ತುರುವೇಕೆರೆ:
ತೋಟದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ರೈತನೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಮಾಯಸಂದ್ರ ಹೋಬಳಿ ದಾಸಿಹಳ್ಳಿಯಲ್ಲಿ ನೆಡೆದಿದೆ.
ಮೃತ ರೈತ ಗೋವಿಂದಯ್ಯ (58) ಎಂದಿನಂತೆ ತನ್ನ ತೋಟಕ್ಕ ಸೋಮವಾರ ಬೆಳಿಗ್ಗೆ ಹೆಂಡತಿ ಹಾಗೂ ಕೆಲಸಗಾರನ್ನು ಕರೆದು ಕೊಂಡು ತೆರಳಿದ್ದಾರೆ. ತೋಟದಲ್ಲಿ ತೆಂಗಿನ ಮರದ ಎಡೆಮಟ್ಟೆಯನ್ನು ಸ್ವಚ್ಚಗೊಳಿಸುವ ಸಂದರ್ಬದಲ್ಲಿ ಹಾವು ಕಚ್ಚಿದ್ದು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಮದ್ಯಾಹ್ನ ರೈತನ ಹೆಂಡತಿ ಊಟಕೆ ಕರೆಯಲು ತೆರಳಿದಾಗ ಕುಸಿದು ಬಿದ್ದಿದ್ದನ್ನು ಗಮನಿಸಿ ಕೂಗಿ ಕೊಂಡಿದ್ದಾರೆ.
ಕೂಡಲೇ ಅಕ್ಕ ಪಕ್ಕದ ತೋಟದ ಜನರು ಆಗಮಿಸಿ ಬೆಳ್ಳೂರು ಆಸ್ಪತ್ರೆಗೆ ಹೋಗುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.