ಈ ವಾರ ರಾಜ್ಯಾದ್ಯಂತ ಭಾರಿ ಮಳೆ

ಬೆಂಗಳೂರು:

     ರಾಜ್ಯಾದ್ಯಂತ ಈ ವಾರ ಹೆಚ್ಚಿನ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಉಸ್ತುವಾರಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.ಈ ಕುರಿತು ಮಾತನಾಡಿದ ಅವರು, ಮುಂಗಾರು ಎಂದಿನಂತೆ, ವಾಡಿಕೆಯಂತೆ ಜೂನ್ 1 ರಂದು ಕೇರಳ ರಾಜ್ಯವನ್ನು ಪ್ರವೇಶ ಮಾಡಿದೆ. ಆದರೆ ಮುಂಗಾರು ದುರ್ಬಲವಾದ ಕಾರಣ ರಾಜ್ಯಕ್ಕೆ ಬರುವುದು ಸ್ವಲ್ಪ ವಿಳಂಬವಾಗಿತ್ತು ಎಂದಿದ್ದಾರೆ. 

     ಕರಾವಳಿ, ದಕ್ಷಿಣ ಒಳನಾಡು, ಮಲೆನಾಡು ಪ್ರದೇಶಕ್ಕೆ ಇದೇ 4 ಮತ್ತು 5 ರಂದು ಮುಂಗಾರು ಆಗಮನವಾಗಿದ್ದು ಅನೇಕ ಕಡೆ ಮಳೆಯಾಗಿದೆ. ರಾಜ್ಯಾದ್ಯಂತ ಈ ವಾರ ಹೆಚ್ಚಿನ ಮಳೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link