ಭಾವೈಕ್ಯತೆ ಅಧ್ಯಾತ್ಮ ಜ್ಞಾನ ಭಾರತದ ಉಸಿರು : ಶ್ರೀ ರಂಭಾಪುರಿ ಜಗದ್ಗುರುಗಳು

ಹರಿಹರ:

         ಭಾವೈಕ್ಯತೆ ಮತ್ತು ಅಧ್ಯಾತ್ಮ ಜ್ಞಾನ ಉಳಿಸಿ ಬೆಳೆಸಿಕೊಂಡು ಬರುವುದೇ ಭಾರತೀಯ ಸಂಸ್ಕøತಿಯ ವೈಶಿಷ್ಠ್ಯತೆಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

          ಅವರು ಸೋಮವಾರ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿದ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

           ಆಧುನಿಕತೆ ಮತ್ತು ವ್ಶೆಚಾರಿಕತೆ ಹೆಸರಿನಲ್ಲಿ ಧರ್ಮ ಸಂಸ್ಕತಿ ನಾಶಗೊಳ್ಳಬಾರದು. ಅಖಂಡತೆಗೆ ಇರುವ ಬೆಲೆ ಒಡಕಿಗೆ ಸಿಗಲಾರದೆಂಬ ಸತ್ಯವನ್ನರಿತು ಮನುಷ್ಯ ಬಾಳಬೇಕಾಗಿದೆ. ಭಕ್ತ ಭಗವಂತನೆಡೆಗೆ ಹೋದಾಗ ಜೀವನ ಪಾವನ ಪುನೀತವಾಗುತ್ತದೆ ಎಂದರು.

          ದೇವರ ಮೇಲಿನ ನಂಬಿಕೆ ಮನುಷ್ಯನ ಬಾಳಿಗೆ ಶಾಶ್ವತ ನಂದಾದೀಪ ಸುಖ ಸಮೃದ್ಧಿಯ ಮೂಲ ಧರ್ಮಾಚರಣೆಯಲ್ಲಿದೆ. ಕಾಯಕ ಮತ್ತು ದಾಸೋಹದ ಮೂಲಕ ಜೀವನ ಉತ್ಕರ್ಷತೆಗೆ ಒತ್ತು ನೀಡಿದೆ. ಜಾತಿಗಿಂತ ನೀತಿ ತತ್ವಕ್ಕಿಂತ ಆಚರಣೆ ಮಾತಿಗಿಂತ ಕೃತಿ ಬೋಧನೆಗಿಂತ ಸಾಧನೆ ದಾನಕ್ಕಿಂತ ದಾಸೋಹ ಚರಿತ್ರೆಗಿಂತ ಚಾರಿತ್ರ್ಯ ಅತ್ಯಂತ ಶ್ರೇಷ್ಠವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ್ದಾರೆ.

        ಸಮರ ಜೀವನವನ್ನು ಅಮರ ಜೀವನಕ್ಕೆ ಕೊಂಡೊಯ್ಯುವುದೇ ಗುರುವಿನ ಧ್ಯೇಯವಾಗಿದೆ. ಮಳಲಿ ಸಂಸ್ಥಾನ ಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಉಜ್ವಲ ಬದುಕಿಗೆ ಧರ್ಮ ದಿಕ್ಸೂಚಿ. ಬಾಳಿನ ಭಾಗ್ಯೋದಯಕ್ಕೆ ಧರ್ಮದ ದಶ ಸೂತ್ರಗಳ ಪಾಲನೆ ಮುಖ್ಯವೆಂದರು.

         ಸಂಸದ ಜಿ.ಎಸ್. ಸಿದ್ಧೇಶ್ವರ, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ನಗರಸಭಾ ಅಧ್ಯಕ್ಷೆ ಸುಜಾತಾ, ನಗರಸಭಾ ಸದಸ್ಯ ಡಿ.ಉಜ್ಜೇಶ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಚಿದಾನಂದಪ್ಪ ಸಿರಿಗೆರೆ ಪರಮೇಶ್ವರಗೌಡ್ರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

          ಬಿ.ಬಿ. ನಂದ್ಯಾಲ ಅವರು ಧರ್ಮ ಸಮನ್ವಯ ಕುರಿತು ಉಪನ್ಯಾಸ ನೀಡಿದರು. ನಗರ ವೀರಶೈವ ಸಮಾಜದ ಅಧ್ಯಕ್ಷ ಹೆಚ್. ವಿಶ್ವನಾಥಪ್ಪನವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.

        ವಿ.ಜಿ. ಕೊಟ್ರೇಶಪ್ಪ, ಕಾಂತರಾಜು,ವೀರೇಶ ಬಡಿಗೇರ, ವೇ.ವಿಶ್ವನಾಥ ಶಾಸ್ತ್ರಿಗಳು ಮತ್ತು ಗಜಾಪುರ ಮಠದ ವೀರಯ್ಯನವರು ದಾಸೋಹ ಸೇವೆ ಸಲ್ಲಿಸಿದರು. ಬೆಳಗಿನ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap