ಹರಿಹರದಲ್ಲಿ ಸಂಗೀತಗಾರರು ಹೆಚ್ಚು : ಜಿ. ಪರಮೇಶ್ವರಪ್ಪ

ಹರಿಹರ :

     ಸಂಗೀತ ಪರಂಪರೆಯ ಇತಿಹಾಸವನ್ನು ಕೆದಕಿ ನೋಡಿದರೆ ದಾವಣಗೆರೆಗಿಂತ ಹರಿಹರದಲ್ಲಿ ಸಂಗೀತಗಾರರು ಹೆಚ್ಚು ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಹರಿಹರ ತಾಲೂಕು ಘಟಕದ ಅಧ್ಯಕ್ಷರಾದ ಜಿ. ಪರಮೇಶ್ವರಪ್ಪ ಹೇಳಿದರು.

       ನಗರದ ರಚನಾ ಕ್ರೀಡಾ ಟ್ರಸ್ಟ್‍ನಲ್ಲಿ ನಡೆದ ಕರ್ನಾಟಕ ಸುಗಮ ಸಂಗೀತ ಹರಿಹರ ತಾಲೂಕು ಘಟಕ ಗೀತಗಾಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,

        ಪರಿಷತ್ತಿಗೆ ಸದಸ್ಯರನ್ನು ಮಾಡಬೇಕು ಎಂಬ ರಾಜ್ಯದ ಆದೇಶದಂತೆ, ನಾವುಗಳು ಸಂಗೀತ, ಜಾನಪದ, ಗೀಗಿಪದ, ಲಾವಣಿ, ಭಜನೆ ಇನ್ನೂ ಅನೇಕ ಪ್ರಕಾರಗಳ ಕಲಾವಿದರ ಮನೆ-ಮನೆಗೆ ತೆರಳಿ, ಪೋಷಕರನ್ನು ಕೂಡ ಗುರುತಿಸಿ, ತಾಲೂಕಿಗೆ 62 ಸದಸ್ಯರನ್ನು ಮಾಡಿಕೊಳ್ಳಲಾಯಿತು. ನಮ್ಮ ಸಂಗೀತ ಪರಂಪರೆ ಇತಿಹಾಸವನ್ನು ಕೆದಕಿ ನೋಡಿದರೆ ದಾವಣಗೆರೆಗಿಂತ ಹರಿಹರದಲ್ಲಿ ಸಂಗೀತಗಾರರು ಹೆಚ್ಚಾಗಿದ್ದಾರೆ ಎಂದು ತಿಳಿಸಿದರು.

       ಜಿಲ್ಲೆಯಲ್ಲಿ ಸಂಗೀತ ಶಿಬಿರವನ್ನು ಆಯೋಜಿಸಿದಾಗ ದಾವಣಗೆರೆಯ ಪಾಲು ಹೆಚ್ಚಾಗುತ್ತಿತ್ತು. ಆದರೆ, ಹರಿಹರದ ಸಾಕಷ್ಟ ಪ್ರತಿಭೆಗಳು ಅಲ್ಲಿಗೆ ಹೋಗುತ್ತಿರಲಿಲ್ಲ. ಆದ್ದರಿಂದ ನಮ್ಮ ತಾಲೂಕಿನ ಪ್ರತಿಭೆಗಳು ಹೊರಹೊಮ್ಮುವ ನಿಟ್ಟಿನಲ್ಲಿ ಇಲ್ಲಿಯೇ ಪ್ರಥಮ ಬಾರಿ ಗೀತಗಾಯನ ಶಿಬಿರವನ್ನು ಏರ್ಪಡಿಸಲಾಯಿತು.

      ಹಿರಿಯ ಕಲಾವಿದ ಹಿಡಗಲ್ ಮಂಜುನಾಥ್ ಮಾತನಾಡಿ, ಹರಿಹರದಲ್ಲಿ ಕರ್ನಾಟಕ ಸುಗಮ ಸಂಗೀತ ಘಟಕ ಸ್ಥಾಪನೆಯಾಗಿರುವುದು ತುಂಬಾ ಸಂತೋಷವೆನಿಸಿದೆ. ನಾಡು-ನುಡಿ ಸಂಗೀತ-ಸಾಹಿತ್ಯ ಮುಂತಾದವುಗಳ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಇಂತಹ ಘಟಕಗಳು ಅತಿ ಮುಖ್ಯವಾಗಿವೆ. ಸ್ಥಾಪನೆಯಾಗಿರುವ ಘಟಕವು ಹೆಚ್ಚಿನ ರೀತಿಯಲ್ಲಿ ಬೆಳಸಿಕೊಂಡು, ಉಳಿಸಿಕೊಂಡು ಹೋಗುವುದು ನಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಕಲಾವಿದರು ಹೆಚ್ಚಿನ ರೀತಿಯಲ್ಲಿ ಸಹಾಯ-ಸಹಕಾರ ನೀಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

       ಜಿಲ್ಲಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, ಸಂಗೀತಗಾರ ಮತ್ತು ಸಾಹಿತಿಗಳನ್ನು ಒಂದು ಕಡೆ ಸೇರಿಸಿ, ಒಂದು ಸಮಾನ ಮನಸ್ಕರ ಸಂಘಟನೆಯಾಗಬೇಕು ಎಂಬ ಪ್ರಯತ್ನವು ಇಂದು ಹರಿಹರದಲ್ಲಿ ತಾಲೂಕು ಘಟಕ ಸ್ಥಾಪನೆಯಾಗಿದೆ. ಸುಮಾರು ಎರಡು ತಿಂಗಳಿಂದ ಕಷ್ಟ ಪಟ್ಟು ಸದಸ್ಯರನ್ನು ಮಾಡಿ ಮೂರು ದಿನದ ಕಾರ್ಯಕ್ರಮಗಳು ಯಶಸ್ವಿಯಾಗಿವೆ.

        ಖ್ಯಾತ ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ್ ಮಾತನಾಡಿ, ಗೀತಗಾಯನ ಶಿಬಿರದಲ್ಲಿ ಮಕ್ಕಳು ತುಂಬ ಚೆನ್ನಾಗಿ ಹಾಡಿದ್ದಾರೆ. ನನಗೆ ತುಂಬಾ ಖುಷಿಯಾಗಿದೆ ಎಂದು ಪ್ರಸಂಸೆ ವ್ಯಕ್ತಪಡಿಸಿದರು. ನಾವು ನಮ್ಮ ಜೀವನದಲ್ಲಿ ಸಮಯ ಪ್ರಜ್ಞೆಯನ್ನು ಅರ್ಥ ಮಾಡಿಕೊಳ್ಳಬೇಕು. ಭೀಮಸೇನ ಜೋಷಿ, ಗಂಗುಬಾಯಿ ಹಾನಗಲ್ ಇವರುಗಳು ಆಟ-ಪಾಟಗಳಲ್ಲಿ ಕೂಡ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದರು.

        ಆದ್ದರಿಂದ ಇವರು ಒಳ್ಳೆಯ ಸಂಗೀತ ವಿಧ್ವಾಂಸರೆಂದು ಹೆಸರು ಪಡೆದಿದ್ದಾರೆ ಎಂದು ಮಕ್ಕಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ಪೂಜಾರ್, ಶಿಬಿರದ ಸಂಚಾಲಕಿ ಶ್ರೀಮತಿ ಉಷಾ ಸುನೀಲ್, ಗೌರವಾಧ್ಯಕ್ಷ ಶಿವಕುಮಾರ ಕರಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link