ಬೆಂಗಳೂರು
ನಗರದ ಫ್ರೀಡಂಪಾರ್ಕ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿ ಬಂಧಿತಳಾಗಿರುವ ದೇಶದ್ರೋಹಿ ಅಮೂಲ್ಯಾ ಲಿಯೋನಾ ಪೊಲೀಸ್ ವಿಚಾರಣೆಯಲ್ಲಿ ಭಂಡತನ ಪ್ರದರ್ಶಿಸುತ್ತಿದ್ದಾಳೆ ನಾನೇನು ಕೊಲೆ ಸುಲಿಗೆ ಇನ್ನಿತರ ಅಪರಾಧ ಮಾಡಿದ್ದೇನಾ ಎಂದು ತನಿಖಾಧಿಕಾರಿಗಳನ್ನು ಪ್ರಶ್ನಿಸಿದ್ದಾಳೆ.
ಬುಧವಾರ ಬೆಳಗ್ಗೆಯಿಂದ ಆರೋಪಿ ಅಮೂಲ್ಯಾಳನ್ನು ಆಕೆ ವಾಸಿಸುತ್ತಿದ್ದ ಸ್ಥಳ ಮಹಜರು ಮಾಡಿ ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ಪೊಲೀಸರಿಗೆ ಮರುಪ್ರಶ್ನೆ ಮಾಡುತ್ತಿದ್ದು, ನಾನೇನು ಕ್ರೈಂ ಮಾಡಿದ್ದೀನಾ ನಿಮ್ಮ ಕೆಲಸವನ್ನು ನೀವು ಮಾಡಿ ಎಂದು ಉತ್ತರ ನೀಡಿ ಉದ್ದಟತನ ಮೆರೆದಿದ್ದಾಳೆ.
ಈ ನಡುವೆ ’ಫ್ರೀ ಕಾಶ್ಮೀರ’ ನಾಮಫಲಕ ಪ್ರದರ್ಶಿಸಿ, ಜೈಲು ಸೇರಿರುವ ಆರ್ದ್ರಾ ಹಾಗೂ ಅಮೂಲ್ಯ ಇಬ್ಬರೂ ಒಂದೇ ರೂಮಿನಲ್ಲಿ ಜೊತೆಯಾಗಿ ವಾಸವಾಗಿದ್ದರು ಎನ್ನುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಆರೋಪಿಗಳಿಬ್ಬರೂ ಮೊದಲೇ ಪರಿಚಿತರಾಗಿದ್ದು ಒಂದೇ ಪಿಜಿಯಲ್ಲಿ ಜೊತೆಯಾಗಿ ವಾಸಿಸುತ್ತಿದ್ದರು.ಅಮೂಲ್ಯ ಮತ್ತು ಆರ್ದ್ರಾ ೨೦೧೯ರ ಸೆಪ್ಟೆಂಬರ್‌ನಿಂದ ಜನವರಿಯವರೆಗೆ ೩ ತಿಂಗಳ ಕಾಲ ಒಂದೇ ರೂಮಿನಲ್ಲಿ ವಾಸವಾಗಿದ್ದು ಜನವರಿ ಬಳಿಕ ಆರ್ದ್ರಾ ಬೇರೆ ಪಿಜಿಯಲ್ಲಿ ವಾಸವಾಗಿದ್ದಳು
ತಾನು ಅಮೂಲ್ಯ ಜೊತೆ ವಾಸವಾಗಿದ್ದ ವಿಚಾರವನ್ನು ಆರ್ದ್ರಾ ಪೊಲೀಸರಿಂದ ಮುಚ್ಚಿಟ್ಟಿದ್ದಳು. ಅಮೂಲ್ಯ ಕೂಡ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.ಆರ್ದ್ರಾಳ ಸ್ನೇಹಿತರನ್ನು ವಿಚಾರಣೆ ನಡೆಸಿದಾಗ ಇವರಿಬ್ಬರ ನಡುವಿನ ಸಂಬಂಧ ಬಯಲಾಗಿದೆ. ಸದ್ಯಕ್ಕೆ ಇದೇ ಕಾರಣಕ್ಕಾಗಿ ಅಮೂಲ್ಯಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಇಂದು ಬೆಳಗ್ಗೆ ಪೊಲೀಸರು ಅಮೂಲ್ಯಳನ್ನು ಆಕೆಯ ಪಿಜಿ ಬಳಿಗೆ ಕರೆದೊಯ್ದು ಮಹಜರು ಮಾಡಿದ್ದಾರೆ. ಅಮೂಲ್ಯ ಲಿಯೋನಾಳನ್ನು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದ್ದು, ಹೀಗಾಗಿ ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಐದು ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
