ಬಳ್ಳಾರಿಗೆ ಹರಪ್ಪನಹಳ್ಳಿ ಸೇರ್ಪಡೆ….!!!

ಹರಪನಹಳ್ಳಿ

       

 

 

 

 

 

 

 

 

          ಹರಪನಹಳ್ಳಿ ತಾಲೂಕು ಪುನಃ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಅಂದರೆ ಜುಲೈ 23-2018 ರಂದು ಈ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಿ, ಸಾರ್ವಜನಿಕರಿಂದ ಆಕ್ಷೇಪಣೆ ಕೇಳಿತ್ತು, ಇದೀಗ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೋರ್ಪಡೆ ಗೊಳಿಸಿ, ಗಡಿ ನಿಗದಿ ಮಾಡಿ ಆದೇಶ ಹೊರಡಿಸಿದೆ.

         ಈ ಅಧಿಕೃತ ಆದೇಶ ಗೆಜೆಟ್ ಗೆ ಹೋಗಿದ್ದು, ಇನ್ನೂ 10 ದಿನಗಳಲ್ಲಿ ಗೆಜೆಟ್ ಪ್ರಕಟಣೆ ಹೊರ ಬೀಳಲಿದೆ ಎಂದು ಕಂದಾಯ ಮೂಲಗಳು ತಿಳಿಸಿವೆ. ಹರಪನಹಳ್ಳಿ ತಾಲೂಕಿಗೆ ಸಂಬಂಧಿಸಿದ ಪ್ರಕರಣ, ಕಡತಗಳನ್ನು ಬಳ್ಳಾರಿಗೆ ತುರ್ತಾಗಿ ವರ್ಗಾಯಿಸುವ ಬಗ್ಗೆ ಅಗತ್ಯ ಕ್ರಮ ವಹಿಸಲು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದಾವಣಗೆರೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಬುಧವಾರ ಆದೇಶ ಹೊರಡಿಸಿದ್ದಾರೆ.

        ಬಳ್ಳಾರಿ ಜಿಲ್ಲೆಗೆ ಇದೀಗ ಬಳ್ಳಾರಿ, ಸಿರುಗುಪ್ಪ, ಸಂಡೂರು, ಕುರುಗೋಡು, ಹೊಸಪೇಟೆ, ಕೂಡ್ಲಿಗಿ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಕೊಟ್ಟೂರು, ಹರಪನಹಳ್ಳಿ , ಸೇರಿ ಒಟ್ಟು 11 ತಾಲೂಕುಗಳು ಬಳ್ಳಾರಿ ಜಿಲ್ಲೆಗೆ ಒಳ ಪಡುತ್ತವೆ.
ದಾವಣಗೆರೆ ಜಿಲ್ಲೆಗೆ ಇದೀಗ ದಾವಣಗೆರೆ, ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು, ಚೆನ್ನಗಿರಿ ಸೇರಿ ಒಟ್ಟು ಆರು ತಾಲೂಕುಗಳು ಒಳಪಡುತ್ತವೆ.

        ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಭಾರಿ ತಹಶೀಲ್ದಾರ ರವಿ ಅವರು ಹರಪನಹಳ್ಳಿ ತಾಲೂಕು ಅಧಿಕೃತವಾಗಿ ಬಳ್ಳಾರಿಗೆ ಸೇರಿದಂತಾಗಿದೆ, ಇನ್ನು ಜಗಳೂರಿಗೆ ಸಂಬಂಧ ಪಟ್ಟ ಕಂದಾಯ ಉಪವಿಭಾಗದ ದಾಖಲೆಗಳನ್ನು ದಾವಣಗೆರೆಗೆ ಕಳಿಸಬೇಕು, ಹಡಗಲಿ, ಕೊಟ್ಟೂರು ತಾಲೂಕುಗಳ ದಾಖಲೆಗಳನ್ನು ಹೊಸಪೇಟೆಯಿಂದ ತರಿಸಿಕೊಳ್ಳಬೇಕು, ದಾಖಲೆಗಳ ವಿನಿಮಯ ಅಷ್ಟೆ ಉಳಿದಿರುವುದು ಎಂದು ಹೇಳಿದರು.

       ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಲಿಂಗಪ್ಪ ಅವರು ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆ ಸೇರ್ಪಡೆ ಕುರಿತು ರಾಜ್ಯ ಸರ್ಕಾರ ಅಧಿಕೃತ ಅಂತಿಮ ಆದೇಶ ಹೊರಡಿಸಿದೆ, ಇನ್ನೂ 10 ದಿನಗಳಲ್ಲಿ ಗೆಜೆಟ್ ಪ್ರಕಟಣೆ ಆಗುತ್ತದೆ .

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap