ಹರಪನಹಳ್ಳಿಯಲ್ಲಿ ಶಾಂತಿಯುತ ಮತದಾನ

ಹರಪನಹಳ್ಳಿ,

     ಮೂಲಸೌಕರ್ಯಕ್ಕಾಗಿ ಎರಡು ತಾಸು ಮತದಾನದಿಂದ ದೂರವಿದ್ದ, ಹಾಗೂ ಕೆಲವು ಕಡೆ ವಿವಿಪ್ಯಾಟ ಯಂತ್ರ ಹಾಗೂ ಮತಯಂತ್ರಗಳು ಕೈಕೊಟ್ಟು ಬದಲಾವಣೆ ಮಾಡಿದ ಪ್ರಸಂಗ ಹೊರತು ಪಡಿಸಿದರೆ ಉಳಿದಂತೆ ಹರಪನಹಳ್ಳಿ ತಾಲೂಕಿನಲ್ಲಿ ಲೋಕಸಭಾ ಚುನಾವಣೆ ಶಾಂತಿಯುತ ವಾಗಿ ಜರುಗಿತು.

ಮತದಾನದಿಂದ ದೂರ –

     ರಸ್ತೆ ಸಂಪರ್ಕ, ನ್ಯಾಯ ಬೆಲೆ ಅಂಗಡಿ ಇಲ್ಲದ್ದು, ಬಸ್ ಸೌಕರ್ಯದ ಕೊರತೆ ಹೀಗೆ ಮೂಲಭೂತ ಸೌಕರ್ಯ ಗಳ ನಮ್ಮ ಗ್ರಾಮಕ್ಕೆ ದೊರೆತಿಲ್ಲ ಎಂದು ಕರೆಕಾನಹಳ್ಳಿ ಗ್ರಾಮಸ್ಥರು ಮಂಗಳವಾರ ಬೆಳಿಗ್ಗೆ ಮತಗಟ್ಟೆಗೆ ಬಾರದೆ ದೂರ ಉಳಿದಿದ್ದರು.

       ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾದರೂ ಯಾರೊಬ್ಬರೂ ಮತಗಟ್ಟೆಗೆ ಆಗಮಿಸಲಿಲ್ಲ, ಆಗ ವಿಷಯ ತಿಳಿದು ಗ್ರಾಮಕ್ಕೆ ಧಾವಿಸಿದ ತಾ.ಪಂ ಕಾರ್ಯನಿವ್ರಾಹಕ ಅಧಿಕಾರಿ ಮಮತಾ ಹೊಸಗೌಡರು ಸಿಪಿಐ ಡಿ.ದುರುಗಪ್ಪ ಅವರುಗಳು ಮತದಾರರೊಂದಿಗೆ ಚರ್ಚಿಸಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿ ಮತದಾನದಿಂದ ದೂರ ಇರಬಾರದು ಮತದಾನ ಮಾಡಿ ಎಂದು ಮನವೊಲಿಸಲು ಯಶಸ್ವಿಯಾದರು.

       ಆಗ ಬೆಳಿಗ್ಗೆ 9 ಗಂಟೆಗೆ ಕರೆಕಾನಹಳ್ಳಿ ಗ್ರಾಮಸ್ಥರು ಮತಗಟ್ಟೆಗೆ ಆಗಮಿಸಿ ಮತದಾನಕ್ಕೆ ಮುಂದಾದರು. ಅಣಕು ಮತದಾನದ ಸಂದರ್ಭದಲ್ಲಿ ಅನೇಕ ಕಡೆ ವಿವಿ ಪ್ಯಾಟ್ ಹಾಗೂ ಮತ ಯಂತ್ರಗಳಲ್ಲಿ ದೋಷ ಕಂಡು ಬಂದಿದ್ದರಿಂದ ಬದಲಾವಣೆ ಮಾಡಲಾಯಿತು.
ತಲುವಾಗಲು ಗ್ರಾಮದಲ್ಲಿ ಮತಪಟ್ಟಿಯಲ್ಲಿ ಹೆಸರುಗಳು ಡಿಲಿಟ್ ಆಗಿವೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸಿದರು.

       ಮತದಾನ ಆರಂಭವಾದ ನಂತರವೂ 12 ಕಡೆ ವಿವಿ ಪ್ಯಾಟ ಯಂತ್ರಗಳನ್ನು ಬದಲಾವಣೆ ಮಾಡಲಾಯಿತು. ಪಟ್ಟಣದ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ನೀಲಗುಂದದಲ್ಲಿ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿಗಳು, ಅರಸಿಕೇರಿಯಲ್ಲಿ ಕೋಲಶಾಂತೇಶ್ವರ ಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿಗಳು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

      ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಅವರು ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನದ ಪ್ರಕ್ರಿಯೆ ಗಮನಿಸಿ, ತಮ್ಮ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಪಡೆದುಕೊಂಡರು.ಬೆಳಿಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ, ಬಿಸಿಲಿನ ಜಳಕ್ಕೆ ಮದ್ಯಾಹ್ನ ಸಹ ಮತದಾರರು ಮತಗಟ್ಟೆಗೆ ಬರಲು ಹಿಂದೇಟು ಹಾಕಿದರು, ಸಂಜೆ ವೇಳೆಗೆ ಮತದಾನ ಚುರುಕು ಕೊಂಡು ಸಂಜೆ 6 ಗಂಟೆ ಹೊತ್ತಿಗೆ ಶೇ.73 ರಷ್ಟು ಮತದಾನ ವಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap