ಸುಪ್ರೀಂಕೋರ್ಟ್ ನಲ್ಲಿ ಹಾರ್ಧಿಕ್ ಗೆ ಹಿನ್ನೆಡೆ…!!

ನವದೆಹಲಿ

        ಗುಜರಾತನಲ್ಲಿ  ಪಾಟೀದಾರ್ ಚಳವಳಿಯ ಸಮಯದಲ್ಲಿ ನಡೆದ ಹಿಂಸಾಚಾರದ ವಿಷಯವಾಗಿ ಜೈಲುಪಾಲಾಗಯುವ ಭೀತಿ ಎದುರಿಸುತ್ತಿದ್ದ ಪ್ರಕರಣ ತ್ವರಿತ ವಿಚಾರಣೆಗೆ ಕೋರಿ ಸಲ್ಲಿಸಿದ್ದ ವಿಚಾರವಾಗಿ ಹಾರ್ದಿಕ್ ಪಟೇಲ್ ಗೆ ಸುಪ್ರೀಂ ಕೋರ್ಟ್ ನಲ್ಲಿ  ಹಿನ್ನೆಡೆಯಾಗಿದೆ.

        ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಅವರನ್ನು ದೋಷಿ ಎಂದು ಪರಿಗಣಿಸಿ, ಎರಡು ವರ್ಷಗಳ ಜೈಲು ಶಿಕ್ಷೆವಿಧಿಸಿದ್ದ ವಿಸ್ನಗರ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಹಾರ್ದಿಕ್ ಪಟೇಲ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

        ಜೊತೆಗೆ ಇದರ ತ್ವರಿತ ವಿಚಾರಣೆ ಕೋರಿ ಅವರು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ ಪ್ರಕರಣದ ತ್ವರಿತ ವಿಚಾರಣೆಯ ಮನವಿಯನ್ನು ಕೋರ್ಟ್ ತಿರಸ್ಕರಿಸಿದ್ದು ಈ ಬೆಳವಣಿಗೆಯಿಂದ ಹಾರ್ಧಿಕ್ ಗೆ ತೀವ್ರ ಹಿನ್ನೆಡೆಯಾಗಿದೆ.ಲೋಕಸಭಾ ಚುನಾವಣೆ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗುಜರಾತಿನ ಜಾಮ್ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಬೇಕಿದ್ದ ಹಾರ್ದಿಕ್ ಪಟೇಲ್ ಗೆ  ಸುಪ್ರೀಂ ಕೋರ್ಟ್ ಭಾರೀ ಆಘಾತ ನೀಡಿದೆ.ಏಪ್ರಿಲ್ 4 ರ ವೊಳಗೆ ಹಾರ್ದಿಕ್ ಅವರ ವಿರುದ್ಧ ಗುಜರಾತಿನ ವಿಸ್ನಗರ್ ನ್ಯಾಯಾಲಯ ನೀಡಿದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡದೆ ಇದ್ದಲ್ಲಿ ಈ ಬಾರಿ ಪಟೇಲ್ ಅವರ ಸಂಸತ್ ಪ್ರವೇಶದ ಕನಸು ಕನಸಾಗಿಯೇ ಉಳಿಯಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link