ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹರಿಹರ :

       ಪೌರ ಕಾರ್ಮಿಕರಿಗೆ ನಡೆಸುತ್ತಿರುವ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಬೇಕು,ಎಂದು ಪೌರಾಯುಕ್ತೆ ಶ್ರೀಮತಿ ಎಸ್ ಲಕ್ಷ್ಮಿಯವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಎಂದು ನಗರಸಭೆಯ ಸಭಾಂಗಣದಲ್ಲಿ ದಾವಣಗೆರೆ ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಹರಿಹರ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಂಯುಕ್ತಾಶ್ರಯದಲ್ಲಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ, ತಜ್ಞ ವೈದ್ಯರಿಂದ ನಗರದ ಪೌರಕಾರ್ಮಿಕರಿಗೆ ಮತ್ತು ಆರೋಗ್ಯ ಸಮಿತಿ ಸದಸ್ಯರಿಗೆ ನಡೆಸಿದ ಶಿಬಿರದಲ್ಲಿ ಮಾತನಾಡು ತ್ತಿದ್ದರು.

       ಪ್ರತಿ ವರ್ಷವೂ ಸಹ ಪೌರ ಕಾರ್ಮಿಕರಿಗೆ ಎರಡು ಬಾರಿ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗುತ್ತಿದ್ದು, ಇಂತಹ ಶಿಬಿರಗಳಿಂದ ಅವರ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ. ಪೌರ ಕಾರ್ಮಿಕರು ತಮ್ಮ ಕರ್ತವ್ಯದ ಜೊತೆಯ;ಲ್ಲಿ ತಮ್ಮಗಳ ವೈಯಕ್ತಿಕ ಶುಚಿತ್ವ ಮತ್ತು ಕೌಟುಂಬಿಕ ಶುಚಿತ್ವದ ಕಡೆ ಕೂಡಾ ಗಮನಹರಿಸಬೇಕೆಂದು ತಿಳಿಸಿದರು.ಸಂಪೂರ್ಣ ಆರೋಗ್ಯ ತಪಾಸಣಾ ಶಿಬಿರ ಗಳನ್ನು ನಿಯಮಿತವಾಗಿ ಏರ್ಪಡಿಸಬೇಕೆಂದು ಆಯೋಜಕರಿಗೆ ಮನವಿ ಮಾಡಿದರು.

      ಮುಂದುವರಿದು ಮಾತನಾಡಿದ ಅವರು ಸಂಪೂರ್ಣ ಆರೋಗ್ಯ ತಪಾಸಣಾ ಶಿಬಿರ ನಡೆಸಿದಲ್ಲಿ ತಪಾಸಣಾ ಶುಲ್ಕವನ್ನು ನಗರ ಸಭೆಯಿಂದಲೇ ಪಾವತಿಸುವುದಾಗಿ ತಿಳಿಸಿದರು. ಪೌರಕಾರ್ಮಿಕರು ತಮಗೆ ನಗರಸಭೆಯಿಂದ ನೀಡಲಾಗಿರುವ ರಕ್ಷಾ ಸಲಕರಣೆಗಳನ್ನು ತಪ್ಪದೇ ಬಳಕೆ ಮಾಡಿಕೊಳ್ಳಬೇಕು ಇಲ್ಲದೆ ಹೋದರೆ ರೋಗ ರುಜಿನಗಳಿಗೆ ಒಳಗಾಗುವಿರಿ ಎಂದು ಪೌರ ಕಾರ್ಮಿಕರಿಗೆ ಎಚ್ಚರಿಸಿದರು.

       ಶಿಬಿರದಲ್ಲಿ ನಗರಸಭೆಯ ಅಧ್ಯಕ್ಷೆ ಶ್ರೀಮತಿ ಸುಜಾತಾ ಡಿ ರೇವಣಸಿದ್ದಪ್ಪ ಮಾತನಾಡಿ ಪೌರ ಕಾರ್ಮಿಕರಿಗೆ ನೀಡುವ ಈ ಆರೋಗ್ಯ ಶಿಬಿರವು ಯಶಸ್ವಿಯಾಗಬೇಕಾದರೆ ಪೌರ ಕಾರ್ಮಿಕರೆಲ್ಲರೂ ತಪ್ಪದೇ ತಮ್ಮ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

      ಶಿಬಿರದ ಪ್ರಾರಂಭದಲ್ಲಿ ಆರೋಗ್ಯ ಇಲಾಖೆಯ ಎಂ.ವಿ.ಹೊರಕೇರಿ ಯವರು ಶಿಬಿರದ ಸಂಪೂರ್ಣ ಮಾಹಿತಿಯನ್ನು ಪೌರಕಾರ್ಮಿಕರಿಗೆ ಮತ್ತು ಆರೋಗ್ಯ ರಕ್ಷಾ ಸಮಿತಿ ಸದಸ್ಯರಿಗೆ ವಿವರಿಸಿದರು.

      ಈ ವೇಳೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳಾದ ಡಾ. ಧರಣೇಶ್ ,ಡಾ.ಪ್ರಶಾಂತ್ ,ಡಾ.ದೀಪಾ.ನಗರಸಭಾ ಸದಸ್ಯರುಗಳಾದ ಶ್ರೀಮತಿ ಪ್ರತಿಭಾ ಕುಲಕರ್ಣಿ, ಶ್ರೀಮತಿ ನಗೀನಾ ಸುಬಾನ್ ಸಾಬ್, ಸಿಬ್ಬಂದಿಗಳಾದ ರವಿ ಪ್ರಕಾಶ್ ,ಸಂತೋಷ್ ನಾಯಕ್, ಕೋಡಿ ಭೀಮರಾಯ,ಶ್ರೀಮತಿ ಕೊಟ್ರಮ್ಮ ,ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link