೇ ಮುಗಿಬಿದ್ದು, ಬಂದ್ ಮಾಡಿಸಿದ ಘಟನೆಜರುಗಿತು.
ವಿವಿಧ ಸಂಘಟನೆಗಳ ಕಾರ್ಯಕರ್ತರು ಬೈಕ್ರ್ಯಾಲಿ ಮೂಲಕ ಸೋಮುವಾರ ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿರುವಎಲ್ಲಾ ಅಂಗಡಿಗಳನ್ನು ಬಂದ್ ಮಾಡುವಂತೆ ಮನವಿ ಮಾಡಿಕೊಂಡರು ಈ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿಗಳು ಬಂದ್ಆಗಿದ್ದವು.ಬಸ್ ಸಂಚಾರಕೂಡ್ ಬಂದಾಗಿತ್ತು.ಮುಂಜಾಗೃತಾ ಬಂದ್ಆದ್ದರಿಂದ ಪ್ರಯಾಣೀಕರಓಡಾಟ ವಿರಳವಾಗಿತ್ತು.
ವಿವಿಧ ರೈತ ಪರ ಸಂಘಟನೆಗಳು ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಹೋಸಪೇಟೆರಸ್ತೆಯ ಮೂಲಕ ಇಜಾರಿ ಶಿರಸಪ್ಪ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆಮೂಲಕ ಮಾನವ ಸರಪಳಿಯನ್ನು ರಚಿಸಿ, ಬಹಿರಂಗ ಸಭೆ ನಡೆಸಿದರು, ಈ ಸಂದರ್ಭದಲ್ಲಿ ಸಿಪಿಐ(ಎಂಎಲ್) ಮುಖಂಡಇದ್ಲಿರಾಮಪ್ಪ, ಸಿಪಿಐನ ಹೊಸಹಳ್ಳಿ ಮಲ್ಲೇಶ್, ಎಐಕೆಎಸ್ನ ಗುಡಿಹಳ್ಳಿ ಹಾಲೇಶ್, ಬ್ಲಾಕ್ಕಾಂಗ್ರೆಸ್ಅಧ್ಯಕ್ಷ ಬೇಲೂರುಅಂಜಪ್ಪ, ಈರುಳ್ಳಿ ಬೆಳೆಗಾರರ ಒಕ್ಕೂಟದಅಧ್ಯಕ್ಷೆ ಹಾಗೂ ಕಾಂಗ್ರೆಸ್ ಮುಖಂಡರು ಎಂ.ಪಿ.ವೀಣಾಮಹಾಂತೇಶ್, ದೇವದಾಸಿ ಮಹಿಳಾ ವಿಮೋಚನ ಸಂಘಟನೆಯ, ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಟಿ.ವಿ.ರೇಣುಕಮ್ಮ, ಎಐಎಸ್ಫ್ನ ಹೆಚ್.ಎಂ.ಸಂತೋಷ್, ಕರ್ನಾಟಕರಕ್ಷಣ ವೇದಿಕೆ (ನಾರಾಯಣಗೌಡ ಬಣ)ಅಧ್ಯಕ್ಷ ಬಸವರಾಜ ಹುಲಿಯಪ್ಪನವರ್, ಗ್ರಾಮೀಣಕೂಲಿಕಾರರ ಸಂಘಟನೆಯ ಹೆಚ್.ವೆಂಕಟೇಶ್, ದ್ಯಾಮಜ್ಜಿ ಹನುಮಂತಪ್ಪ, ಕೇಂದ್ರ ಮತ್ತುರಾಜ್ಯ ಸರ್ಕಾರದ ವಿರುದ್ಧತಿದ್ದುಪಡೆ ಕಾಯ್ದೆಗಳ ವಿರುದ್ದ ವಾಗ್ದಾಳಿ ನಡೆಸಿದರು.
ತಹಶೀಲ್ದಾರರಿಗೆ ವಿವಿಧರೈತಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಮದ್ಯಾಹ್ನದ ನಂತರ ಎಂದಿನಂತೆ ಅಂಗಡಿಗಳು, ವಾಹನ ಸಂಚಾರ ನಡೆಯುತ್ತಿರುವ ದೃಶ್ಯ ಕಂಡು ಬಂತು.ರಾಜ್ಯ ಬಂದ್ಆಗಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೋಲಿಸ್ ಸಿಬ್ಬಂಧಿಗಳು ಸೂಕ್ತ ಕಟ್ಟೆಚ್ಚರ ವಹಿಸಿದ್ದರು.ಸ್ಥಳದಲ್ಲಿ ಸಿಪಿಐ, ಪಿಎಸ್ಐ ಸೇರಿದಂತೆ ನೂರಾರು ಪೋಲಿಸ್ರು, ಪ್ರತಿಭಟನೆ ಸಂಧರ್ಬದಲ್ಲಿ ಬಂದೋ ಬಸ್ತ್ ಕರ್ತವ್ಯದಲ್ಲಿ ನಿರತರಾಗಿದ್ದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಜಾಕೀರ್ ಸರಕಾವಸ್, ಹುಲಿಕಟ್ಟಿ ರಾಜಪ್ಪ, ಸಂದೇರ ಪರಶುರಾಮ, ತೆಲಿಗಿ ಸುರೇಶ್ಪ್ಪ, ಗೋಣೆಪ್ಪ, ಆರ್.ದುರುಗಪ್ಪ, ಗೌರಿಹಳ್ಳಿ ಹನುಮಂತಪ್ಪ, ಕರಡಿ ದುರ್ಗದ ಚೌಡಪ್ಪ, ದ್ವಾರಕೇಶ್, ಶೃಂಗಾರತೋಟ ಬಸವರಾಜ, ಭಾಗ್ಯಮ್ಮ, ಶೃತಿ, ಸರೋಜ ಬಾಯಿ, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ