ತುಮಕೂರು
ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆ ಮತ್ತು ಜಿಲ್ಲಾ ಆಸ್ಪತ್ರೆಯವರ ಸಂಯುಕ್ತ ಆಶ್ರಯದಲ್ಲಿ ತುಮಕೂರು ರೈಲ್ವೆ ಸ್ಟೇಷನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಉದ್ಯೊಗಿಗಳಿಗೆ, ಕಣ್ಣಿನಿನ ಪರಿಕ್ಷೆ, ರಕ್ತದೂತ್ತಡ ಮತ್ತು ಮಧುಮೇಹ ಕಾಯಿಲೆಗಳ ತಪಾಸಣೆಯನ್ನು ಆಯೋಜಿಸಲಾಯ್ತು.
ಕನಾಟಕ ರಾಜ್ಯ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಶ್ರೀ ಎಸ್. ನಾಗಣ್ಣ ನವರು ಜೋತಿ ಬೆಳಗಿಸುವುದರ ಮುಖಾಂತರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ, ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೂಬ್ಬರು ಸಹಾ ತಮ್ಮ ಆರೋಗ್ಯ ಕಾಪಾಡುವಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಈ ಶಿಬಿರದ ಮುಖಾಂತರ ಸಂಬಂಧ ಪಟ್ಟವರಿಗೆ ಉಚಿತ ಆರೋಗ್ಯ ತಪಾಸಣೆ ಶಿಭಿರ ರೆಡ್‍ಕ್ರಾಸ್ ಸಂಸ್ಥೆಯು ಜಿಲ್ಲಾ ಆಸ್ಪತ್ರೆಯ ಸಹಯೋಗದಿಂದ ಆಯೋಜಿಸಿತು.
ಅವರು ಮಾತು ಮುಂದುವರೆಸುತ್ತ ರೆಡ್‍ಕ್ರಾಸ್ ಸಂಸ್ಥೆಯಿಂದ ಮಾಡುತ್ತಿರುವ ಅನೇಕ ಕಾರ್ಯಕ್ರಮಗಳ ಬಗ್ಗೆ ಬೆಳಕು ಚಲ್ಲಿದರು, ಜಿಲ್ಲಾ ಆರೋಗ್ಯಧಿಕಾರಿ ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ|| ಬಿ.ಆರ್. ಚಂದ್ರಿಕ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾಆಸ್ಪತ್ರೆಯ ಡಾ|| ಮಂಜುನಾಥ್ ಮತ್ತು ಅವರ ಸಿಬ್ಬಂದಿ ಶಿಬಿರವನ್ನು ನಡೆಸಿ ಕೂಟ್ಟರು. ರೈಲ್ವೆ ಇಲಾಖೆಯ ನಾಗಭೂಷಣ, ಶ್ರೀಮತಿ ನೀಲಮ್ಮ ಮತ್ತು, ಇತರರೂ ಭಾಗವಹಿಸಿದರು ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯಕ್ರಮಗಳ ಉಪಸಮಿತಿ ಅಧ್ಯಕ್ಷ ಶ್ರಿಮತಿ ಸುಭಾಷಿಣಿ ರವೀಶ್ ರವರು ಸ್ವಾಗತಿಸಿದರು ನಿರ್ದೇಶಕ ಮುಷ್ತಾಕ್ ಅಹಮದ್ ಮತ್ತು ಇತರರು ಹಾಜರಿದ್ದರು.








