ಚಿತ್ರದುರ್ಗ;
ನನ್ನ ಅಕ್ಕಳಿಗೆ ಸಾವು ಬಂದದ್ದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿದೆ. ಯಾರದೋ ತಪ್ಪಿಗೆ ಆಕೆ ಜೀವ ಕಳೆದುಕೊಂಡಳು. ರಸ್ತೆಗಳು ಸರಿಯಾಗಿ ನಿರ್ಮಾಣವಾಗಿಲ್ಲ, ವೇಗದ ಗಾಡಿಗಳ ಮುಂದೆ ನಮ್ಮ ಸಣ್ಣ ಗಾಡಿಗೆ ಡಿಕ್ಕಿಯಾಯಿತು. ಅವಳ ನೆನಪಲ್ಲಿ ನಮ್ಮ ತಾಯಿ, ತಂದೆ, ದುಃಖಿತರಾಗಿದ್ದಾರೆ, ಅವಳ ನೆನಪಿಗೋಸ್ಕರ ನಾವೆಲ್ಲರು ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳೋಣ ಎಂದು ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಮೃತ ಅಮೃತಾಳ ಸಹೋದರಿ ಅಂಕಿತಾ ದುಃಖತಪ್ತಳಾಗಿ ಮಾತನಾಡಿದಳು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್, ವಿಜ್ಞಾನ ಕೇಂದ್ರ, ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ವಿಜ್ಞಾನ ಕಾಲೇಜ್, ರೋಟರಿ, ಇನ್ನರ್ ವೀಲ್, ವಾಸವಿ, ಪತಂಜಲಿ ಯೋಗ, ಬುಲೆಟ್, ಯಮಹಾ ಸಂಯುಕ್ತವಾಗಿ ಆಯೋಜಿಸಿದ್ದ ಮಕ್ಕಳಿಂದ ಹೆಲ್ಮೆಟ್ ಜನ ಜಾಗೃತಿ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದಳು.
ಮೃತ ಅಮೃತಾಳ ತಂದೆ ಮಂಜುನಾಥ ರೆಡ್ಡಿ ಮಾತನಾಡಿ ರಸ್ತ ಸುರಕ್ಷಿತವಾಗಿದ್ದರೆ ನನ್ನ ಮಗಳು ಸಾಯುತ್ತಿರಲ್ಲಿ, ತಪ್ಪುಗಳಿಂದ ಕೂಡಿದ ಜೆ.ಎಂ.ಐ.ಟಿ. ವೃತ್ತ ಜನರನ್ನ ಬಲಿ ತೆಗೆದುಕೊಳ್ಳುತ್ತಿದೆ, ಕೆಳ ಸೇತುವೆ, ಸೇವಾ ರಸ್ತೆಗಳಿಲ್ಲದ ಕಾರಣ ಅಪಘಾತಗಳು ಹೆಚ್ಚಾಗಿ ನೆಡೆಯುತ್ತಿವೆ. ಪ್ರತಿಯೊಂದು ಅಪಘಾತವಾದ ನಂತರ ಸರಕಾರ ಕ್ರಮ ಕೈಗೊಂಡಿದ್ದರೆ ನನ್ನ ಮಗಳು ಬದುಕಿರುತ್ತಿದ್ದಳು, ಇನ್ನೋ ಮುಂದಾದರು ಯಾರ ಸಾವು ಬರದಂತೆ ಸರಕಾರ ಕ್ರಮಕೈಗೊಳ್ಳಲಿ ಎಂದು ಶೋಕವ್ಯಕ್ತಪಡಿಸಿದರು.
ಪ್ರಾಂಶುಪಾಲರಾದ ಶ್ರೀ. ಗಣೇಶ್ ಎಂ. ಮಾತನಾಡಿ ನನ್ನ ಜೀವನದಲ್ಲೂ ರಸ್ತೆ ಅಪಘಾತ ದುಃಖತಂದಿದೆ, ದುಡಿಯುವ ಕುಟುಂಬದ ವ್ಯಕ್ತಿ ಮರಣ ಹೊಂದಿ, ನಾವು ಬಹಳಷ್ಟು ಸಂಜಷ್ಟಗಳನ್ನ ಎದುರಿಸಿದ್ದೇವೆ, ಅದೇ ರೀತಿ ಮತ್ತೆ ಬೇರೆಯವರಿಗೆ ಆಗದಂತೆ ನಾವು ತಡೆಯಬೇಕು, ಅದಕ್ಕಾಗಿ ಹೆಲ್ಮೆಟ್ ಧರಿಸಿ ಗಾಡಿ ಚಲಾಯಿಸಿ ಎಂದರು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕನವರು ಮಾತನಾಡಿ ರಸ್ತೆ ಅಪಘಾತದಿಂದ ಸಾವಿನ ದವಡೆಯಿಂದ ಹೊರಬಂದ ಅಂಕಿತ ಜನರ ಮನವಲಿಸಿ, ಮೃತ ಅಮೃತಳ ಆತ್ಮಕ್ಕೆ ಶಾಂತಿ ತರುವ ಕೆಲಸ ಮಾಡಲಿ, ಅವಳ ಆತ್ಮ ಗಟ್ಟಿಯಾಗಲಿ, ಕಷ್ಟ ಸಂಕಷ್ಟಗಳನ್ನ ಎದುರಿಸಿ, ಆತ್ಮದ ಬಲದಿಂದ ಸಾದನೆಗೈಯಲಿ, ಅವರ ಕುಟುಂಬಕ್ಕೆ ನೋವನ್ನ ಸಹಿಸಿಕೊಳ್ಳಲು ದೇವರು ಶಕ್ತಿ ನೀಡಲಿ ಎಂದು ಆಂಕಿತಾಳಿಗೆ ಅಣೆಗೆ ಗಂಧದ ಲೇಪನವಿಟ್ಟು, ತಲೆಗೆ ಸುಗಂಧ ದ್ರವ್ಯ ಸಿಂಪಡಿಸಿ, ಅಶೀರ್ವಚನ ನೀಡಿ ನೂರ್ಕಾಲ ಬದುಕಲಿ ಎಂದು ಆಶೀರ್ವದಿಸಿ, ಅಮೃತಾಳ ನೆನಪಿಗಾಗಿ ಶ್ರದ್ದಾಂಜಲಿ ಅರ್ಪಿಸಿದರು.
ಪರಿಸರ ತಜ್ಞರು ಮತ್ತು ವಿಜ್ಞಾನಿಗಳಾದ ಪ್ರೋ, ಡಾ|| ಕೆ. ಕೆ. ಕಾಮಾನಿ, ಪರಿಸರವಾದಿ ಡಾ|| ಹೆಚ್.ಕೆ. ಎಸ್. ಸ್ವಾಮಿ ಇನ್ನರ್ ವೀಲ್ ಸಂಸ್ಥೆಯ ಶ್ರೀಮತಿ ರೀನಾ, ಕವಿತಾ ಜೈನ್, ಪತಂಜಲಿ ಯೋಗ ಸಂಸ್ಥೆಯ ಶ್ರೀ ರವಿ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ವಿಜಯ, ಶಿವಕುಮಾರ್, ನಾಗರಾಜ್, ರಾಜು, ನಂದಿತಾ, ಬುಲೆಟ್ ಅಂಗಡಿಯ ಶಶಿ, ಗಿರೀಶ್, ಉಪಸ್ಥಿತರಿದ್ದರು. ಸಾವಿರಕ್ಕೂ ಹೆಚ್ಚು ಮಕ್ಕಳು, ಹೆಲ್ಮೆಟ್‍ನ ಘೋಷಣ ಫಲಕಗಳನ್ನ ಪ್ರದರ್ಶಿಸಿದರು. ನಗರದ ವೃತ್ತಗಳಲ್ಲಿ ಹೆಲ್ಮೆಟ್ ಬಗ್ಗೆ ಬ್ಯಾನರ್‍ಗಳನ್ನ ಕಟ್ಟಲು ಏರ್ಪಾಡು ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
