ಹುಳಿಯಾರು:
ಪ್ರಾಥಮಿಕ ಆರೋಗ್ಯ ಕೇಂದ್ರ, ಹುಳಿಯಾರು ಹಾಗೂ ತಾಲ್ಲೂಕ್ ಆರೋಗ್ಯ ವೈದ್ಯಾಧಿಕಾರಿಗಳ ಕಛೇರಿ, ಚಿಕ್ಕನಾಯಕನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹುಳಿಯಾರು ಪಟ್ಟಣದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಕ್ಕಳ ತಾಯಂದಿರಿಗೆ ತಾಲೂಕು ಹಿರಿಯ ಆರೋಗ್ಯ ಸಹಾಯಕಾರದ ಶ್ರೀನಿವಾಸಚಾರ್ಯ ಅವರು ಮಾತನಾಡಿ ಎದೆಯ ಹಾಲಿನ ಮಹತ್ವದ ಬಗ್ಗೆ ಪೂರಕ ಆಹಾರ ಬಗ್ಗೆ ಹಾಗೂ ಆಸ್ಪತ್ರೆಯ ಹೆರಿಗೆಯಿಂದಾಗುವ ಅನುಕೂಲಗಳ ಬಗ್ಗೆ ತಿಳಿಸಿದರಲ್ಲದೆ ಮಕ್ಕಳಗೆ ಕೊಡುವ ರೋಗ ನಿರೋಧಕ ಲಸಿಕೆಗಳನ್ನು ಕಾಲಕಾಲಕ್ಕೇ ಸರಿಯಾಗಿ ಕೊಡಿಸುವಂತೆ ತಿಳಿಸಿದರು.
ತಾಯಿಯ ವೈಯಕ್ತಿಕ ಸ್ವಚ್ಚತೆ ಬಗ್ಗೆ ಆರೋಗ್ಯ ಶಿಕ್ಷಣ ನೀಡಿದರು. ಆರೋಗ್ಯವಂತ ಮಕ್ಕಳ ಬಗ್ಗೆ ತಿಳಿಸಿದರು. ಆರೋಗ್ಯವಂತ ಮಕ್ಕಳನ್ನು ಆಯ್ಕೆ ಮಾಡಿ ಬಹುಮಾನ ಘೋಷಿಸಲಾಯಿತು.
ಇಂದಿರ ನಗರದ ಉಪಕೇಂದ್ರದಿಂದ ಮೊದಲನೆ ಬಹುಮಾನವನ್ನು ಮಹಮದ್ ಅಯಾಸ್, ದ್ವಿತೀಯ ಬಹುಮಾನವನ್ನು ಮನ್ವಿತ್, ತೃತೀಯ ಬಹುಮಾನವನ್ನು ತನುಷ್ಕ ಪಡೆದುಕೊಂಡರು.
ಮಾರುತಿ ನಗರದ ಉಪಕೇಂದ್ರದಿಂದ ಪ್ರಥ ಬಹುಮಾನವನ್ನು ತಾಲೀಬಾ, ದ್ವಿತೀಯ ಬಹುಮಾನವನ್ನು ಬಾಬು, ತೃತೀಯ ಬಹುಮಾನವನ್ನು ರಚನಾ ಅವರುಗಳು ಪಡೆದುಕೊಂಡರು.
ಹಿರಿಯ ಮಹಿಳಾ ಆರೋಗ್ಯ ಸಹಾಯಕರಾದ ಅನುಸೂಯಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಬಹುಮಾನ ದಾನಿಗಳಾದ ತಾಪಂ ಮಾಜಿ ಸದಸ್ಯೆ ರಮಾದೇವಿ ಅವರು ಮಕ್ಕಳಿಗೆ ಬಹುಮಾನ ವಿತರಿಸಿದರು. ಅಂಗನವಾಡಿ ಕಾರ್ಯಕರ್ತೆ ಪೂರ್ಣಮ್ಮ, ಶಬಾನ, ಎಎನ್‍ಎಂಂಗಳಾದ ಮಹಾಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಪುಷ್ಪಾ, ಅಬಿದಾಬಿ, ಮೆಹಬೂಬ್ ಜಾನ್, ಗ್ರಾಪಂ ಮಾಜಿ ಸದಸ್ಯೆ ಹಸೀನಾಬಾನು, ಶಿಕ್ಷಕ ಸೋಮಶೇಖರ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ