ರೈತರ ಬದುಕಿನಲ್ಲಿ ಆರೋಗ್ಯವೂ ಅತಿ ಮುಖ್ಯ: ರಂಗನಾಥ್

ಕುಣಿಗಲ್

       ತಾಲ್ಲೂಕಿನಲ್ಲಿ ರೈತರ ಬದುಕಿನಲ್ಲಿ ಆರೋಗ್ಯವೂ ಅತಿ ಮುಖ್ಯವಾದ ಅಂಶವಾಗಿದ್ದು, ಇದನ್ನು ಅರಿತು ತಾಲ್ಲೂಕಿನಾದ್ಯಂತ ವಿವಿಧ ರೋಗಗಳಿಗೆ ಆರೋಗ್ಯ ಶಿಬಿರಗಳನ್ನ ನಡೆಸಲಾಗುತ್ತಿದೆ ಎಂದು ಶಾಸಕ.ರಂಗನಾಥ್ ತಿಳಿಸಿದರು.

         ಪಟ್ಟಣದ ಮಹಾತ್ಮ ಗಾಂಧಿ ಕಾಲೇಜು ಆವರಣದಲ್ಲಿ ಡಿ.ಕೆ.ಎಸ್ ಚಾರಿಟಬಲ್ ಟ್ರಸ್ಟ್ ಬೆಂಗಳೂರಿನ ರಾಜರಾಜೇಶ್ವರಿ ದಂತ ವೈದ್ಯಕೀಯ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸೆ ಮತ್ತು ಸಲಹಾ ಶಿಬಿರದಲ್ಲಿ ಮಾತನಾಡುತ್ತಾ,ಗ್ರಾಮೀಣ ಭಾಗದಲ್ಲಿ ರೈತರು,ಬಡವರು ಅನೇಕ ಆರೋಗ್ಯ ಸಮಸ್ಯೆಯಿಂದ ನರಳುತ್ತಿರುವ ಹಿನ್ನೆಲೆಯಲ್ಲಿ ನಾನೊಬ್ಬ ಶಾಸಕನಾಗಿ,ವೈದ್ಯನಾಗಿ ರೈತರ ಆರೋಗ್ಯ ಸುಧಾರಣೆಗೆ ಕ್ರಮ ವಹಿಸಲು ಮುಂದಾಗಿದ್ದು,ಈಗಾಗಲೇ ತಾಲ್ಲೂಕಿನಾದ್ಯಂತ 18 ಆರೋಗ್ಯ ಶಿಬಿರಗಳನ್ನ ನಡೆಸಿದ್ದು,ಇದರಲ್ಲಿ ಕ್ಯಾನ್ಸರ್,ಹೃದಯ,ಕಿಡ್ನಿ,ದಂತ ಸೇರಿದಂತೆ ಹಲವಾರು ರೋಗಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರನ್ನ ಕರೆತಂದು ಚಿಕಿತ್ಸೆ ನೀಡುತ್ತಿದ್ದು,ಇದರ ಸದುಪಯೋಗವನ್ನ ಗ್ರಾಮಾಂತರ ಪ್ರದೇಶದ ಬಡವರು,ರೈತರು ಉಪಯೋಗಿಸಿಕೊಳ್ಳಬೇಕೆಂದರು.

          ಈ ಪ್ರದೇಶದಲ್ಲಿ ಹಲವಾರು ರೈತರು ಆರೋಗ್ಯಕ್ಕಾಗಿ ಲಕಾಂತರ ರೂಪಾಯಿ ಖರ್ಚು ಮಾಡುತ್ತಿದ್ದು,ಇದನ್ನು ತಡೆಯಲು ನಿಮ್ಮ ಮನೆಯ ಬಾಗಿಲಿನಲ್ಲಿ ಆರೋಗ್ಯ ಶಿಬಿರಗಳನ್ನ ಆಯೋಜಿಸಲಾಗುತ್ತದೆ ಎಂದರು.ಮತ ನೀಡಿ ಶಾಸಕನಾಗಿ ಆರಿಸಿದ ಜನರ ಋಣ ತೀರಿಸಬೇಕಾಗಿದೆ,ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು,ಯಾವುದೇ ವಿರೋಧ ಪಕ್ಷದವರು ಆಕ್ಷೇಪಿಸಿದರೂ ಸಹ ಲೆಕ್ಕಿಸದೆ ಹಗಲಿರುಳು ಕೆಲಸ ಮಾಡುತ್ತಿರುತ್ತೇನೆ ಎಂದರು.

           ಅನಿಲ ಭಾಗ್ಯ,ಸಾಗುವಳಿ ಚೀಟಿ ನೀಡಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷವದರು ಹಗುರ ಮಾತುಗಳನ್ ನಿಲ್ಲಿಸಬೇಕಾಗಿದೆ , ಹೇಮಾವತಿ ವ್ಯಾಪ್ತಿಯಲಿ ಬರುವ 140 ರಸ್ತೆ ಅಭಿವೃದ್ಧಿಗೆ 80 ಕೋಟಿ ರೂಪಾಯಿ ಮಂಜೂರಾಗಿದೆ,ಈಗಾಗಲೇ ಕೆಲಸಗಳು ಆರಂಭವಾಗಿವೆ ಎಂದರು.ಕಳೆದ 25 ವರ್ಷದಿಂದ ಕುಣಿಗಲ್ ದೊಡ್ಡಕೆರೆಗೆ ಹೇಮಾವತಿ ಸಮರ್ಪಕವಾಗಿ ಹರಿಯದೇ ಅನ್ಯಾಯವಾಗಿದ್ದು,ಎಕ್ಸಪ್ರೆಸ್ ಚಾನಲ್ ನಿರ್ಮಾಣ ಮಾಡುವಂತೆ ಈಗಾಗಲೇ ಮುಖ್ಯಮಮಂತ್ರಿ ,ಜಲಸಂಪನ್ಮೂಲ ಮಂತ್ರಿಗಳನ್ನ ಭೇಟಿ ಮಾಡಿ ಮನವಿ ಸಲ್ಲಿಸುವುದರ ಜೊತೆಯಲ್ಲಿ ಜಿಲ್ಲೆಯ ಶಾಸಕರು,ಮಂತ್ರಿಗಳಿಗೆ ಮನವಿ ಮಾಡುತ್ತೇನೆಂದರು.ಪಕ್ಷಾತೀತವಾಗಿ ಕೆಲಸ ಮಾಡಲು ಎಲ್ಲರ ಸಹಕಾರ ಬೇಕಾಗಿದ್ದು,ಕುಣಿಗಲ್ ಪಟ್ಟಣದ ಅಭಿವೃಧ್ಧಿಗೆ ಮುಖ್ಯಮಂತ್ರಿಗಳಿಂದ 4 ಕೋಟಿ ಅನುದಾನ ಬಿಡುಗಡೆಯಾಗಿದೆ,ಜೊತೆಗೆ ಅಲ್ಪಸಂಖ್ಯಾತರು ವಾಸಿಸುವ ಬಡಾವಣೆಯಲ್ಲಿ ಡಾಂಬರೀಕರಣ ಕೈಗೊಳ್ಳಲು 6 ಕೋಟಿ ಬಿಡುಗಡೆಗೊಂಡಿದೆ ಎಂದು ತಿಳಿಸಿದರು.

            ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ ರವೀಂದ್ರ,ಡಾ ಸ್ವಾತಿ, ಡಾ ಸುಮಾ ರಂಗನಾಥ್, ಡಾ ಜಯಚಂದ್ರ, ಪುರಸಭಾ ಸದಸ್ಯರಾದ ರಂಗಸ್ವಾಮಿ, ಶಂಕರ್, ಜೆ.ಟಿ.ಜಗದೀಶ್, ರೆಹಮಾನ್ ಷರೀಫ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link