ಹಾಸನ:
ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಹಾಸನಾಂಬ ದೇಗುಲದ ಬಾಗಿಲು ಇಂದು ಮಧ್ಯಾಹ್ನ ತೆರೆಯಲಾಗಿದ್ದು.ಒಂದು ವರ್ಷದ ಭಕ್ತರ ನಿರೀಕ್ಷೆ ಫಲಿಸಿದೆ ಇಂದೂ ಕೂಡ ಬಾಗಿಲು ತೆರೆದಾಗ ಇಟ್ಟಿದ್ದ ನೈವೇದ್ಯ ಹಾಗೆ ಇತ್ತು ಜೊತೆಗೆ ದೀಪವು ಉರಿಯಯುತ್ತಲೇ ಇತ್ತು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ನ.9 ರವರೆಗೆ ತೆರೆದಿರುವ ದೇಗುಲ ಇಂದು ಮತ್ತು ಕೊನೆಯ ದಿನಗಳಂದು ಸಾರ್ವಜನಿಕ ದರ್ಶನ ನಿರ್ಬಂಧಿಸಲಾಗುವುದು ಎಂದು ತಿಳಿಸಲಾಗಿದೆ . ಇನ್ನುಳಿದ 7 ದಿನಗಳು ಭಕ್ತಾದಿಗಳಿಗೆ ದರ್ಶನದ ಭಾಗ್ಯ ಸಿಗಲಲಿದೆ ಮತ್ತು ದೇವರಿಗೆ ನೈವೇದ್ಯ ನೀಡುವ ಸಮಯ ಹೊರತುಪಡಿಸಿ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ