ಹೊನ್ನಾಳಿ:
ತಾಲೂಕಿನಾಧ್ಯಂತ ದಿನ ಬಿಟ್ಟು ದಿನ ಮತ್ತೆ ವರ್ಷಧಾರೆ ಚುರುಕಾಗಿದೆ,ಕಳೆದ ಎರಡು ದಿನಗಳಿಂದ ನಸೂಕಿನ ವೇಳೆ ಮಳೆಯಾಗುತ್ತಿದೆ ಆದರೆ ಯಾವುದೇ ಬೆಳೆಗಳಿಗೆ ಹಾನಿಯಾದ ಬಗೆ ವರದಿಯಾಗಿಲ್ಲ. ಬೆಳಗ್ಗೆ ಬಿಡುವು ಕೊಡುವ ಮಳೆ ರಾತ್ರಿಯಾದ ಕೂಡಲೆ ಪ್ರಾರಂಭವಾಗುತ್ತದೆ.
ಮಳೆ ವಿವರ : ಹೊನ್ನಾಳಿ,11.4.ಸವಳಂಗ 40.2.ಬೆಳಗುತ್ತಿ 28.7.0.ಹರಳಹಳ್ಳಿ12.8. ಗೋವಿನಕೋವಿ 19.6.ಕುಂದುರು 7.5. ಸಾಸ್ವೇಹಳ್ಳಿ 12.6.ಮಿ.ಮೀಟರ್‍ನಷ್ಟು ಮಳೆಯಾಗಿದೆ. ಮಲೆನಾಡ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ನ್ಯಾಮತಿ ತಾಲೂಕಿನ ಸವಳಂಗ ಹಾಗೂ ಬೆಳಗುತ್ತಿ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಇಡೀ ರಾತ್ರಿ ಮಳೆ ಧಾರಕಾರವಾಗಿ ಸುರಿದಿದೆ.
ಪರಿಹಾರ ಚೆಕ್ ವಿತರಣೆ :
ಕಳೆದ ಹಲವಾರು ದಿನಗಳಿಂದ ಬಿದ್ದ ಬಾರೀ ಮಳೆಯಿಂದ ಬಾಗಶಃ ಹಾನಿಯಾದ ಮನೆಗಳಿಗೆ ಪರಿಹಾರದ ಚೆಕ್‍ನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಮೂಲಕ ವಿತರಿಸಿದ್ದೇವೆ ಎಂದು ತಹಸೀಲ್ದಾರ್ ತುಷಾರ್ ಬಿ ಹೊಸೂರ ತಿಳಿಸಿದರು.
ಹೊನ್ನಾಳಿ ತಾಲೂಕಿನ 146 ಮನೆಗಳಿಗೆ ತಲಾ 25 ಸಾವಿರದಂತೆ 36.650 ಲಕ್ಷ,ತೀವ್ರ ಹಾನಿಯಾದ 6 ಮನೆಗಳಿಗೆ ತಲಾ ಒಂದು ಲಕ್ಷದಂತೆ 6 ಲಕ್ಷ, ಮನೆಯಲ್ಲಿದ್ದ ಪಾತ್ರೆ ಪಗಡಗಳನ್ನು ಕೊಂಡುಕೊಳ್ಳಲ್ಲು 3.70 ಲಕ್ಷ,ಮೀನುಗಾರ ಕುಟುಂಬಗಳಿಗೆ ತೆಪ್ಪ ಕೊಳ್ಳಲ್ಲು 2.65 ಲಕ್ಷ ಸೇರಿದಂತೆ ಒಟ್ಟು 48.85 ಲಕ್ಷ ಪರಿಹಾರವನ್ನು ಈಗಾಗಲೆ ವಿತರಿಸಿದ್ದೇವೆ ಎಂದು ತಿಳಿಸಿದ್ದಾರೆ. ನ್ಯಾಮತಿ ನ್ಯಾಮತಿ ವರದಿ : ನ್ಯಾಮತಿ ತಾಲೂಕಿನಲ್ಲಿ ಮಳೆಯಿಂದ ಹಾನಿಯಾದ 72 ಮನೆಗಳಿಗೆ 22.66 ಲಕ್ಷ ರೂಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ