ತುಮಕೂರು
ಮೋಟಾರ್ ಬೈಕ್‍ಗಳ ಮುಖಾಮುಖಿ ಡಿಕ್ಕಿಯಿಂದಾಗಿ ಓರ್ವ ಅಸು ನೀಗಿ ಇಬ್ಬರು ಮಕ್ಕಳಿಗೆ ಗಾಯವಾಗಿರುವ ಘಟನೆ ಕೊರಟಗೆರೆ ತಾಲ್ಲೂಕು ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಎಸ್. ಗೊಲ್ಲಹಳ್ಳಿ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಹನುಮಂತರಾಯಪ್ಪ ಎಂದು ಗುರುತಿಸಲಾಗಿದೆ.
ಹನುಮಂತರಾಯಪ್ಪ ಅವರು ತನ್ನಿಬ್ಬರು ಮಕ್ಕಳನ್ನು ಮೋಟಾರ್ ಬೈಕ್ (ಕೆಎ-06-ಇವೈ-6350)ನಲ್ಲಿ ಕೂರಿಸಿಕೊಂಡು ಎಲೆರಾಂಪುರ ಗ್ರಾಮದ ಕಡೆಗೆ ಹೋಗುವಾಗ ಅದೇ ಸಮಯಕ್ಕೆ ಎಸ್.ಗೊಲ್ಲಹಳ್ಳಿ ಕಡೆಯಿಂದ ಬಂದ ಮೋಟಾರ್ ಬೈಕ್ (ಕೆಎ-64-ಇ-1862)ನ ಸವಾರ ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹನುಮಂತರಾಯಪ್ಪ ಅವರ ಬೈಕ್ ಡಿಕ್ಕಿ ಒಡೆದಿದ್ದಾನೆ. ಆಗ ಹನುಮಂತರಾಯಪ್ಪ ಮತ್ತವರ ಮಕ್ಕಳು ಕೆಳಕ್ಕೆ ಬಿದ್ದಿದ್ದಾರೆ. ಹನುಮಂತರಾಯಪ್ಪ ಅವರಿಗೆ ಬಲವಾದ ಪೆಟ್ಟು ಬಿದ್ದು, ಅವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಮಕ್ಕಳ ಕೈ-ಕಾಲುಗಳಿಗೆ ಪೆಟ್ಟು ಬಿದ್ದಿರುತ್ತವೆ. ಈ ಬಗ್ಗೆ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ