ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಹರಪನಹಳ್ಳಿ ತಾಲೂಕಿಗೆ 19ನೇ ಸ್ಥಾನ

ಹರಪನಹಳ್ಳಿ,

     ಈಗ ಬಂದಿರುವ ಪಲಿತಾಂಶದಲ್ಲಿ ರಾಜ್ಯದಲ್ಲಿ ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಹರಪನಹಳ್ಳಿ ತಾಲೂಕು 19ನೇ ಸ್ಥಾನ ಹೊಂದಿದ್ದು, 19 ಇದ್ದುದ್ದನ್ನು 10 ರೊಳಗೆ ತರಲು ಮಿಷನ್ -10 ಯೋಜನೆಯ ಗುರಿ ಹಾಕಿಕೊಂಡಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥಸ್ವಾಮಿ ತಿಳಿಸಿದರು..

    ಅವರು ಅವರು ಪಟ್ಟಣದ ಬಿಇಒ ಕಚೇರಿಯಲ್ಲಿ ದಾವಣಗೆರೆ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಹರಪನಹಳ್ಳಿ ತಾಲೂಕು ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ 19ನೇ ಸ್ಥಾನ ಗಳಿಸಿದ್ದಕ್ಕೆ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ನೀಡಿದ ಸನ್ಮಾನ ಸ್ವೀಕರಿಸಿ ಬುಧವಾರ ಮಾತನಾಡಿದರು.

      ಮಿಷನ್ -10 ಯೋಜನೆ ಅನುಷ್ಠಾನಕ್ಕೆ ವಿಶೇಷ ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ ಎಂದ ಅವರು ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಶೀಘ್ರ ಸನ್ಮಾನ ಮಾಡಿ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.

      ಮಕ್ಕಳ ಮನೆಗಳಿಗೆ ತೆರಳಿ ಸನ್ಮಾನಿಸಲಾಗುವುದು, ಇನ್ನೂ ಮುಂದೆ ಬಳ್ಳಾರಿ ಜಿಲ್ಲೆಯಲ್ಲೂ ಇದೇ ನಂ 1 ಸ್ಥಾವನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಹರಪನಹಳ್ಳಿ ತಾಲೂಕನ್ನು ಶೈಕ್ಷಣಿಕ ಜಿಲ್ಲೆ ಮಾಡುವ ಗುರಿಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಮತ್ತು ಈ ಭಾಗದಲ್ಲಿ ನವೋದಯ ಶಾಲೆ ಆರಂಭಕ್ಕೂ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.

        ನಿಕಟ ಪೂರ್ವ ಬಿಇಒ ಮಹೇಶ ಪೂಜಾರ ಸನ್ಮಾನ ಸ್ವೀಕರಿಸಿ ಮಾತನಾಡಿ ನಾನು ಪ್ರ`Áರಿ ಬಿಇಒ ಆಗಿದ್ದಾಗ ಅನೇಕ ಸವಾಲುಗಳನ್ನು ಎದುರಿಸಿದ್ದೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯ. ಪಲಿತಾಂಶ ಉತ್ತಮ ಪಡಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದೆವು, ಎಲ್ಲರ ಸಹಕಾರ ಸಿಕ್ಕಿತ್ತು ಎಂದು ಸ್ಮರಿಸಿದರು.

        ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ ಅಧಿಕಾರಿಗಳು, ಹಾಗೂ ಶಿಕ್ಷಕರ ಸಮನ್ವಯತೆ ಯಿಂದ ಇಂತಹ ಉತ್ತಮ ಪಲಿತಾಂಶ ಬಂದಿದೆ, ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲು ಅನೇಕ ಕಾರ್ಯಗಾರಗಳನ್ನು ಕೈಗೊಳ್ಳಲಾಗಿದೆ, ಇದನ್ನು ಇದೇ ರೀತಿ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಅವರು ಹೇಳಿದರು.

      ಶಿಕ್ಷಣ ಸಂಯೋಜಕ ಉದಯ ಶಂಕರ ಮಾತನಾಡಿ ಭಾಷಾ ಸಪ್ತಾಹ, ಕೋರ್ ವಿಷಯಗಳ ಸಪ್ತಾಹ, ರಸಪ್ರಶ್ನೆ, ಪ್ರಬಂಧ ಸ್ಪರ್ದೆ, ಕ್ವಿಜ್ , ಹೀಗೆ ಹೊಸ ಹೊಸ ಯೋಜನೆ ರೂಪಿಸಿ ಜಾರಿಗೊಳಿಸಿದ್ದು ಈಗ ಸಾರ್ಥಕ ಎನಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾಹಿತಿ ಇಸ್ಮಾಯಿಲ್ ಎಲಿಗಾರ , ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್ .ಹೂವಣ್ಣ, ಉಪಾದ್ಯಕ್ಷೆ ಲತಾ ರಾಥೋಡ್ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಅಂಜಿನಪ್ಪ, ರಾಜ್ಯ ಪರಿಷತ್ತು ಸದಸ್ಯ ಸಿದ್ದಲಿಂಗನಗೌಡ, ಕಾರ್ಯದರ್ಶಿ ಶಂಕರಮೂರ್ತಿ ಮಾತನಾಡಿದರು.

      ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ವೀರಣ್ಣ, ರುದ್ರಪ್ಪ, ಬಿ.ರಾಜಶೇಖರ, ಹಾಗೂ ಗುರುಪ್ರಸಾದ, ಶಿವಾನಂದಪ್ಪ, ಸಿಎಂ ಕೊಟ್ರಯ್ಯ, ಮಂಜುನಾಥ ಪೂಜಾರ, ಶಿಕ್ಷಕ ಕೊಟ್ರಯ್ಯ, ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link